ತುಮಕೂರು : ನಿವೇಶನ ಕೊರತೆಯಿಂದ ನಿರ್ಮಾಣವಾಗದಿರುವ ಅಂಗನವಾಡಿ ಕೇಂದ್ರಗಳ ಪಟ್ಟಿ ತಯಾರಿಸಿ

 ತುಮಕೂರು : 

      ತುಮಕೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನಿವೇಶನ ಕೊರತೆಯಿಂದ ನಿರ್ಮಾಣವಾಗದಿರುವ ಅಂಗನವಾಡಿ ಕೇಂದ್ರಗಳ ಪಟ್ಟಿ ತಯಾರಿಸಿ ಎಂದು ಉಪವಿಭಾಗಾಧಿಕಾರಿ ಅಜಯ್ ಅವರು ಸಿಡಿಪಿಒಗಳಿಗೆ ಸೂಚಿಸಿದರು.

      ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೋಷಣ್ ಅಭಿಯಾನ ಒಗ್ಗೂಡಿಸುವಿಕೆ ತ್ರೈಮಾಸಿಕ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಅಂಗನವಾಡಿ ಕೇಂದ್ರಗಳಿಗೆ ಪೋಷಣ್ ಅಭಿಯಾನ ಯೋಜನೆಯಡಿ ಸರಬರಾಜುಗೊಂಡಿರುವ ಅಳತೆ ಮಾಪನಗಳ ಉಪಯೋಗಗಳು, ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಗಿರುವ ಸ್ಮಾರ್ಟ್‍ಫೋನ್‍ಗಳ ಬಗ್ಗೆ, ಪೂರಕ ಪೌಷ್ಠಿಕ ಆಹಾರ ವಿತರಣೆಯ ಬಗ್ಗೆ ಹಾಗೂ ಇನ್‍ಕ್ರಿಮೆಂಟಲ್ ಲರ್ನಿಂಗ್ ಅಪ್ರೊಚ್() ತರಬೇತಿಗಳ ಬಗ್ಗೆ ಚರ್ಚಿಸಲಾಯಿತು. ಮಕ್ಕಳ ಪೌಷ್ಠಿಕ ಮಟ್ಟವನ್ನು ಕೇಂದ್ರವಾರು ಪಟ್ಟಿ ಮಾಡಿ ಪ್ರತಿ ಮಾಹೆ ದಾಖಲಿಸುವಂತೆ ಅವರು ತಿಳಿಸಿದರು.

      ಅಂಗನವಾಡಿ ಕೇಂದ್ರಗಳಿಗೆ ಶುದ್ಧ ಕುಡಿಯುವ ನೀರು, ಅಂಗನವಾಡಿ ಕಟ್ಟಡಗಳು ಮತ್ತು ಶೌಚಾಲಯಗಳ ಲಭ್ಯತೆ, ಅಲಭ್ಯತೆ ಮತ್ತು ದುರಸ್ಥಿಗಳ ಕುರಿತು ಮಾಹಿತಿಯನ್ನು ಲಿಖಿತ ರೂಪದಲ್ಲಿ ನೀಡುವಂತೆ ಸಿಡಿಪಿಒಗಳಿಗೆ ಸೂಚಿಸಿದರು.

     ಸಭೆಯಲ್ಲಿ ನಗರ ಹಾಗೂ ಗ್ರಾಮಾಂತರ ಸಿಡಿಪಿಒ ಹಾಗೂ ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

(Visited 5 times, 1 visits today)

Related posts

Leave a Comment