ತುಮಕೂರು :  ಕಾರ್ಪೋರೇಟರ್ ನೇತೃತ್ವದಲ್ಲಿ ಆಲದಮರ ಪಾರ್ಕ್ ಸ್ವಚ್ಛತೆ

ತುಮಕೂರು : 

      ನಗರದ 15ನೇ ವಾರ್ಡಿನ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿರುವ ಆಲದ ಮರದ ಪಾರ್ಕ್ ಅನ್ನು ವಾರ್ಡಿನ ಕಾರ್ಪೋರೆಟರ್ ಗಿರಿಜಾ ಧನಿಯಕುಮಾರ್ ಅವರ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ಚಕ್ರವರ್ತಿ ಗೆಳೆಯರ ಬಳಗ ಹಾಗೂ ಅಕೇಷನಲ್ ಕ್ರಿಕೆಟ್ ಅಸೋಸಿಯೇಷನ್ ಸದಸ್ಯರ ಸಹಕಾರದೊಂದಿಗೆ ಶುಚಿಗೊಳಿಸುವ ಕಾರ್ಯ ನಡೆಯಿತು

      ಸ್ಮಾರ್ಟ್‍ಸಿಟಿ ಯೋಜನೆಯಡಿ ಸುಮಾರು 99 ಲಕ್ಷ ರೂ.ಗಳಲ್ಲಿ ಜೂನಿಯರ್ ಕಾಲೇಜಿನ ಆಲದಮರದ ಪಾರ್ಕ್ ಅನ್ನು ಅಭಿವೃದ್ದಿ ಪಡಿಸುವ ಕಾಮಗಾರಿ ನಡೆದಿದ್ದು, ಕೊನೆಯ ಹಂತದಲ್ಲಿದೆ. ಆದರೆ ಕೆಲವರು ಪಾರ್ಕಿನಲ್ಲಿ ಮದ್ಯಪಾನ ಮಾಡಿ, ಎಲ್ಲೆಂದರಲ್ಲಿ ಬಾಟಲಿಗಳನ್ನು ಎಸೆದಿರುವುದಲ್ಲದೆ, ತಿಂಡಿ ತಿಂದ ಪೊಟ್ಟಣಗಳನ್ನು ಬೇಕಾಬಿಟ್ಟಿ ಬಿಸಾಕಿರುವ ಕಾರಣ ಇಡೀ ಪಾರ್ಕು ಕೊಳೆತು ನಾರುತ್ತಿದೆ. ಆದ್ದರಿಂದ ಚಕ್ರವತಿ ಗೆಳೆಯರ ಬಳಗದ ಪ್ರಕಾಶ್, ಅಕೇಷನಲ್ ಕ್ರಿಕೆಟ್ ಅಸೋಸಿಯೇಷನ್‍ನ ಲೋಕೇಶ್, ಧನಿಯಕುಮಾರ್ ಹಾಗೂ ಅವರ ಟೀಮ್‍ನ ಸದಸ್ಯರು, ನಗರಪಾಲಿಕೆಯ ಪೌರಕಾರ್ಮಿಕ ಸಿಬ್ಬಂದಿಗಳೊಂದಿಗೆ ಇಡೀ ಪಾರ್ಕ್‍ನ್ನು ಶುಚಿಗೊಳಿಸುವ ಕಾರ್ಯ ಕೈಗೊಳ್ಳಲಾಗಿತ್ತು.
ಕಾರ್ಪೋರೇಟರ್ ಶ್ರೀಮತಿ ಗಿರಿಜಾ ಧನಿಯಕುಮಾರ್ ಅವರ ಒತ್ತಾಯದ ಮೇರೆಗೆ ಸ್ಥಳಕ್ಕೆ ಆಗಮಿಸಿದ್ದ ಸ್ಮಾರ್ಟಸಿಟಿ ಇಂಜಿನಿಯರ್ ಚನ್ನವೀರಸ್ವಾಮಿ, ಆಲದಮರದ ಪಾರ್ಕ್ ಅಭಿವೃದ್ದಿ ಪಡಿಸುವ ಕಾರ್ಯ ಕೊನೆಯ ಹಂತದಲ್ಲಿದೆ. ಜನರಿಗೆ ವಾಕಿಂಗ್ ಪಾರ್ಕ್, ಲೈಟಿಂಗ್ ವ್ಯವಸ್ಥೆ, ಕುಳಿತುಕೊಳ್ಳಲು ಬೆಂಚ್, ಹೀಗೆ ಹತ್ತು ಹಲವು ವ್ಯವಸ್ಥೆ ಇಲ್ಲಿದೆ. ಇಲ್ಲಿಗೆ ಒರ್ವ ಸೆಕ್ಯೂರಿಟಿ ಗಾರ್ಡು ನೇಮಿಸಲು, ಹಾಗೂ ಡಸ್ಟ್‍ಬಿನ್‍ಗಳನ್ನು ಇಡಲು ಇಂದೇ ಸ್ಮಾರ್ಟ್‍ಸಿಟಿ ಎಂಡಿ ಹಾಗೂ ಮುಖ್ಯ ಇಂಜಿನಿಯರ್ ಅವರನ್ನು ಭೇಟಿಯಾಗಿ ಮನವಿ ಮಾಡಲಾಗುವುದು ಎಂದರು.

      15ನೇ ವಾರ್ಡಿನ ಕಾರ್ಪೋರೇಟರ್ ಶ್ರೀಮತಿ ಗಿರಿಜಾ ಧನಿಯಕುಮಾರ್ ಮಾತನಾಡಿ, ಸಾರ್ವಜನಿಕರ ಉಪಯೋಗಕೋಸ್ಕರ ಈ ಪಾರ್ಕ್ ಅಭಿವೃದ್ದಿ ಪಡಿಸಲಾಗಿದೆ. ಆದರೆ ಕೆಲವರು ಇಲ್ಲಿ ಮದ್ಯಪಾನ, ಧೂಮಪಾನ ಮಾಡಿ ಎಲ್ಲಂದರಲ್ಲಿ ಬಾಟಲಿಗಳನ್ನು ಎಸೆದು ಹೋಗಿದ್ದಾರೆ. ಪಾರ್ಕಿನ ಸುತ್ತಮುತ್ತ ಐದಾರು ಶಾಲಾ ಕಾಲೇಜುಗಳಿವೆ. ವಿದ್ಯಾರ್ಥಿಗಳು ಈ ಪಾರ್ಕಿಗೆ ಓದಲು, ತಿಂಡಿ ತಿನ್ನಲು ಬರುವುದು ಸರ್ವೆ ಸಾಮಾನ್ಯ. ಅವರು ಓದಲು ಅಡ್ಡಿಯಿಲ್ಲ. ಆದರೆ ಕೇಕ್ ಕತ್ತರಿಸಿ, ಹುಟ್ಟು ಹಬ್ಬ ಆಚರಿಸಿಕೊಳ್ಳುವುದಕ್ಕೆ ಅವಕಾಶವಿಲ್ಲ.ಅಲ್ಲದೆ ತಿಂಡಿ ತಿಂದ ಮೇಲೆ ಬರುವ ವೆಸ್ಟ್‍ನ್ನು ಡಸ್ಟ್ ಬಿನ್‍ಗಳಲ್ಲಿ ಹಾಕಬೇಕು. ಸಾರ್ವಜನಿಕರಾಗಲಿ, ವಿದ್ಯಾರ್ಥಿಗಳಾಗಲಿ ಪಾರ್ಕಿನ ಪರಿಸರಕ್ಕೆ ಹಾನಿ ಮಾಡಿದರೆ ಅಂತಹವರ ವಿರುದ್ದ ಕಾನೂನು ಕ್ರಮಕ್ಕೆ ದೂರು ನೀಡಲಾಗುವುದು. ಪಾರ್ಕ್ ಅಭಿವೃದ್ದಿ ಪಡಿಸಿರುವುದೇ ಸಾರ್ವಜನಿಕರ ಉಪಯೋಗಕ್ಕೆಂದು, ಆದರೆ ಅದರ ದುರುಪಯೋಗವನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

     99 ಲಕ್ಷ ರೂಗಳಲ್ಲಿ ಪಾರಂಪರಿಕ ಆಲದ ಮರಗಳನ್ನು ಬಳಸಿಕೊಂಡು ಪಾರ್ಕ್ ಅಭಿವೃದ್ದಿ ಪಡಿಸಲಾಗಿದೆ. ಪೊಲೀಸ್ ಇಲಾಖೆ ಗಸ್ತು ಹೆಚ್ಚಿಸಬೇಕು. ವಿಚಿದ್ರಕಾರಿ ಶಕ್ತಿಗಳು ಕಂಡು ಬಂದರೆ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಧನಿಯಕುಮಾರ್ ತಿಳಿಸಿದರು.

(Visited 2 times, 1 visits today)

Related posts

Leave a Comment