ತುಮಕೂರು : 

      ಸಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಿದ್ದ 15 ಅಭ್ಯರ್ಥಿಗಳ ಭವಿಷ್ಯ ಅಡಕವಾಗಿರುವ ಮತಯಂತ್ರಗಳನ್ನು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಿದ್ದಪಡಿಸಲಾಗಿರುವ 2 ಭದ್ರತಾ ಕೊಠಡಿಗೆ ಸ್ಥಳಾಂತರಿಸಿ ಸೂಕ್ತ ಪೆÇಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

      ಸಿರಾ ವಿಧಾನಸಭಾ ಕ್ಷೇತ್ರ ಉಪಚುನಾವಣೆಯ ಮತದಾನ ನಿನ್ನೆ ಸಂಜೆ 6 ಗಂಟೆವರೆಗೆ ನಡೆದ ನಂತರ 330 ಮತಗಟ್ಟೆಗಳ ಇವಿಎಂ ಯಂತ್ರಗಳು ಸಿರಾ ಜ್ಯೋತಿನಗರದಲ್ಲಿರುವ ಮಸ್ಟರಿಂಗ್ ಕೇಂದ್ರಕ್ಕೆ ಬಂದು ಸೇರಿದ ನಂತರ ನಿನ್ನ ಬೆಳಗಿನ ಜಾವ ತುಮಕೂರಿನ ಬಿ.ಹೆಚ್. ರಸ್ತೆಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ತಂದು 2 ಭದ್ರತಾ ಕೊಠಡಿಗಳಲ್ಲಿ ಇಡಲಾಗಿದೆ.

    ಮತ ಯಂತ್ರಗಳಿರುವ 2 ಭದ್ರತಾ ಕೊಠಡಿಗಳಿಗೆ ಅಭೂತಪೂರ್ವ ಬಿಗಿ ಪೆÇಲೀಸ್ ಬಂದೋಬಸ್ತ್‍ನೊಂದಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ. ಕೆ ವಂಶಿಕೃಷ್ಣ, ಚುನಾವಣಾ ಸಾಮಾನ್ಯ ವೀಕ್ಷಕರಾದ ಬಿ.ಮಹೇಶ್ವರಿ, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಚುನಾವಣಾಧಿಕಾರಿ ಡಾ.ಕೆ.ನಂದಿನಿದೇವಿ. ಸಹಾಯಕ ಚುನಾವಣಾಧಿಕಾರಿ ಮಮತಾ, ಡಿವೈಎಸ್ಪಿಗಳಾದ ತಿಪ್ಪೇಸ್ವಾಮಿ, ಕುಮಾರಪ್ಪ, ಪ್ರವೀಣ್ ಅವರ ಸಮ್ಮುಖದಲ್ಲಿ ಬೆಳಿಗ್ಗೆ 9 ಗಂಟೆಯಲ್ಲಿ ಸೀಲ್ ಮಾಡಲಾಯಿತು.

       ಈ ಭದ್ರತಾ ಕಾರ್ಯಕ್ಕಾಗಿ ಕೇಂದ್ರದ ಸಿಎಸ್‍ಎಫ್ ತುಕಡಿ, ಪ್ಯಾರಾ ಮಿಲಿಟರಿ ಪಡೆ, ಸಿಎಸ್‍ಎಫ್‍ನ 1 ಇನ್ಸ್‍ಪೆಕ್ಟರ್, 1 ಸಬ್‍ಇನ್ಸ್‍ಪೆಕ್ಟರ್, 31 ಮಂದಿ ಕಾನ್ಸ್‍ಸ್ಟೇಬಲ್‍ಗಳನ್ನು ನಿಯೋಜಿಸಲಾಗಿದೆ.

      ಮತ ಎಣಿಕೆ ಕಾರ್ಯ ನಡೆಯುವ ನ. 10 ರವರೆಗೆ ಈ ಭದ್ರತಾ ಸಿಬ್ಬಂದಿಗಳು ದಿನದ 24 ಗಂಟೆಯೂ ಪಾಳಿ ವ್ಯವಸ್ಥೆ ಮೇಲೆ ಕಾರ್ಯನಿರ್ವಹಿಸಲಿದ್ದಾರೆ.
ಮತಯಂತ್ರಗಳಿರುವ ಭದ್ರತಾ ಕೊಠಡಿಗೆ ಸೀಲ್ ಮಾಡಿದ ನಂತರ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್, ಭದ್ರತಾ ಕೊಠಡಿಯನ್ನು ಬೆಳಿಗ್ಗೆ 9 ಗಂಟೆಗೆ ಸೀಲ್ ಮಾಡಲಾಗಿದೆ. ಕೇಂದ್ರದ ಪೆÇಲೀಸರ ತಂಡ, ರಾಜ್ಯ ಪೆÇಲೀಸರು ಹಾಗೂ ಹಿರಿಯ ನೋಡಲ್ ಅಧಿಕಾರಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದರು.

       ನ. 10 ರಂದು ಈ ಭದ್ರತಾ ಕೊಠಡಿಯನ್ನು ತೆರೆಯ ಲಾಗುವುದು. ಒಂದು ವೇಳೆ ಅನಿವಾರ್ಯ ಪರಿಸ್ಥಿತಿ ಎದುರಾದರೆ ಆಗ ಎಲ್ಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಗಮನಕ್ಕೆ ತಂದು ಭದ್ರತಾ ಕೊಠಡಿಯನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು.

      ಸಿರಾ ವಿಧಾನಸಭಾ ಉಪಚುನಾವಣೆಗೆ ಶೇ. 84.54 ರಷ್ಟು ಮತದಾನ ನಡೆಯುವ ಮೂಲಕ ಅತಿ ಹೆಚ್ಚು ಮತದಾನ ನಡೆದಿದೆ. ಕಳೆದ 2018 ರಲ್ಲಿ ಸಿರಾ ವಿಧಾನಸಭಾ ಕ್ಷೇತ್ರದಲ್ಲಿ ಶೇ. 84 ರಷ್ಟು ಮತದಾನ ನಡೆದಿತ್ತು. ಹಾಗೆಯೇ ಲೋಕಸಭಾ ಚುನಾವಣೆಯಲ್ಲೂ ಶೇ. 74 ಮತದಾನ ನಡೆದಿತ್ತು ಎಂದರು.

      ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಮಾತನಾಡಿ, ಸಿರಾ ಕ್ಷೇತ್ರದ ಉಪಚುನಾವಣೆಯ ಮತಯಂತ್ರಗಳನ್ನು ಇಟ್ಟಿರುವ ಭದ್ರತಾ ಕೊಠಡಿಯ ಭದ್ರತೆ ಕಾರ್ಯಕ್ಕಾಗಿ ಕೇಂದ್ರದ ಸಿಎಸ್‍ಎಫ್ ಪಡೆ, ಪ್ಯಾರಾ ಮಿಲಿಟರಿ ಪಡೆ ಹಾಗೂ ನಾಗರಿಕ ಪೆÇಲೀಸರನ್ನು ನಿಯೋಜಿಸಲಾಗಿದ್ದು, ನ. 10 ವರೆಗೂ ಭದ್ರತಾ ಕಾರ್ಯದಲ್ಲಿ ಪೆÇಲೀಸರು ಕಾರ್ಯನಿರ್ವಹಿಸಲಿದ್ದಾರೆ ಎಂದರು.

(Visited 4 times, 1 visits today)