ತೆಂಗು ಅಭಿವೃದ್ಧಿ ಮಂಡಳಿಯ ಸಭೆ ವಿಡಿಯೋ ಕಾನ್ಫರೆನ್ಸ್’ನಲ್ಲಿ ಸಂಸದರ ಭಾಗಿ

 ತುಮಕೂರು :

      ನವದೆಹಲಿಯ ತೆಂಗು ಅಭಿವೃದ್ಧಿ ಮಂಡಳಿಯ 140ನೇ ಸಭೆಗೆ ತುಮಕೂರು ಲೋಕಸಭಾ ಕ್ಷೇತ್ರದ ಸಂಸದ ಜಿ.ಎಸ್ ಬಸವರಾಜ್ ಅವರು ವಿಡಿಯೋ ಕಾನ್ಫೆರೆನ್ಸ್ ಮೂಲಕ ಭಾಗವಹಿಸಿದರು. 

      ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಎನ್‍ಐಸಿಯ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದ ಸಂಸದರು, 139ನೇ ಸಭೆಯ ನಡಾವಳಿಯ ಬಗ್ಗೆ ವಿಸ್ತøತವಾಗಿ ಚರ್ಚಿಸಿದರು.

       ಅಲ್ಲದೇ ಅಜೆಂಡಾದಲ್ಲಿದ್ದ 8 ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಮಂಡಳಿಯ ಅಧಿಕಾರಿ ನೇಮಿಚಂದ್ರ ಅವರ ವಿರುದ್ಧದ ವಿಚಾರಣೆಯನ್ನು ಸಿಬಿಐ ಮುಕ್ತಾಯಗೊಳಿಸಿದ್ದ, ವರದಿಯಲ್ಲಿ ನಿರ್ದೋಷಿಯೆಂದು ತಿಳಿಸಿದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಎನ್‍ಐಸಿಯ ಅಧಿಕಾರಿ ಅಜಯ್ ಮತ್ತಿತರು ಹಾಜರಿದ್ದರು.

 

(Visited 10 times, 1 visits today)

Related posts

Leave a Comment