ತುಮಕೂರು : ಆಹಾರ, ಔಷಧೋಪಚಾರ ಸಮಸ್ಯೆಗಳಿದ್ದರೆ ಸಹಾಯವಾಣಿಗೆ ಸಂಪರ್ಕಿಸಿ

ತುಮಕೂರು:

      ಕೋವಿಡ್-19 ಬಾದಿತರು ಆಸ್ಪತ್ರೆಗೆ ದಾಖಲಾಗುವ ಅಥವಾ ತೊಂದರೆಗೆ ಒಳಾಗುವ ವ್ಯಕ್ತಿ ಮತ್ತು ವ್ಯಕ್ತಿಯ ಸಂಬಂಧಿಕರು, ವಯಸ್ಕರು ಮನೆಯಿಂದ ಹೊರಬರದ ಜನರಿಗೆ ಆಹಾರ, ಊಟ ಮತ್ತು ಔಷಧೋಪಚಾರ ಸಮಸ್ಯೆಗಳಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಸಹಾಯವಾಣಿಯನ್ನು ಆರಂಭಿಸಿದೆ.

      ಸಾರ್ವಜನಿಕರು ಈ ಸಹಾಯವನ್ನು ಪಡೆದುಕೊಳ್ಳಲು ಮತ್ತು ಸಹಾಯವಾಣಿ ಮೂಲಕ ಸಾರ್ವಜನಿಕರಿಗೆ ಸಹಾಯ ಮಾಡಲು ಇಚ್ಛಿಸುವವರು ಸಹಾಯವಾಣಿ ಸದಸ್ಯರ ಸಂಪರ್ಕ ವಿವರ ಇಂತಿದೆ.

      ವಕೀಲರಾದ ಕೆ.ಬಿ ಚಂದ್ರಚೂಡ್ – 9448661446, ಎಸ್.ಮಂಜುನಾಥ್-9844228971, ಭೋಜಕುಮಾರ್-9964531291, ಬೇಬಿ ಕವಿತಾ-9844080412, ಟಿ.ಓಬಯ್ಯ-9448071002, ಮೊಹಮ್ಮದ್ ಜಬಿವುಲ್ಲಾ-9844285433, ಹೆಚ್.ನರಸಿಂಹಪ್ಪ-9480059569, ಹೆಚ್.ರೇಣುಕಯ್ಯ-9845099601, ಕಾಂತರಾಜು-9035333353, ಕೃಷ್ಣಮೂರ್ತಿ-9964433250 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಹಂಚಾಟೆ ಸಂಜೀವಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(Visited 6 times, 1 visits today)

Related posts

Leave a Comment