ತುಮಕೂರು : ಸ್ಮಾರ್ಟ್‍ಸಿಟಿ ಮುಖ್ಯಸ್ಥ ಭೂಬಾಲನ್ ವರ್ಗಾವಣೆಗೆ ಬೇಸರ!!

ತುಮಕೂರು:

      ತುಮಕೂರು ನಗರ ಹಾಗೂ 15ನೇ ವಾರ್ಡ್‍ನ ಅಭಿವೃದ್ಧಿಗೆ ಶ್ರಮಿಸಿದ್ದ ಪಾಲಿಕೆ ಆಯುಕ್ತರು ಹಾಗೂ ಸ್ಮಾರ್ಟ್‍ಸಿಟಿ ಮುಖ್ಯಸ್ಥರಾಗಿದ್ದ ಭೂಬಾಲನ್ ಅವರು ಬಾಗಲಕೋಟೆ ಸಿಇಒ ಆಗಿ ವರ್ಗಾವಣೆಗೊಂಡಿರುವುದು ಬೇಸರದ ಸಂಗತಿ, ಇನ್ನು ಸ್ವಲ್ಪ ಕಾಲ ತುಮಕೂರಿನಲ್ಲಿ ಉಳಿದುಕೊಂಡಿದ್ದರೆ ತುಮಕೂರು ನಗರ ಸ್ಮಾರ್ಟ್ ಆಗುತ್ತಿತ್ತು ಎಂದು 15ನೇ ವಾರ್ಡ್ ಪಾಲಿಕೆ ಸದಸ್ಯ ಗಿರಿಜಾ ಧನಿಯಾಕುಮಾರ್ ತಿಳಿಸಿದ್ದಾರೆ.

      ವರ್ಗಾವಣೆಗೊಂಡಿರುವ ಆಯುಕ್ತರಾದ ಭೂಬಾಲನ್ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, 15ನೇ ವಾರ್ಡ್‍ನ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿದ್ದ ಭೂಬಾಲನ್ ಅವರು, ಪಾರ್ಕ್ ಅಭಿವೃದ್ಧಿ ಹಾಗೂ 30 ವರ್ಷಗಳಿಂದ ಹದಗೆಟ್ಟಿದ್ದ ರೈಲ್ವೆಸ್ಟೇಷನ್ ರಸ್ತೆಯನ್ನು ಅಭಿವೃದ್ಧಿಪಡಿಸಲು ಸಹಕಾರ ನೀಡಿದ್ದರು, ರಾಯಗಾಲುವೆಯನ್ನು ತೆರವುಗೊಳಿಸಿ ಸ್ಲಾಬ್ ಹಾಕುವ ಕಾರ್ಯಕ್ಕೂ ಚಾಲನೆ ನೀಡಿದ್ದರು.

      ಜನರಿಗಾಗಿ ಕೆಲಸ ಮಾಡುತ್ತಿದ್ದ ಭೂಬಾಲನ್ ಅವರು ಬಾಗಲಕೋಟೆ ಸಿಇಒ ಆಗಿ ವರ್ಗಾವಣೆಗೊಂಡಿದ್ದು, ಅವರಿಗೆ ಇನ್ನಷ್ಟು ಯಶಸ್ಸು ದೊರೆಯಲಿ ಎಂದು 15ನೇ ವಾರ್ಡ್‍ನ ಸಾರ್ವಜನಿಕರ ಪರವಾಗಿ ಹಾರೈಸಿದರು.

(Visited 6 times, 1 visits today)

Related posts

Leave a Comment