ತುಮಕೂರು :

      ಏನೇ ಕಷ್ಟ ಎದುರಾದರೂ ಸರಿ ಗ್ರಾಮಾಂತರ ಭಾಗದ ನಾಗವಲ್ಲಿ ಹಾಗು ಹೊನ್ನುಡಿಕೆ ಕೆರೆಗಳನ್ನು ಶೇ 80 ರಷ್ಟು ತುಂಬಿಸಿಕೊಡುವುದಾಗಿ ಗ್ರಾಮಾಂತರ ಶಾಸಕ ಡಿ ಸಿ ಗೌರೀಶಂಕರ್ ಭರವಸೆ ನೀಡಿದರು.

      ಅವರು ಗೂಳೂರು,ಹೊನ್ನುಡಿಕೆ,ನಾಗವಲ್ಲಿ,ಹೆಬ್ಬೂರು ,ತೊಂಡಗೆರೆ,ಹೊನಸಿಗೆರೆ ಗೂಳರಿವೆ ಸರ್ಕಾರಿ ಶಾಲಾ ಮಕ್ಕಳಿಗೆ ಸೈಕಲ್ ವಿತರಿಸಿ ಮಾತನಾಡುತ್ತಿದ್ದರು, ಏತನೀರಾವರಿ ವ್ಯಾಪ್ತಿಗೊಳಪಡುವ ಕೆರೆಗಳನ್ನು ತುಂಬಿಸಲು 300 ಎಂಸಿಎಫ್ಟಿ ನೀರು ನಿಗದಿ ಮಾಡಲಾಗಿದೆ ,ಇದು ಸಂಪೂರ್ಣಅವೈಜ್ಞಾನಿಕವಾದುದು,ನಾಗವಲ್ಲಿ ಕೆರೆ ತುಂಬಿಸಲು 300 ಎಂಸಿಎಪ್ಟಿ ನೀರು ಬೇಕು, ಏತನೀರಾವರಿ ಯೋಜನೆ ವ್ಯಾಪ್ತಿಗೊಳಪಡುವ ಎಲ್ಲಾ ಕೆರೆ ತುಂಬಿಸಲು ಒಂದು ಟಿಎಂಸಿ ಗೂ ಅಧಿಕ ಪ್ರಮಾಣದ ನೀರು ಬೇಕು,ಈ ನೀರಿನ ಮಿತಿಯನ್ನು ಒಂದು ಟಿಎಂಸಿ ಗೆ ಹೆಚ್ಚಿಸಬೇಕೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿತ್ತು,ಇದರ ದಾಖಲೆಯನ್ನು ಕ್ಷೇತ್ರದ ಜನತೆಯ ಮುಂದಿಡುವುದಾಗಿ ತಿಳಿಸಿದರು.

      ಚಿಕ್ಕಣ್ಣ ಸ್ವಾಮಿ ಮೇಲೆ ಆಣೆ ಮಾಡಿ ಹೇಳುತ್ತೇನೆ ನಾಗವಲ್ಲಿ ಕೆರೆಗೆ ನೀರು ಬಿಡಬೇಡಿ ಬೇರೆ ಕೆರೆಗೆ ನೀರು ಹರಿಸಿ ಎಂದಿಗೂ ಹೇಳಿಲ್ಲ, ನೀರಿನ ವಿಚಾರದಲ್ಲಿ ಕೀಳುಮಟ್ಟದ ರಾಜಕಾರಣ ಮಾಡುವ ವ್ಯಕ್ತಿತ್ವ ನನ್ನದಲ್ಲ, ವಿರೋಧಿಗಳು ನನ್ನ ವಿರುದ್ದ ಸುಳ್ಳು ಆರೋಪಮಾಡುತ್ತಿದ್ದಾರೆ , ಸುಳ್ಳು ಪ್ರಚಾರಮಾಡುತ್ತಿರುವವರು ಸರ್ವನಾಶವಾಗಲಿ ಎಂದು ಕಿಡಿಕಾರಿದರು.

      ಹೇಮಾವತಿ ನೀರು ಹಂಚಿಕೆ ಮೊದಲ ಸಭೆ ನಡೆದಾಗ ನಾಗವಲ್ಲಿ ಹಾಗು ಹೊನ್ನುಡಿಕೆ ಕೆರೆಗಳಿಗೆ ನೀರು ಹರಿಸಬೇಕೆಂದು ಪ್ರಸ್ತಾಪ ಮಾಡಿದ್ದೇನೆ ಏನೇ ಕಷ್ಟ ಎದುರಾದರೂ ಸರಿ ಎರಡೂ ಕೆರೆಗಳನ್ನು ಶೇ80 ರಷ್ಟು ತುಂಬಿಸುವ ಜವಾಬ್ದಾರಿ ನನ್ನದು ,ವಿರೋಧಿಗಳ ಮಾತಿಗೆ ಕಿವಿಗೊಡಬೇಡಿ ಎಂದರು.

      ಬಿಜೆಪಿ ಹಾಗು ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಮುಖ್ಯಮಂತ್ರಿ ಕುಮಾರಸ್ವಾಮಿ ಜಾರಿಗೆ ತಂದ ಸೈಕಲ್ ವಿತರಿಸುವ ಯೋಜನೆ ನಾಡಿನ ಸಾವಿರಾರು ಮಕ್ಕಳು ವಿದ್ಯಾಬ್ಯಾಸದಿಂದ ವಂಚಿತರಾಗುವುದನ್ನು ತಪ್ಪಿಸಿದೆ,ಹಳ್ಳಿಗಾಡಿನ ಮಕ್ಕಳು ನೆಮ್ಮದಿಯಿಂದ ಸೈಕಲ್ ತುಳಿದು ಶಾಲೆಗೆ ಹೋಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ,ಕುಮಾರಸ್ವಾಮಿ ಅವರು ಜನಪರ ಕಾಳಜಿ ಉಳ್ಳ ಮುಖ್ಯಮಂತ್ರಿ ಎಂಬುದನ್ನು ಸಾಭೀತುಪಡಿಸಲು ಈಯೋಜನೆಯೇ ಸಾಕ್ಷಿ ಎಂದರು.

      ರಾಜಕಾರಣ ಹಾಗು ರಾಜಕೀಯ ಪರಿಸ್ತಿತಿ ದಿನೇದಿನೇ ಹದಗೆಡುತ್ತಿದೆ,ಯುವ ಸಮುದಾಯ ರಾಜಕಾರಣ ಎಂದರೆ ಅಸಹ್ಯ ಪಡುವ ಸ್ತಿತಿ ನಿರ್ಮಾಣವಾಗಿದೆ,ರಾಜಕಾರಣಿಗಳು ತಮ್ಮ ಏನೇ ವೈಯಕ್ತಿಕ ಹಿತಾಸಕ್ತಿಗಳಿದ್ದರೂ ಅದನ್ನು ಬದಿಗೊತ್ತಿ ಯುವ ಸಮುದಾಯವನ್ನು ವಿಶ್ವಾಸಕ್ಕೆ ಪಡೆದು ದೇಶ ಸೇವೆಗೆ ಮುಂದಾಗಬೇಕು ,ಸರ್ಕಾರದ ಅಧೀನಕ್ಕೆ ಒಳಪಡುವ ಶಾಲೆಗಳು,ಸಂಘಸಂಸ್ತೆಗಳಿಗೆ ಸಹಕಾರ ಕೊಟ್ಟರೆ ಸದೃಢ ದೇಶ ನಿರ್ಮಾಣ ಸಾಧ್ಯ ಎಂದರು.

      ನಾನು ಇಂದು ಶಾಸಕನಾಗಿ ನಿಮ್ಮ ಮುಂದೆ ನಿಂತಿದ್ದೇನೆ ಎಂದರೆ ಅದು ಡಾ,ಶ್ರೀ ಶಿವಕುಮಾರಮಹಾಸ್ವಾಮೀಜಿ ಆಶೀರ್ವಾದ, ಅವರು ಸ್ತಾಪಿಸಿರುವ ಶಾಲೆಗಳಲ್ಲಿ ವಿದ್ಯಾಬ್ಯಾಸ ನೀವು ಪುಣ್ಯವಂತರು,ಉತ್ತಮ ವ್ಯಾಸಂಗ ಮಾಡಿ ಶಾಲೆಗೆ ಹಾಗು ಸಿದ್ದಗಂಗಾ ಶ್ರೀಗಳಿಗೆ ಕೀರ್ತಿ ತರಬೇಕೆಂದು ಹೇಳಿದರು.

      ನಾಗವಲ್ಲಿ ಶಾಲೆಗೆ ಆಡಿಟೋರಿಯ ನಿರ್ಮಿಸಲು 10 ಲಕ್ಷ ಅನುದಾನ ನೀಡುವುದಾಗಿ ತಿಳಿಸಿದರಲ್ಲದೆ, ನಾಗವಲ್ಲಿ ನಿರ್ಮಾಣವಾಗುತ್ತಿರುವ ಸರ್ಕಾರಿ ಶಾಲಾ ಕಟ್ಟಡ ಹಾಗು ಕಾಲೇಜು ಕಟ್ಟಡ ನಿರ್ಮಾಣದಲ್ಲಿ ಗುಣಮಟ್ಟ ಕಾಯ್ದುಕೊ0ಳ್ಳುವಂತೆ ಸೂಚಿಸಿದರು.

      ಗೂಳೂರು ಹ್ಯಾಂಡ್ ಪೋಸ್ಟ್ ಸರ್ಕಾರಿ ಶಾಲೆಯಲ್ಲಿ 33, ಗೂಳೂರು ಸರ್ಕಾರಿ ಶಾಲೆಯಲ್ಲಿ 62,ನಾಗವಲ್ಲಿ ಸರ್ಕಾರಿ ಶಾಲೆಯಲ್ಲಿ200, ಹೆಬ್ಬೂರು ಸಕಾರಿ ಶಾಲೆಯಲ್ಲಿ 90 ಸೈಕಲ್ಗಳನ್ನು ಶಾಸಕರು ಮಕ್ಕಳಿಗೆ ವಿತರಿಸಿದರು.

      ತಾಲ್ಲುಕು ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತಕುಮಾರ್, ಗೂಳೂರು ಹೋಬಳಿ ಜೆಡಿಎಸ್ ಅಧ್ಯಕ್ಷ ಪಾಲನೇತ್ರಯ್ಯ, ತಾಲ್ಲುಕು ಪಂಚಾಯ್ತಿ ಸದಸ್ಯ ಪ್ರದೀಪ್,ಮಾಜಿ ಎಪಿಎಂಸಿ ಅಧ್ಯಕ್ಷ ವಿಜಯ್ ಕುಮಾರ್ , ಜೆಡಿಎಸ್ ಮುಖಂಡ ನರುಗನಹಳ್ಳಿಮಂಜುನಾಥ್ ನಾಗವಲ್ಲಿ ಶಶಿ ಹಾಗೂ ಶಾಲಾ ಶಿಕ್ಷಕರು,ಸಿಬ್ಬಂದಿ ವರ್ಗ ಉಪಸ್ತಿತರಿದ್ದರು

(Visited 24 times, 1 visits today)