ಫಸಲ್ ಬಿಮಾ ಯೋಜನೆ ಕುರಿತ ಬೀದಿ ನಾಟಕ ಮತ್ತು ಟ್ಯಾಬ್ಲೋಗೆ ಸಿಇಓ ಚಾಲನೆ

 ತುಮಕೂರು:

      ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಕುರಿತ ಆಯೋಜಿಸಿರುವ ಬೀದಿ ನಾಟಕ ಮತ್ತು ಟ್ಯಾಬ್ಲೋಗೆ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಚಾಲನೆ ನೀಡಿದರು.

      ಜಿಲ್ಲೆಯ ವಿವಿಧ ತಾಲೂಕುಗಳ ಹೋಬಳಿ ಕೇಂದ್ರಗಳಲ್ಲಿ ಬೀದಿ ನಾಟಕ ಮತ್ತು ಟ್ಯಾಬ್ಲೋ ಪ್ರದರ್ಶನವು ಜೂನ್ 5ರಿಂದ 12ರವರೆಗೆ ನಡೆಯಲಿದ್ದು, ಜೂನ್ 5ರಂದು ತುಮಕೂರು ತಾಲೂಕಿನ ಕೋರಾ, ಬೆಳ್ಳಾವಿ, ಹೆಬ್ಬೂರು ಹೋಬಳಿ, ಕೊರಟಗೆರೆ ತಾಲೂಕಿನ ಕಸಬಾ, ಹೊಳವನಹಳ್ಳಿ; ಜೂನ್ 6ರಂದು ಮಧುಗಿರಿ ತಾಲೂಕಿನ ಕಸಬಾ, ಐ.ಡಿಹಳ್ಳಿ ಹಾಗೂ ಶಿರಾ ತಾಲೂಕಿನ ಕಸಬಾ,ಬುಕ್ಕಾಪಟ್ಟಣ; ಜೂನ್ 7ರಂದು ಪಾವಗಡ ತಾಲೂಕಿನ ಕಸಬಾ, ಮಂಗಳವಾಡ; ಜೂನ್ 8ರಂದು ಚಿಕ್ಕನಾಯಕನಹಳ್ಳಿ ತಾಲೂಕಿನ ಕಸಬಾ, ಶೆಟ್ಟಿಕೆರೆ, ಹುಳಿಯಾರು; ಜೂನ್ 9ರಂದು ತಿಪಟೂರು ತಾಲೂಕಿನ ಕಸಬಾ, ಬಿಳಿಗೆರೆ; ಜೂನ್ 10ರಂದು ಗುಬ್ಬಿ ತಾಲೂಕಿನ ಕಸಬಾ, ನಿಟ್ಟೂರು, ಚೇಳೂರು; ಜೂನ್ 11ರಂದು ತುರುವೇಕೆರೆ ತಾಲೂಕಿನ ಕಸಬಾ, ಮಾಯಸಂದ್ರ; ಜೂನ್ 12ರಂದು ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಕೇಂದ್ರಗಳಲ್ಲಿ ಬೀದಿ ಮತ್ತು ಟ್ಯಾಬ್ಲ್ಯೋ ಪ್ರದರ್ಶನ ನಡೆಯಲಿದ್ದು ರೈತರು ಈ ಯೋಜನೆಯ ಸದುಪಯೋಗಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.

      ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಜ್ಯೋತಿ ಗಣೇಶ್, ಜಿಲ್ಲಾ ಸಾಂಖ್ಯಿಕ ಅಧಿಕಾರಿ, ಫ್ಯೂಚರ್ ಜನರಲಿ ಜನರಲ್ ಇನ್ಷೂರೆನ್ಸ್ ಸಂಸ್ಥೆಯ ಪ್ರತಿನಿಧಿಗಳು ಹಾಗೂ ರೈತ ಬಾಂಧವರು ಹಾಜರಿದ್ದರು.

(Visited 18 times, 1 visits today)

Related posts

Leave a Comment