ಮೃತ ತಹಸೀಲ್ದಾರ್ ಸಹಿ ದುರುಪಯೋಗ : ನಕಲಿ ದಾಖಲೆ ಸೃಷ್ಟಿಸಿ ಜಮೀನು ಗುಳುಂ

ಮಧುಗಿರಿ:

     ಮಧುಗಿರಿ ಪಟ್ಟಣದ 14ನೇವಾರ್ಡ್‍ನಲ್ಲಿ ಡಿವೈಎಸ್‍ಪಿ ಆಫೀಸ್ ಹಿಂಬಾಗ ನಕಲಿ ದಾಖಲೆ ಸೃಷ್ಟಿಸಿ ಜಮೀನು ಗುಳುಂ ಮಾಡಿರುವ ಘಟನೆ ಜರುಗಿದೆ.

      ಜಿಲ್ಲಾಧಿಕಾರಿಗಳಿಂದ ಆಶ್ರಯ ನಿವೇಶ ನಕ್ಕಾಗಿ ಮಧುಗಿರಿ ಸರ್ವೆ ನಂ.15 ರಲ್ಲಿ 35ಗುಂಟೆ ಜಮೀನು ಮಂಜೂರಾಗಿದ್ದು, ಕೆಲ ಪಟ್ಟಭದ್ರ ಹಿತಾಸಕ್ತಿಗಳು ನಕಲಿ ದಾಖಲೆ ಸೃಷ್ಟಿಸಿ ಪುರಸಭೆ ಯಿಂದ ಖಾತೆ ಹಾಗು ಹಕ್ಕುಪತ್ರ ಪಡೆದಿದ್ದಾರೆಂದು ಆರೋಪಿಸಿ ಮಧುಗಿರಿ ಪುರಸಭೆಯ 14ನೇ ವಾರ್ಡ್ ವಾಲ್ಮೀಕಿ ಬಡಾವಣೆ (ಮಂಡರಕಾಲೋನಿ) ನಿವಾಸಿಗಳು ಈ ಹಿಂದೆ ತಹಸೀಲ್ದಾರ್ ರವರಿಗೆ ಇಲ್ಲಿನ ನಿವಾಸಿಗಳು ಮನವಿಯನ್ನು ನೀಡಿದ್ದಾರೆ. ಹಾಗು ಇದೇ ಜಮೀನು ನಲ್ಲಿ ವಾಲ್ಮಿಕಿ ಸಮುದಾಯಭವನ ನಿರ್ಮಾಣ ಮಾಡಿಕೋಡಿ ಎಂದು ಉಪವಿಭಾಗಾಧಿಕಾರಿ ಕಛೇರಿ ಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

      ಮಧುಗಿರಿ ಗ್ರಾಮದ ಸರ್ವೆ ನಂಬರ್ 15ರಲ್ಲಿ ಕೆಲವು ಪಟ್ಟಾಭದ್ರ ಹಿತಾಸಕ್ತಿಗಳು ಮೃತ ತಹಶೀಲ್ದಾರ್ ಒಬ್ಬರ ಸಹಿ ದುರುಪಯೋಗಪಡಿಸಿಕೊಂಡು ನಕಲಿ ದಾಖಲೆ ಸೃಷ್ಟಿಸಿಕೊಂಡಿದ್ದು ಅಲ್ಲದೆ ಈಗ ಅದೇ ಜಾಗದಲ್ಲಿ ಶೆಡ್ ನಿರ್ಮಿಸಿ ಅಂಗಡಿಗಳನ್ನು ಇಡುತ್ತಿದ್ದಾರೆ.

      ಅಲ್ಲದೇ ಲಕ್ಷಾಂತರ ರೂಪಾಯಿಗೆ ನಿವೇಶನಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ, ಜಮೀನಿಗೆ ಹೊಂದಿಕೊಂಡಂತೆ ಅರ್ಹ ಫಲಾನುಭವಿಗಳಿಗೆ ನಿವೇಶನ ಹಾಗು ವಾಲ್ಮೀಕಿ ಸಮೂದಾಯ ಭವನ ನಿರ್ಮಿಸಿದರೆ ಇಲ್ಲಿನ ನಿವಾಸಿಗಳಿಗೆ ಅನುಕೂಲವಾಗುತ್ತದೆ.

(Visited 5 times, 1 visits today)

Related posts

Leave a Comment