ರಾಜ್ಯದಲ್ಲಿರುವ ಎಲ್ಲಾ ಕೆರೆಗಳಿಗೆ ನೀರು ಹರಿಸಲು ಸಿಎಂ ಆದೇಶ – ಸಂಸದ ಜಿ.ಎಸ್‍.ಬಸವರಾಜು

ತುಮಕೂರು :

      ರಾಜ್ಯದಲ್ಲಿರುವ ಎಲ್ಲಾ ಕೆರೆಗಳಿಗೆ ನದಿ ನೀರು ಅಲೋಕೇಷನ್ ಮಾಡಲು ಅಧ್ಯಯನ ವರದಿ ನೀಡಲು ಸಿಎಂ ಯಡಿಯೂರಪ್ಪನವರು ಆದೇಶ ನೀಡಿದ್ದಾರೆ. ಸಾಮಾಜಿಕ ನ್ಯಾಯದಡಿ ಊರಿಗೊಂದು ಕೆರೆ.. ಆ ಕೆರೆಗೆ ನದಿ ನೀರು ಎಂಬ ಹಲವಾರು ವರ್ಷಗಳ ಬೇಡಿಕೆಗೆ ಚಾಲನೆ ದೊರೆತಿದೆ ಎಂದು  ತಿಳಿಸಿದರು.

     ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ಎಲ್ಲಾ ವಿಧವಾದ ಜಲಸಂಗ್ರಹಾಗಾರಗಳನ್ನು ಸಂಪೂರ್ಣ ವರದಿಯೊಂದಿಗೆ ಜಲಗ್ರಾಮ ಕ್ಯಾಲೆಂಡರ್ ಸಿದ್ಧಪಡಿಸಲು ಮುಖ್ಯಮಂತ್ರಿಗಳು ಆದೇಶ ನೀಡಿದ್ದಾರೆ. ಜಿಲ್ಲೆಯಲ್ಲಿ ಹೇಮಾವತಿ, ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಮತ್ತು ತುಂಗಭದ್ರಾ ಯೋಜನೆಯಡಿ ಯಾವ ಕೆರೆಗಳಿಗೆ ನದಿ ನೀರು ಅಲೋಕೇಷನ್ ಆಗಿದೆ ಮತ್ತು ಯಾವ ಗ್ರಾಮದ ಕೆರೆಗಳಿಗೆ ಅಲೋಕೇಷನ್ ಮಾಡಲು ಎಷ್ಟು ನದಿ ನೀರು ಬೇಕು ಎಂಬ ಮಾಹಿತಿಯನ್ನು ಸಂಗ್ರಹಿಸಿ ಈ ಭಾಗದ ಕೆರೆಗಳಿಗೆ ನೀರು ಬರುವ ಸಾಧ್ಯತೆಯಿರುವ ಎತ್ತಿನಹೊಳೆ 2ನೆ ಹಂತ, ಕುಮಾರಧಾರ, ಶರಾವತಿ, ಹೇಮಾವತಿ ಪ್ರವಾಹದ ನೀರು ಸೇರಿದಂತೆ ಕಾವೇರಿ, ಕೃಷ್ಣಾ ಮತ್ತು ಪಶ್ಚಿಮಾಭಿಮುಖವಾಗಿ ಹರಿಯುವ ನೀರನ್ನು ಒಂದೇ ಕಾಲುವೆಯಲ್ಲಿ ಹರಿಸುವ ವಾಟರ್ ಗ್ರಿಡ್ ಕೆನಾಲ್ ಸಹಿತ ಎಲ್ಲಾ ಅಧ್ಯಯನಗಳನ್ನು ಮಾಡಲು ಆದೇಶ ನೀಡಿದ್ದಾರೆ ಎಂದರುಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಯೋಜನೆಗಳಿಗೆ ಅಗತ್ಯ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದ್ದು, ಈ ಎರಡು ಯೋಜನೆಗಳ ಅಧ್ಯಯನಕ್ಕೆ ತುಮಕೂರು ಜಿಲ್ಲೆಯನ್ನೇ ಪೈಲಟ್ ಆಗಿ ಆಯ್ಕೆ ಮಾಡಿಕೊಂಡು ವರದಿ ತಯಾರಿಸಲು ಆದೇಶಿಸಿದ್ದಾರೆ. ಮಳೆ ನೀರು ಅಧ್ಯಯನಕ್ಕಾಗಿ ಅಗತ್ಯವಿರುವ ಯೋಜನೆಯನ್ನು ಜಾರಿಗೊಳಿಸಲು ಸಣ್ಣ ನೀರಾವರಿ ಕಾರ್ಯದರ್ಶಿಗಳ ಜೊತೆ ಸಮಾಲೋಚನೆ ನಡೆಸಲಾಗಿದೆ. ಮಳೆ ನೀರು ಸಂಗ್ರಹದ ಪ್ರಥಮ ಆದ್ಯತೆಯಾಗಬೇಕು. ತುಮಕೂರಿನ ಮಾಧುಸ್ವಾಮಿಯವರೇ ಈ ಇಲಾಖೆಯ ಸಚಿವರಾಗಿದ್ದರಿಂದ ಈ ಯೋಜನೆಯು ರಾಜ್ಯಾದ್ಯಂತ ಪೂರ್ಣಗೊಳಿಸುವ ಭರವಸೆ ವ್ಯಕ್ತ ಪಡಿಸಿದರು.

      ಮುಂದಿನ ದಿಶಾ ಸಮಿತಿಯಲ್ಲಿ ತುಮಕೂರು ಜಿಲ್ಲೆಯ 331 ಗ್ರಾಮ ಪಂಚಾಯಿತಿಗಳ ಮತ್ತು 11 ನಗರ ಸ್ಥಳೀಯ ಸಂಸ್ಥೆಗಳು ಸೇರಿದಂತೆ 342 ಸ್ಥಳೀಯ ಸಂಸ್ಥೆಗಳವಾರು ಜಲಸಂಗ್ರಹಾಗಾರಗಳನ್ನು ಗುರುತಿಸಲು ಜಲಶಕ್ತಿ ಮತ್ತು ಜಲಾಮೃತ ಜನಾಂದೋಲನದ ಯೋಜನೆಯಡಿ ಅಗತ್ಯ ನಿರ್ಣಯ ಕೈಗೊಳ್ಳಲಾಗುವುದು. ಜೊತೆಗೆ ಗ್ರಾಮಕ್ಕೊಬ್ಬ ಅಧಿಕಾರಿ ಅಥವಾ ನೌಕರರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲು ಸಹ ಅಗತ್ಯ ಕ್ರ ಕೈಗೊಳ್ಳಲು ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

(Visited 27 times, 1 visits today)

Related posts

Leave a Comment