ಜಲ ಜೀವನ ಮಿಷನ್: ಸಮುದಾಯದ ಸಹಭಾಗಿತ್ವ ಮುಖ್ಯ


ತುಮಕೂರು:


ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಜಲಜೀವನ ಮಿಷನ್ ಯೋಜನೆ ಯಸಸ್ವಿಯಾಗಬೇಕೆಂದರೆ ಸಮುದಾಯದ ಸಹಭಾಗಿತ್ವ ಮುಖ್ಯವಾಗಿರುತ್ತದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಜೋಸೆಫ್ ತಿಳಿಸಿದರು.
ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಸ್ನೇಹ ಜೀವನ ಫೌಂಡೇಶನ್ (ಗುಬ್ಬಿ) ಇವರ ಸಹಯೋಗದಲ್ಲಿಂದು ಕುಣಿಗಲ್ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಿಗೆ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಜೀವನ್ ಮಿಷನ್ ಯೋಜನೆಗೆ ಸಮುದಾಯದವರು ಸಹಕಾರ ನೀಡಬೇಕು. ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಜಲಜೀವನ್ ಮಿಷನ್ ಕಾರ್ಯಕ್ರಮ ನಮ್ಮಲ್ಲಿ ತಡವಾಗಿ ಪ್ರಾರಂಭವಾಗಿದೆ ಕೇಂದ್ರ ಸರ್ಕಾರ 2024ರೊಳಗಾಗಿ ಪ್ರತಿ ಮನೆಗೆ ನಳ ಸಂಪರ್ಕ ನೀಡಿ ಶುದ್ಧ ನೀರನ್ನು ಒದಗಿಸಬೇಕು ಎಂಬ ಗುರಿ ಹೊಂದಿದೆ. ಇದಕ್ಕೆ ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳು ಹೆಚ್ಚಿನ ಜವಾಬ್ದಾರಿ ವಹಿಸಬೇಕಾಗುತ್ತದೆ. ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೂ ನಳಗಳ ಸಂಪರ್ಕ ಕೊಟ್ಟು ಅವರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವುದು. ಪ್ರತಿಯೊಬ್ಬ ವ್ಯಕ್ತಿಗೂ ನೀರು ಎನ್ನುವುದು ಅವಶ್ಯಕ ಪ್ರತಿಯೊಬ್ಬ ವ್ಯಕ್ತಿಗೂ ಶುದ್ಧ ಸಮರ್ಪಕ ನೀರನ್ನು ಒದಗಿಸುವ ಜಲ ಜೀವನ ಮಿಷನ್ ಯೋಜನೆಯನ್ನು ಯಶಸ್ವಿಗೊಳಿಸೋಣ ಯೋಜನೆಗೆ ಸಂಬಂಧಿಸಿದ ಸಮುದಾಯ ವಂತಿಕೆಯ ಬಗ್ಗೆ ಗ್ರಾಮಗಳಲ್ಲಿ ತಿಳಿಸಿ ಸರ್ಕಾರದೊಂದಿಗೆ ಸಹಕರಿಸೋಣ ಎಂದು ಅವರು ತಿಳಿಸಿದರು. ಸಹಾಯಕ ನಿರ್ದೇಶಕರಾದ ಸುನೀಲ್ ಕುಮಾರ್ ಅವರು ಮಾತನಾಡಿ, ಸಮರ್ಪಕವಾಗಿ ಎಲ್ಲಿ ನೀರಿನ ಮೂಲಗಳಿವೆ ಅಂತಹ ಗ್ರಾಮಗಳನ್ನು ಮೊದಲಿಗೆ ಆಯ್ಕೆಮಾಡಿಕೊಂಡು ಅಂತಹ ಗ್ರಾಮಗಳಿಗೆ ಮೊದಲ ಆದ್ಯತೆ ಮೇರೆಗೆ ಕೆಲಸಗಳನ್ನು ಮಾಡುತ್ತೇವೆ. ನಮ್ಮ ತಾಲೂಕಿನಲ್ಲಿ ಈಗಾಗಲೇ ಅನುμÁ್ಠನಗೊಳ್ಳುತ್ತಿರುವ ಗ್ರಾಮಪಂಚಾಯಿತಿಗಳಲ್ಲಿ ಕೆಲಸಗಳು ನಡೆಯುವ ಸಂದರ್ಭಗಳಲ್ಲಿ ಅವರಿಗೆ ಅನುμÁ್ಠನ ಮಾಡಲು ಹೆಚ್ಚಿನ ಸಹಕಾರ ನೀಡಬೇಕು. ಈ ಯೋಜನೆಯನ್ನು ಎಲ್ಲರೂ ಒಂದಾಗಿ ಜನರಿಗೆ ಉತ್ತಮ ರೀತಿಯಲ್ಲಿ ತಿಳಿಸೋಣ ಎಂದರು.
ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ಅರುಣ್ ಕುಮಾರ್ ಜಿ ಕೆ ಅವರು ಮಾತನಾಡಿ, ಜಲಜೀವನ ಮಿಷನ್ ಕಾರ್ಯಕ್ರಮ ಯಶಸ್ವಿಯಾಗಿ ಅನುμÁ್ಠನವಾಗಬೇಕು. ಎಲ್ಲರನ್ನೂ ಒಗ್ಗೂಡಿಸಿ ಅನುμÁ್ಠನ ಕಾರ್ಯಕ್ರಮವನ್ನು ಕಳಿಸಬೇಕು. ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಯಾದ ಜೀವನ್ ಮಿಷನ್ ಯೋಜನೆಯನ್ನು 2024ರ ಒಳಗಾಗಿ ಸಂಪೂರ್ಣವಾಗಿ ಅನುμÁ್ಠನಗೊಳಿಸಬೇಕು. ಈಗಾಗಲೇ ಅನುμÁ್ಠನ ತಡವಾಗಿದ್ದು, ಪ್ರತಿ ಮನೆಗಳಿಗೂ ನಲ್ಲಿ ಸಂಪರ್ಕ ನೀಡಬೇಕು. ಆ ನಲ್ಲಿಗಳ ಮೂಲಕ ಸಮರ್ಪಕವಾಗಿ ಜನರಿಗೆ ನೀರನ್ನು ಒದಗಿಸಬೇಕು. ಕುಣಿಗಲ್ ತಾಲೂಕಿನಲ್ಲಿ ಮೂರು ಗ್ರಾಮಪಂಚಾಯಿತಿಗಳಲ್ಲಿ ಈಗಾಗಲೇ ಅನುμÁ್ಠನಗೊಳ್ಳುತ್ತಿದೆ. ಹಾಗೂ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳು ಈಗಾಗಲೇ ರಚನೆಯಾಗಿದ್ದು, ಆ ಗ್ರಾಮದ ನೈರ್ಮಲ್ಯ ಸಮಿತಿಗಳು ಸಕ್ರಿಯವಾಗಿ ನೀರಿನ ವಿಚಾರದಲ್ಲಿ ಭಾಗವಹಿಸುವಂತೆ ತಿಳಿಸಬೇಕು. ಗ್ರಾಮ ಕ್ರಿಯಾಯೋಜನೆಯ ತಯಾರಿ ಸಂದರ್ಭದಲ್ಲಿ ಹಾಗೂ ವಿಸ್ತೃತ ಯೋಜನಾ ವರದಿ ತಯಾರಾಗುವ ಸಂದರ್ಭಗಳಲ್ಲಿ ನೀವುಗಳು ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಬೇಕಾಗುತ್ತದೆ. ಪ್ರತಿ ಗ್ರಾಮಗಳಿಗೂ ನೀರಿನ ಮಿತಬಳಕೆ ಬಗ್ಗೆ ಮಾಡುವುದರ ಬಗ್ಗೆ ಜಲಜೀವನ ಮಿಷನ್ ಬಗ್ಗೆ ಸರಿಯಾದ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ ಯೋಜನೆ ಯಶಸ್ವಿಗೊಳಿಸಿ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಬೆಳಕು ಉಮೇಶ್ ಮಾತನಾಡಿ, ಜಲಜೀವನ ಮಿಷನ್ ಯೋಜನೆಯ ಅನುμÁ್ಠನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ವಾಟರ್ ಮ್ಯಾನ್ ಗಳ ಜವಾಬ್ದಾರಿಗಳು, ಜಲ್ ಜೀವನ್ ಮಿಷನ್ ಕಾರ್ಯಕ್ರಮದ ಅನುμÁ್ಠನದಲ್ಲಿ ಬರುವಂತಹ ವಿವಿಧ ಕಾರ್ಯಕ್ರಮಗಳು ಮತ್ತು ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯ ಜವಾಬ್ದಾರಿಗಳು ಈ ಅನುμÁ್ಠನ ಪ್ರಕ್ರಿಯೆಯಲ್ಲಿ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರುಗಳ ಜವಾಬ್ದಾರಿಗಳು ಹಾಗೂ ನೀರಿನ ಪರೀಕ್ಷಾ ವಿಧಾನದ ಬಗ್ಗೆ ಎಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿಯ ಸದಸ್ಯರಿಗೆ ನೀಡಬೇಕೆಂದು ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಅಭಿಯಂತರರಾದ ಕಿರಣ್ ಅವರು ಮಾತನಾಡಿ, ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಬರುವಂತಹ ತಾಂತ್ರಿಕ ಅಂಶಗಳನ್ನು ತಿಳಿಸಿದರು. ಕಾರ್ಯಾಗಾರದಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅನುμÁ್ಠನ ಬೆಂಬಲ ಸಂಸ್ಥೆಯ ಕಿರಣ್, ಗೋವರ್ಧನ್, ಮೋಹನ್ ಕುಮಾರ್ ಹಾಗೂ ಐ.ಎಸ್.ಆರ್.ಎ ಸಿಬ್ಬಂದಿಗಳು ಸೇರಿದಂತೆ ಇತರೆ ಇಲಾಖೆಯ ಸಿಬ್ಬಂದಿಗಳು, ತಾಲೂಕು ಪಂಚಾಯತ್ ಸಿಬ್ಬಂದಿಗಳು ಸೇರಿದಂತೆ ಮತ್ತಿತರರ ಸಿಬ್ಬಂದಿಗಳು ಹಾಜರಿದ್ದರು.

(Visited 1 times, 1 visits today)

Related posts