ತುಮಕೂರು : ಯುಜಿಡಿ ಸಮಸ್ಯೆ ಬಗೆಹರಿಸಲು ಪಾಲಿಕೆ ಅಧಿಕಾರಿಗಳು ವಿಫಲ

ತುಮಕೂರು :

      ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂಬರ್ 22ರ ಅಕ್ಕ ತಂಗಿ ಪಾರ್ಕ್ ಬಳಿ ಇರುವ ಹೊಸಳ್ಳಯ ತೋಟ ಪ್ರದೇಶದಲ್ಲಿ ಹಲವು ದಿನಗಳಿಂದ ಯುಜಿಡಿ ಸಮಸ್ಯೆ ಉಂಟಾಗಿದ್ದು ಬಂಡೆಪಾಳ್ಯ ಸೇರಿದಂತೆ ಆಭಾಗದ ಯುಜಿಡಿ ನೀರು ಹರಿದು ಅಕ್ಕ ತಂಗಿ ಕೆರೆ ಪಕ್ಕದ ನಿವಾಸಿಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ.

      ಆದ್ದರಿಂದ ಕೂಡಲೇ ಈ ಸಮಸ್ಯೆ ಬಗೆಹರಿಸುವ ಹರಿಸುವಂತೆ ಸಮಾಜಸೇವಕ ನರಸಿಂಹಮೂರ್ತಿ ತಿಳಿಸಿದ್ದಾರೆ. ಹಲವು ತಿಂಗಳಿಂದ ಯುಜಿಡಿ ನೀರು ಈ ಭಾಗದಲ್ಲಿ ಶೇಖರಣೆಗೊಳ್ಳುವ ಮೂಲಕ ಸಾರ್ವಜನಿಕರಿಗೆ ಆರೋಗ್ಯ ಸಮಸ್ಯೆ ಸೇರಿದಂತೆ ಹಲವು ತೊಂದರೆ ಉಂಟಾಗುತ್ತಿದೆ.

       ಇದೇ ಸಂದರ್ಭದಲ್ಲಿ ರಾತ್ರಿ ವೇಳೆ ಸೊಳ್ಳೆಗಳು ಹೆಚ್ಚಾಗಿದ್ದು ಹಲವು ರೋಗಗಳು ಹರಡುವ ಸಾಧ್ಯತೆ ಇದೆ ಆದ್ದರಿಂದ ಕೂಡಲೇ ಯುಜಿಡಿ ಸಮಸ್ಯೆ ಬಗೆಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

(Visited 2 times, 1 visits today)

Related posts