ನಾಮಿನಿ ಸದಸ್ಯರು ಕೂಡ ಜನರ ಸಮಸ್ಯೆ ಬಗೆಹರಿಸಲಿ : ಶಾಸಕ

ತುಮಕೂರು : 

      ನಗರಪಾಲಿಕೆ ಗೆ ನೇಮಕಗೊಂಡಿರುವ ನಾಮಿನಿ ಸದಸ್ಯರು ತಮ್ಮ ಇತಿಮಿತಿಯೊಳಗೆ ಸಾಧ್ಯವಾದಷ್ಟು ಮಟ್ಟಿಗೆ ಜನರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಿ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಸಲಹೆ ನೀಡಿದ್ದಾರೆ.

       ನಗರದ ವಿಘ್ನೇಶ್ವರ ಕಂಪರ್ಟ್‍ನಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ನಗರಪಾಲಿಕೆ ಯ ನೂತನ ನ್ಯಾಮಿನಿ ಸದಸ್ಯರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು, ನಗರದಲ್ಲಿ ಕಸವಿಲೇವಾರಿ , ರಾಜಗಾಲುವೆಗಳ ಒತ್ತುವರಿ ತೆರವು,ಈ ಹಿಂದೆ ನಡೆದಿರುವ ಅಕ್ರಮ ಖಾತೆಗಳ ಕುರಿತು ಮಾಹಿತಿ ಕಲೆ ಹಾಕಿ, ಜನರ ಮುಂದಿಡುವ ಕೆಲಸವನ್ನು ನಾಮಿನಿ ಸದಸ್ಯರು ಅದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಬೇಕೆಂದರು.

      ಕೇಂದ್ರ ಸರಕಾರ ಇಡೀ ದೇಶದಲ್ಲಿಯೇ ವಿದ್ಯುತ್ ಉಳಿತಾಯದ ಹಿನ್ನೆಲೆಯಲ್ಲಿ ಬೀದಿ ದೀಪಗಳಿಗೆ ಎಲ್.ಇ.ಡಿ ಬಲ್ಪ್ ಅಳವಡಿಕೆ ಮಾಡಲಾಗುತ್ತಿದೆ. ಸ್ಮಾರ್ಟ್ ಸಿಟಿ ಅನುದಾನ ದಲ್ಲಿ ಕಂಭ ಮತ್ತು ಲೈನ್ ಎಳೆದಿರುವ ಕಡೆ ಎಲ್ ಇ ಡಿ ಬಲ್ಪ್ ಅಳವಡಿಸಲು ಟೆಂಡರ್ ನೀಡಿದೆ. ನಗರಪಾಲಿಕೆ ಯಲ್ಲಿ ಅಷ್ಟು ಹಣವಿಲ್ಲ.ಇದನ್ನು ಸದಸ್ಯರು ಅರ್ಥ ಮಾಡಿಕೊಳ್ಳಬೇಕೆಂದು ಶಾಸಕರು ತಿಳಿಸಿದರು.

     ನಗರಪಾಲಿಕೆಯ ಬಿಜೆಪಿ ಪಕ್ಷದ ಸದಸ್ಯರು ವಿರೋಧಪಕ್ಷಗಳ ಸದಸ್ಯರು ಪ್ರಶ್ನೆಗಳಿಗೆ ದಾಖಲೆ ಸಮೇತ ಉತ್ತರ ನೀಡುವಂತೆ ಸಲಹೆ ನೀಡಿದ ಶಾಸಕರು,ವಿರೋಧ ಪಕ್ಷಗಳ ಸದಸ್ಯರಿಗೆ ಟೀಕಿಸುವ,ತಪ್ಪುಗಳನ್ನು ಎತ್ತಿ ಹಿಡಿಯುವ ಅಧಿಕಾರವಿದೆ.ಆದರೆ ಸರಿಯಾದ ತಿಳುವಳಿಕೆ ಇಲ್ಲದೆ,ದಾಖಲೆ ರಹಿತ ಆರೋಪ ಮಾಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ.ಕೇವಲ ತಪ್ಪು ಕಂಡುಹಿಡಿಯುವುದೇ ಮುಖ್ಯವಲ್ಲ.ಪರಿಹಾರವು ಅಗತ್ಯ.ಹಾಗಾಗಿ ಬಿಜೆಪಿ ಸದಸ್ಯರು ಒಗ್ಗೂಡಿ, ದಾಖಲೆ ಸಮೇತ ನಗರದಲ್ಲಿ ಆಗುತ್ತಿರುವ ಉತ್ತರ ನೀಡುವ ಕೆಲಸ ಮಾಡಬೇಕೆಂದರು.

      ಈ ಹಿಂದಿನ ವರ್ಷಗಳಿಗೆ ಹೊಲಿಕೆ ಮಾಡಿದರೆ ಕಳೆದ ಎರಡು ವರ್ಷಗಳಲ್ಲಿ ಅಭಿವೃದ್ದಿ ಕೆಲಸಗಳು ಬರದಿಂದ ಸಾಗುತ್ತಿವೆ. ಸರಕಾರಕ್ಕೆ ವಾಪಸ್ಸಾಗಿದ್ದ 125 ಕೋಟಿ ರೂಗಳನ್ನು ಸರಕಾರ ಪುನಃ ನೀಡಿದೆ.ಅಲ್ಲದೆ ವಿವೇಚನಾ ಕೋಟಾದಲ್ಲಿ 45 ಕೋಟಿ ರೂ ಹಾಗೂ ಸ್ಮಾರ್ಟ್‍ಸಿಟಿಯ 900 ಕೋಟಿ ರೂ ಹೀಗೆ ಹಲವು ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿದ್ದು, ಇವುಗಳಲ್ಲಿ ಗುಣಮಟ್ಟ ಕಾಯ್ದುಕೊಂಡರೆ, ಹತ್ತಾರು ವರ್ಷ ಇದರ ಉಪಯೋಗ ಪಡೆದುಕೊಳ್ಳಬಹುದು. ಈ ನಿಟ್ಟಿನಲ್ಲಿ ನಾಮಿನಿ ಸದಸ್ಯರು ಅಗತ್ಯ ದಾಖಲೆಗಳ ಸಂಗ್ರಹಿಸಿ,ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ,ಉತ್ತಮ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳುವಂತೆ ಸಲಹೆ ನೀಡಿದರು.
26ನೇ ವಾರ್ಡಿನ ಸದಸ್ಯ ಮಲ್ಲಿಕಾರ್ಜುನ ಯ್ಯ ಮಾತನಾಡಿ,ನಾಮಿನಿ ಸದಸ್ಯರಿಗೆ ಇಂತಹ ದ್ದೇ ವಾರ್ಡು ಎಂಬುದು ಇಲ್ಲ. 35 ವಾರ್ಡುಗಳಲ್ಲಿಯೂ ಕೆಲಸ ಮಾಡಲು ಅವಕಾಶ ಇದೆ.ಇದರ ಸದುಪಯೋಗ ಪಡಿಸಿಕೊಳ್ಳಲು ಸಲಹೆ ನೀಡಿದರು.

       ಪ್ರಾಸ್ತಾವಿಕ ವಾಗಿ ಮಾತನಾಡಿದ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಧನಿಯಕುಮಾರ್, ಪ್ರಾಮಾಣಿಕವಾಗಿ ಜನಸೇವೆ ಮಾಡುವವರಿಗೆ ಎಲ್ಲಡೆಯೂ ಮನ್ಸನಣೆ ದೊರೆಯುತ್ತದೆ. ಶಾಸಕ ರು ನಿಮ್ಮ ಮೇಲಿಟ್ಟಿರುವ ನಂಬಿಕೆ ಉಳಿಸಿಕೊಂಡು, ಸಾರ್ವಜನಿಕ ರಿಗೆ ಅನುಕೂಲವಾಗುವಂತೆ ಕಾರ್ಯ ನಿರ್ವಹಿಸಿ ಎಂದು ಸಲಹೆ ಮಾಡಿದರು.

      ಕಾರ್ಯಕ್ರಮದಲ್ಲಿ ನಗರಪಾಲಿಕೆ ಗೆ ನೂತನ ವಾಗಿ ನೇಮಕಗೊಂಡ ನ್ಯಾಮಿನಿ ಸದಸ್ಯರಾದ ಶಿವರಾಜು, ಮೋಹನ್, ನರಸಿಂಹಸ್ವಾಮಿ, ತ್ಯಾಗರಾಜು, ವಿಶ್ವನಾಥ್ ಅವರುಗಳನ್ನು ಅಭಿನಂದಿಸಿದರು.ಕಾರ್ಯಕ್ರಮ ದಲ್ಲಿ ಪಾಲಿಕೆ ಸದಸ್ಯೆ ಶ್ರೀ ಮತಿ ಗಿರಿಜಾ ಧನಿಯಕುಮಾರ್, ಸರೋಜಗೌಡ, ವಿನಯ್ ಜೈನ್, ಕೊಪ್ಪಳ ನಾಗರಾಜು ಇದ್ದರು.

(Visited 6 times, 1 visits today)

Related posts

Leave a Comment