ರಂಜಾನ್ ಹಬ್ಬದ ಪ್ರಯುಕ್ತ ಉಚಿತ ಆಹಾರ ಕಿಟ್ ವಿತರಣೆ

ಚಿಕನಾಯಕನಹಳ್ಳಿ : 

      ರಂಜಾನ್ ಹಬ್ಬದ ಪ್ರಯುಕ್ತ ಬಡವರಿಗೆ ಉಚಿತ ಆಹಾರ ಕಿಟ್‍ಗಳನ್ನು ಅಜೀಜ್ ಟ್ರಸ್ಟ್‍ವತಿಯಿಂದ ವಿತರಿಸಲಾಯಿತು.

      ಕಳೆದ 19 ವರ್ಷದಿಂದ ರಂಜಾನ್ ಸಂದರ್ಭದಲ್ಲಿ ಬಡವರಿಗೆ ಆಹಾರ ಕಿಟ್‍ಗಳನ್ನು ಟ್ರಸ್ಟ್ ವತಿಯಿಂದ ವಿತರಸಲಾಗುತ್ತಿತ್ತು, ಕೋರೊನಾ ಹಿನ್ನಲೆಯಲ್ಲಿ ಸಾರ್ವಜನಿಕವಾಗಿ ಒಂದು ಸಾವಿರ ಬಡಕುಟುಂಬಗಳಿಗೆ ಆಹಾರದ ಕಿಟ್‍ಗಳನ್ನು ವಿತರಿಸಲು ತೀರ್ಮಾನಿಸಲಾಗಿತ್ತು. ಇದನ್ನು ಸರ್ಕಾರಿ ಕಾರ್ಯಕ್ರಮದಂತೆ ಆಯೋಜಿಸಲಾಗಿದ್ದು ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಈ ಕಿಟ್‍ವಿತರಣಾ ಕಾರ್ಯಕ್ಕೆ ಸಚಿವ ಜೆ.ಸಿ. ಮಾಧುಸ್ವಾಮಿ ಚಾಲನೆ ನೀಡಿದರು. ನಂತರ ಅವರು ಮಾತನಾಡಿ ಪ್ರತಿವರ್ಷದಂತೆ ರಂಜಾನ್ ಸಂದರ್ಭದಲ್ಲಿ ಬಡವರಿಗೆ ಆಹಾರ ಕಿಟ್‍ಗಳನ್ನು ವಿತರಿಸುತ್ತಿದ್ದ ಈ ಕುಟುಂಬ, 1000 ಕಿಟ್‍ಗಳನ್ನು ವಿತರಿಸಲು ಮುಂದಾಗಿರುವುದು ಶ್ಲಾಘನೀಯ, ಇಲ್ಲಿ ಎಲ್ಲಾ ವರ್ಗದ ಬಡವರಿಗೂ ಹಂಚಿಕೆ ಮಾಡಲಾಗುತ್ತಿದೆ, ಕೊರೊನಾ ಸಂದರ್ಭದಲ್ಲಿ ಇಂತಹ ಕಾರ್ಯಕ್ಕೆ ಮುಂದಾಗಿರುವುದು ಅವರ ದೊಡ್ಡತನವೆನಿಸಿದೆ ಎಂದರು.

ಟ್ರಸ್ಟ್ ನ ಮುಖ್ಯಸ್ಥರಾದ ಮಹಮದ್ ಜಿಯಾವುಲ್ಲ ಮತ್ತು ಅಮಹಮದ್ ಅಫೀಸ್‍ಉಲ್ಲಾ ಮಾತನಾಡಿ ನಮ್ಮ ತಂದೆಯ ಹೆಸರಿನಲ್ಲಿ ಬಡಕುಟುಂಬಗಳಿಗೆ ನೀಡಲಾಗುವ ಈ ಆಹಾರಕಿಟ್‍ಗಳಲ್ಲಿ 10ಕಿಲೋ ಅಕ್ಕಿ, ಎರಡು ಕಿ.ಲೋ ಗೋದಿಹಿಟ್ಟು, ತೊಗರಿಬೇಳೆ, ಸಕ್ಕರೆ, ಅಡುಗೆ ಎಣ್ಣೆ ಸೇರಿದಂತೆ 1200ರೂ. ಮೌಲ್ಯದ ಸಾಮಾನುಗಳನ್ನು ವಿತರಿಸಲಾಗುತ್ತಿದೆ. ಪ್ರತಿವರ್ಷ 500 ಮಂದಿಗೆ ನೀಡಲಾಗುತ್ತಿತ್ತು ಆದರೆ ಈ ಸಾರಿ 1000 ಕುಟುಂಬಗಳಿಗೆ ಈ ಕಿಟ್‍ಗಳನ್ನು ಸಚಿವರ ಸಮ್ಮುಖದಲ್ಲಿ ನೀಡಲಾಗುವುದೆಂದರು.

(Visited 2 times, 1 visits today)

Related posts

Leave a Comment