ಸಿಪಿಐ ಪಾರ್ವತಮ್ಮನ ವರ್ತನೆಗೆ ಛೀಮಾರಿ

 ತುಮಕೂರು:

      ನಗರದ ತಿಲಕ್‍ಪಾರ್ಕ್ ಪೊಲೀಸ್ ವೃತ್ತ ನಿರೀಕ್ಷಕಿ ಪಾರ್ವತಮ್ಮ ಈಚೆಗೆ ರೌಡಿ ಶೀಟರ್‍ಗಳಿಗೆ ಕೊಟ್ಟ ವಾರ್ನಿಂಗ್ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು ವಿಡಿಯೋ ವೈರೆಲ್ ಆಗಿದೆ.

      ಕರ್ತವ್ಯದಲ್ಲಿದ್ದ ಸಿಪಿಐ ಪಾರ್ವತಮ್ಮ ರೌಡಿ ಶೀಟರ್‍ಗಳಿಗೆ ಪರಿವರ್ತನಾ ಪಾಠ ಹೇಳಲು ಹೋಗಿ ತಾವೇ ಪಾಠ ಕಲಿಯುವಂತಹ ಸ್ಥಿ?ತಿಗೆ ತಾವೇ ತಂದುಕೊಂಡಿದ್ದಾರೆ ಎಂದು ಕೆಲ ಅಧಿಕಾರಿಗಳೇ ಹೇಳುತ್ತಿದ್ದಾರೆ.

      ಅಸಂಬದ್ಧ ವಾರ್ನಿಂಗ್, ಒಣ ಪ್ರತಿಷ್ಠೆ ತೋರಿದ ಸಿಪಿಐಗೆ ಗರ್ವಭಂಗವಾಗಿದೆ. ನಾಗರೀಕ ಸಮಾಜದ ಶಾಂತಿ, ಸೌಹಾರ್ದತೆ ಕಾಪಾಡುವುದು ಪೆÇಲೀಸ್ ಇಲಾಖೆ ಕರ್ತವ್ಯ. ಆದರೆ, ತಾವು ಏನು, ಹೇಳ್ತಿದ್ದೇನೆ ಎಂಬ ಅರಿವೂ ಇಲ್ಲದೆ ಏಕಾಏಕಿ ಸಿಂಗಂ ಆಗಲು ಹೊರಟ ಲೇಡಿ ಟೈಗರ್‍ನ ದಬ್ಬಾಳಿಕೆಗೆ ಜನ ಮುಸಿ ಮುಸಿ ನಗುವಂತಾಗಿದೆ.

      ಠಾಣೆ ಮುಂದೆ ನಿಂತ ಪಾರ್ವತಮ್ಮ ಗನ್ ಲೋಡ್ ಆಗಿದೆ, ಎನ್‍ಕೌಂಟರ್ ಮಾಡ್ಬಿಡ್ತೀನಿ ಎನ್ನುವ ದಾಟಿಯಲ್ಲಿ ಮಾತಾಡಿದ್ದಾರೆ. ನಿಮ್ಮಲ್ಲಿ ಮದುವೆ ಆಗದವರು ಮದುವೆ ಆಗ್ಬೇಡಿ, ಒಂದುವೇಳೆ ಮದುವೆ ಆದ್ರೆ, ನಿಮ್ಮ ಹೆಂಡತಿ ಬೇರೆಯವರ ಪಾಲಾಗ್ತಾರೆ ಎಂದೆಲ್ಲಾ ಹೇಳಿದ್ದಾರೆ ಮೇಡಂ ಎಂದು ಮಾನವ ಹಕ್ಕುಗಳ ಸಂಸ್ಥಾಪಕ ಅಧ್ಯಕ್ಷ ಸಿದ್ಧಲಿಂಗೇಗೌಡ ಖಂಡಿಸಿ, ಸಿಪಿಐ ಪಾರ್ವತಮ್ಮನ ವಿರುದ್ಧ ಕ್ರಮವಹಿಸುವಂತೆ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ. ಸಿಪಿಐ ಪೊಲೀಸಮ್ಮನ ಸಂಗಂ ವೇಷ ಬಟಾ ಬಯಲಾಗಿದ್ದು, ಒಣ ಪ್ರತಿಷ್ಠೆ ಬಿಟ್ಟು ಸಾರ್ವಜನಿಕರಿಗೆ ಅನುಕೂಲವಾಗುವಂತಹ ರೀತಿಯಲ್ಲಿ ಕರ್ತವ್ಯ ನಿರ್ವಹಿಸಲಿ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

(Visited 17 times, 1 visits today)

Related posts

Leave a Comment