ಜಿಲ್ಲೆಯಲ್ಲಿ ಶಾಂತಿಯುತ ಗ್ರಾಮ ಪಂಚಾಯಿತಿ ಚುನಾವಣೆ : 5,262 ಸದಸ್ಯರ ಆಯ್ಕೆ

ತುಮಕೂರು:

      ಜಿಲ್ಲೆಯ 329 ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣಾ ಮತ ಎಣಿಕೆಯು ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಅಂತಿಮವಾಗಿ 5262 ಸದಸ್ಯರು ಆಯ್ಕೆಯಾಗಿದ್ದಾರೆ.

      ತುಮಕೂರು ತಾಲೂಕಿನ 41 ಗ್ರಾಮ ಪಂಚಾಯಿತಿಗಳ 13 ಸದಸ್ಯರು ಅವಿರೊಧವಾಗಿ, ಮತದಾನದ ನಂತರ ಆಯ್ಕೆಯಾದ 733 ಸದಸ್ಯರು ಸೇರಿದಂತೆ 746 ಸದಸ್ಯ ಸ್ಥಾನಗಳು; ಕುಣಿಗಲ್ ತಾಲೂಕಿನ 36 ಗ್ರಾಮ ಪಂಚಾಯಿತಿಗಳ ಅವಿರೊಧವಾಗಿ 37 ಸದಸ್ಯರು, ಮತದಾನದ ನಂತರ ಆಯ್ಕೆಯಾದ 459 ಸದಸ್ಯರು ಸೇರಿದಂತೆ 496 ಸದಸ್ಯ ಸ್ಥಾನಗಳು; ಗುಬ್ಬಿ ತಾಲೂಕಿನ 34 ಗ್ರಾಮ ಪಂಚಾಯಿತಿಗಳ 65 ಸದಸ್ಯರು ಅವಿರೊಧವಾಗಿ, ಮತದಾನದ ನಂತರ ಆಯ್ಕೆಯಾದ 525 ಸದಸ್ಯರು ಸೇರಿದಂತೆ 590 ಸದಸ್ಯ ಸ್ಥಾನಗಳು(36 ನಾಮಪತ್ರ ಸಲ್ಲಿಸದೇ ಖಾಲಿ ಉಳಿದಿರುವ ಸ್ಥಾನಗಳು); ಕೊರಟಗೆರೆ ತಾಲೂಕಿನ 24 ಗ್ರಾಮ ಪಂಚಾಯಿತಿಗಳ 25 ಸದಸ್ಯರು ಅವಿರೊಧವಾಗಿ, ಮತದಾನದ ನಂತರ ಆಯ್ಕೆಯಾದ 367 ಸದಸ್ಯರು ಸೇರಿದಂತೆ 392 ಸದಸ್ಯ ಸ್ಥಾನಗಳು; ಪಾವಗಡ ತಾಲೂಕಿನ 33 ಗ್ರಾಮ ಪಂಚಾಯಿತಿಗಳ 16 ಸದಸ್ಯರು ಅವಿರೊಧವಾಗಿ, ಮತದಾನದ ನಂತರ ಆಯ್ಕೆಯಾದ 510 ಸದಸ್ಯರು ಸೇರಿದಂತೆ 526 ಸದಸ್ಯ ಸ್ಥಾನಗಳು; ಮಧುಗಿರಿ ತಾಲೂಕಿನ 39 ಗ್ರಾಮ ಪಂಚಾಯಿತಿಗಳ 15 ಸದಸ್ಯರು ಅವಿರೊಧವಾಗಿ, ಮತದಾನದ ನಂತರ ಆಯ್ಕೆಯಾದ 600 ಸದಸ್ಯರು ಸೇರಿದಂತೆ 615 ಸದಸ್ಯ ಸ್ಥಾನಗಳು; ಶಿರಾ ತಾಲೂಕಿನ 42 ಗ್ರಾಮ ಪಂಚಾಯಿತಿಗಳ 26 ಸದಸ್ಯರು ಅವಿರೊಧವಾಗಿ, ಮತದಾನದ ನಂತರ ಆಯ್ಕೆಯಾದ 618 ಸದಸ್ಯರು ಸೇರಿದಂತೆ 644 ಸದಸ್ಯ ಸ್ಥಾನಗಳು(16 ನಾಮಪತ್ರ ಸಲ್ಲಿಸದೇ ಖಾಲಿ ಉಳಿದಿರುವ ಸ್ಥಾನಗಳು); ತಿಪಟೂರು ತಾಲೂಕಿನ 26 ಗ್ರಾಮ ಪಂಚಾಯಿತಿಗಳ 23 ಸದಸ್ಯರು ಅವಿರೊಧವಾಗಿ, ಮತದಾನದ ನಂತರ ಆಯ್ಕೆಯಾದ 382 ಸದಸ್ಯರು ಸೇರಿದಂತೆ 405 ಸದಸ್ಯ ಸ್ಥಾನಗಳು(14 ನಾಮಪತ್ರ ಸಲ್ಲಿಸದೇ ಖಾಲಿ ಉಳಿದಿರುವ ಸ್ಥಾನಗಳು); ತುರುವೇಕೆರೆ ತಾಲೂಕಿನ 27 ಗ್ರಾಮ ಪಂಚಾಯಿತಿಗಳ 31 ಸದಸ್ಯರು ಅವಿರೊಧವಾಗಿ, ಮತದಾನದ ನಂತರ ಆಯ್ಕೆಯಾದ 369 ಸದಸ್ಯರು ಸೇರಿದಂತೆ 400 ಸದಸ್ಯ ಸ್ಥಾನಗಳು(ಒಂದು ನಾಮಪತ್ರ ಸಲ್ಲಿಸದೇ ಖಾಲಿ ಉಳಿದಿರುವ ಸ್ಥಾನಗಳು) ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕಿನ 27 ಗ್ರಾಮ ಪಂಚಾಯಿತಿಗಳ 21 ಸದಸ್ಯರು ಅವಿರೊಧವಾಗಿ, ಮತದಾನದ ನಂತರ ಆಯ್ಕೆಯಾದ 427 ಸದಸ್ಯರು ಸೇರಿದಂತೆ 448 ಸದಸ್ಯ ಸ್ಥಾನಗಳು ಸೇರಿದಂತ ಒಟ್ಟು 5329 ಸದಸ್ಯ ಸ್ಥಾನಗಳಿಗೆ 272 ಸದಸ್ಯರು ಅವಿರೋಧವಾಗಿ, 4990 ಸದಸ್ಯರು ಮತದಾನ ನಂತರ ಆಯ್ಕೆಯಾಗಿದ್ದು, 67 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿರುವುದಿಲ್ಲ.

      ಎಲ್ಲಾ ತಾಲೂಕುಗಳ ಒಟ್ಟು 5262 ಸದಸ್ಯ ಸ್ಥಾನಗಳಿಗೆ 2543 ಸಾಮಾನ್ಯ ವರ್ಗ ಹಾಗೂ 2719 ಮಹಿಳೆಯರು ಆಯ್ಕೆಯಾಗಿದ್ದಾರೆ. ಈ ಪೈಕಿ ಎಲ್ಲಾ ತಾಲೂಕುಗಳ ಅನುಸೂಚಿತ ಜಾತಿಯ 1101 ಸದಸ್ಯರಲ್ಲಿ 462 ಸಾಮಾನ್ಯ ವರ್ಗ, 639 ಮಹಿಳೆಯರು; ಅನುಸೂಚಿತ ಪಂಗಡದ ಒಟ್ಟು 534 ಸದಸ್ಯರಲ್ಲಿ 147 ಸಾಮಾನ್ಯ, 387 ಮಹಿಳೆಯರು; ಹಿಂದುಳಿದ-ಅ ವರ್ಗದ 745 ಸದಸ್ಯರಲ್ಲಿ 257 ಸಾಮಾನ್ಯ, 488 ಮಹಿಳೆಯರು; ಹಿಂದುಳಿದ-ಬಿ ವರ್ಗದ 199 ಸದಸ್ಯರಲ್ಲಿ 132 ಸಾಮಾನ್ಯ, 67 ಮಹಿಳೆಯರು; 2683 ಸಾಮಾನ್ಯ ಸದಸ್ಯರಲ್ಲಿ 1545 ಸಾಮಾನ್ಯ, 1138 ಮಹಿಳೆಯರು ಆಯ್ಕೆಯಾಗಿದ್ದಾರೆ.

(Visited 4 times, 1 visits today)

Related posts

Leave a Comment