ತುಮಕೂರು : ಇಂದು 72 ಮಂದಿಗೆ ಕೋವಿಡ್-19 ದೃಢ!!

 ತುಮಕೂರು :

      ಜಿಲ್ಲೆಯಲ್ಲಿಂದು 72 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1988 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.

      ಜಿಲ್ಲೆಯಲ್ಲಿ ಇಂದು ತುಮಕೂರು-28, ಕುಣಿಗಲ್-12, ತಿಪಟೂರು-03, ಮಧುಗಿರಿ-05, ಪಾವಗಡ-02, ಗುಬ್ಬಿ-04, ತುರುವೇಕೆರೆ-05, ಕೊರಟಗೆರೆ-07, ಚಿಕ್ಕನಾಯಕನಹಳ್ಳಿ-04, ಶಿರಾ-02 ಸೇರಿದಂತೆ ಒಟ್ಟು 72 ಮಂದಿಯಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.

      ಇಂದು ಜಿಲ್ಲಾಸ್ಪತ್ರೆಯಿಂದ 76 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 1047 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

     ಜಿಲ್ಲೆಯಲ್ಲಿ ಒಟ್ಟು 883 ಸಕ್ರಿಯ ಪ್ರಕರಣಗಳಿದ್ದು,  ಈವರೆಗೆ 58 ಮಂದಿ ಕೋವಿಡ್-19 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(Visited 32 times, 1 visits today)

Related posts

Leave a Comment