ತುಮಕೂರು : ಜಿಲ್ಲೆಯಲ್ಲಿ ಹೊಸ 1 ಕೋವಿಡ್-19 ಸೋಂಕು ದೃಢ!!

ತುಮಕೂರು:

      ತುಮಕೂರು ಜಿಲ್ಲೆಯಲ್ಲಿಂದು ಹೊಸದಾಗಿ ಒಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ಅವರು ತಿಳಿಸಿದ್ದಾರೆ.

      ಸೋಂಕಿತ ವ್ಯಕ್ತಿಯು 33 ವರ್ಷದ ಪುರುಷನಾಗಿದ್ದು, ಮುಂಬೈ ಹೋಟೆಲ್‍ವೊಂದರಲ್ಲಿ ವೈಟೆರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈತನು ಮೇ 24ರಂದು ಬೆಂಗಳೂರಿಗೆ ಹೋಗುವ ಮಾರ್ಗದಲ್ಲಿ ಇಳಿದಿದ್ದಾನೆ. ಭಾನುವಾರದಂದು ಕಫ್ರ್ಯೂ ಜಾರಿಯಲ್ಲಿದ್ದರಿಂದ ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ. ಇವರ ಪ್ರಯಾಣದ ಹಿಸ್ಟರಿ ಇದ್ದಿದ್ದರಿಂದ ಅವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿ ಪಾಸಿಟಿವ್ ಬಂದಿದೆ. 

      ಸೋಂಕಿತ ವ್ಯಕ್ತಿಯನ್ನು ಪಿ-2343 ಗುರುತಿಸಿದ್ದು, ಈತನು ಮೈಸೂರಿನ ಮೆಟಗಳ್ಳಿಯವರಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದರಿಯವರಿಗೆ ಯಾವುದೇ ರೀತಿಯ ಜ್ವರ, ಉಸಿರಾಟದ ತೊಂದರೆಯಾಗಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

(Visited 11 times, 1 visits today)

Related posts

Leave a Comment