ಕೊರಟಗೆರೆ-ಗೌರಿಬಿದನೂರು ಗಡಿ ಭಾಗದಲ್ಲಿ ಕೊರೋನಾ ಚೆಕ್ ಪೋಸ್ಟ್!!

ಕೊರಟಗೆರೆ :

      ಕೊರಟಗೆರೆ ಗಡಿ ಭಾಗದ ಗೌರಿಬಿದನೂರು ತಾಲ್ಲೂಕಿನಲ್ಲಿ ಎರಡು ಸೋಂಕಿತ ಕೊರೊನಾ ಪತ್ತೆಯಾದ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಕೊರಟಗೆರೆ ಗಡಿಭಾಗದ ಅರಸಾಪುರ ಬಳಿಯ ಕಾಶಾಪುರ ಗೇಟ್‍ನ ಬಳಿ ಚೆಕ್‍ಪೋಸ್ಟ್ ನಿರ್ಮಿಸಿ ಕೊರಟಗೆರೆ ಭಾಗದ ಕಡೆ ಬರುವ ಎಲ್ಲಾ ಜನರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.

      ಇತ್ತೀಚೆಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದ್ದು, ಕೊರೊನಾ ವೈರಸ್ ಮಹಾಮಾರಿಗೆ ಭಯ ಪಡುತ್ತಿರುವ ಸಂದರ್ಭದಲ್ಲಿ ಕೊರಟಗೆರೆ ಗಡಿಭಾಗದ ಗೌರಿಬಿದನೂರು ತಾಲ್ಲೂಕಿನಲ್ಲಿ ಕೊರೋನಾ ಸೋಂಕಿತರು ಪತ್ತೆಯಾದ ಕಾರಣ ತಾಲ್ಲೂಕಿನಲ್ಲೂ ಭಯದ ವಾತಾವರಣ ಸೃಷ್ಟಿಯಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಗೌರಿಬಿದನೂರು ಭಾಗದ ಕಡೆಯಿಂದ ಬರುವಂತಹ ಎಲ್ಲರನ್ನು ಚೆಕ್‍ಪೋಸ್ಟ್‍ನಲ್ಲಿ ಪರೀಕ್ಷೆಗೊಳಪಡಿಸಲಾಗುತ್ತಿದೆ.

      ಕೊರೊನಾ ಮಾಹಾಮಾರಿಗೆ ಇಡಿ ರಾಜ್ಯವೇ ಭಯಪಡುತ್ತಿರುವಂತಹ ಸಂದರ್ಭದಲ್ಲಿ ಕೊರಟಗೆರೆ ಗಡಿಭಾಗ ಗೌರಿಬಿದನೂರಿನಲ್ಲಿ ಕೊರೊನಾ ಸೋಂಕಿತ ಪತ್ತೆಯಾದ ಹಿನ್ನೆಲೆಯಲ್ಲಿ ಗೌರಿಬಿದನೂರು ಭಾಗದಿಂದ ಕೊರಟಗೆರೆ ತಾಲ್ಲೂಕಿಗೆ ಹೆಚ್ಚು ಆರ್ಥಿಕ ವ್ಯವಹಾರ ಇರುವ ಕಾರಣ ಇಲ್ಲಿನ ಬಹುತೇಕ ಕಬ್ಭಿಣ, ಬೋರ್‍ವೆಲ್‍ಗೆ ಸಂಭಂದಿಸಿದ ವಸ್ತುಗಳ ಖರೀದಿ ಸೇರಿದಂತೆ ಹೂವಿನ ವ್ಯಾಪಾರಕ್ಕೆ ಕೊರಟಗೆರೆ ಭಾಗದ ಜನ ಗೌರಿಬಿದನೂರು ಹಾಗೂ ಹಿಂದುಪುರಕ್ಕೆ ಹೋಗುವುದು ಸರ್ವೆ ಸಾಮಾನ್ಯವಾಗಿದ್ದು ಈ ದೃಷ್ಟಿಯಿಂದ ಗೌರಿಬಿದನೂರು ಕಡೆಯಿಂದ ಬರುವಂತಹ ಎಲ್ಲಾ ಜನರ ಮೇಲೆ ಕೊರಟಗೆರೆ ಆರೋಗ್ಯ ಇಲಾಖೆ ವಿಶೇಷ ಕಾಳಜಿ ವಹಿಸಿ, ಮುನೆಚ್ಚರಿಕಾ ಕ್ರಮವಾಗಿ ಸೋಂಕು ತಡೆಯುವ ಉದ್ದೇಶದಿಂದ ಚೆಕ್‍ಪೋಸ್ಟ್ ಹಾಗೂ ಆಸ್ಪತ್ರೆಯಲ್ಲಿ ವಿಶೇಷ ಕಾಳಜಿ ವಹಿಸಲಾಗುತ್ತಿದೆ.

       ರಾಜ್ಯ ಆರೋಗ್ಯ ಇಲಾಖೆಯ ಮುನ್ನೆಚ್ಚರಿಕಾ ಕ್ರಮದಂತೆ ಕೊರೊನಾ ವೈರಸ್‍ನ ತಡೆಗೆ ತಾಲ್ಲೂಕಿನಲ್ಲೂ ಆರೋಗ್ಯ ಇಲಾಖೆಯಿಂದ ಅನೇಕ ಮುಂಜಾಗ್ರತ ಕ್ರಮ ತೆಗೆದುಕೊಳ್ಳುತ್ತಿದ್ದು, ಆಸ್ಪತ್ರೆಗೆ ಬರುವ ಎಲ್ಲಾ ರೋಗಿಗಳಿಗೂ ಕೊರೊನಾ ವೈರಸ್‍ನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಕೈಗೊಂಡು, ಅನಾವಶ್ಯಕವಾಗಿ ಜನರನ್ನು ಆಸ್ಪತ್ರೆಯ ಒಳಗೆ ಬರದಂತೆ ತಡೆಯುವಂತಹ ಕೆಲಸ ಕೈಗೊಂಡು ಅನಿವಾರ್ಯತೆ ಇರುವ ರೋಗಿಗಳ ಭೇಟಿಗಷ್ಟೆ ಜನರನ್ನು ಆಸ್ಪತ್ರೆಯ ಒಳಗೆ ಬಿಡುತ್ತಿದ್ದು, ಕೆಮ್ಮು, ಶೀತ, ನೆಗಡಿ ಇರುವ ರೋಗಿಗಳಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಕೈಗೊಂಡು ಕೊರೊನಾ ವೈರಸ್ ತಡೆಗೆ ವಿಶೇಷ ಕ್ರಮ ಜರುಗಿಸಲಾಗುತ್ತಿದೆ.

       ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಕೊರಟಗೆರೆ ತಾಲ್ಲೂಕಿನಲ್ಲೂ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಕೊರಟಗೆರೆ ಗಡಿಭಾಗ ಗೌರಿಬಿದನೂರು ತಾಲ್ಲೂಕಿನಲ್ಲಿ ಕೊರೊನಾ ಸೋಂಕಿತ ವ್ಯಕ್ತಿಗಳು ಪತ್ತೆಯಾದ ಕಾರಣ ಗಡಿಭಾಗದಿಂದ ಬರುವ ಎಲ್ಲಾ ಜನರ ಮೇಲೆ ನಿಗಾ ಇಡಲಾಗುವುದು ಹಾಗೂ ತಪಾಸಣೆ ಕೈಗೊಳ್ಳುವುದಕ್ಕಾಗಿ ಚೆಕ್‍ಪೋಸ್ಟ್ ಹಾಕಲಾಗಿದೆ.

      ಡಾ, ವಿಜಯ್‍ಕುಮಾರ್ ಟಿ,ಹೆಚ್,ಒ ಕೊರಟಗೆರೆ.ಕೊರೊನಾ ಸೋಂಕಿನ ಬಗ್ಗೆ ಜನರಲ್ಲಿ ಮೂಡುತ್ತಿರುವ ಭಯ ಹೋಗಲಾಡಿಸುವ ದೃಷ್ಟಿಯಿಂದ ಹಾಗೂ ಸೋಂಕು ಹರಡದಿರಲಿ ಎಂಬ ಮುಂಜಾಗ್ರತ ಕ್ರಮವಾಗಿ ಕೊರಟಗೆರೆ ತಾಲ್ಲೂಕು ಆಸ್ಪತ್ರೆಯಲ್ಲಿ ವಿಶೇಷ ಕ್ರಮ ಕೈಗೊಂಡಿದ್ದು, ಒಳ ರೋಗಿಗಳನ್ನು ಹೊರತುಪಡಿಸಿ ಅನಾವಶ್ಯಕ ಜನರನ್ನು ಆಸ್ಪತ್ರೆಯ ಒಳಗೆ ಬಾರದಂತೆ ಕ್ರಮ ಕೈಗೊಳ್ಳಲಾಗಿದೆ ಜೊತೆಗೆ ಒಳ ರೋಗಿಗಳನ್ನು ಹೊರತುಪಡಿಸಿ ಆಸ್ಪತ್ರೆಯ ಹೊರಭಾಗದಲ್ಲಿರುವ ಪ್ರತ್ಯೇಕ ಕೊಠಡಿಯಲ್ಲಿ ಶೀತ, ನೆಗಡಿ, ಕೆಮ್ಮು, ಜ್ವರ ಹಾಗೂ ತಲೆನೋವು ಇರುವಂತಹ ರೋಗಿಗಳಿಗೆ ಮಾತ್ರ ತಪಾಸಣೆ ನಡೆಸಿ, ಚಿಕಿತ್ಸೆ ನೀಡುತ್ತಿದ್ದು ಅನ್ಯತಾ ರೋಗಿಗಳು ಕನಿಷ್ಟ ಒಂದು ವಾರದವರೆಗೂ ಆಸ್ಪತ್ರೆಯ ಕಡೆ ತಲೆಹಾಕದ ರೀತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

 

(Visited 7 times, 1 visits today)

Related posts

Leave a Comment