ತುಮಕೂರಿನ ನೂತನ ಜಿಲ್ಲಾಧಿಕಾರಿ ಪಾಟೀಲ್ ಯಲ್ಲಾಗೌಡ ಶಿವನಗೌಡ

ತುಮಕೂರು:

     ತುಮಕೂರು ನೂತನ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿರುವ ಪಾಟೀಲ್ ಯಲ್ಲಾಗೌಡ ಶಿವನಗೌಡ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವರ್ಗಾವಣೆಗೊಂಡಿರುವ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್ ಅವರಿಂದ ಪಾಟೀಲ್ ಯಲ್ಲಾಗೌಡ ಶಿವನಗೌಡ ಅವರು ಅಧಿಕಾರ ವಹಿಸಿಕೊಂಡರು. ನೂತನ ಜಿಲ್ಲಾಧಿಕಾರಿ ಪಾಟೀಲ್ ಯಲ್ಲಾಗೌಡ ಶಿವನಗೌಡ ಅವರು ಅಧಿಕಾರ ಸ್ವೀಕರಿಸುವುದಕ್ಕೂ ಮುನ್ನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದರು. ನಂತರ ಜಿಲ್ಲಾಧಿಕಾರಿಗಳ ಕಚೇರಿ ತೆರಳಿ ಅಧಿಕಾರ ಸ್ವೀಕರಿಸಿದರು.

    ಅಧಿಕಾರ ವಹಿಸಿಕೊಂಡ ನೂತನ ಜಿಲ್ಲಾಧಿಕಾರಿಗಳನ್ನು ನಿರ್ಗಮಿತ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್, ಉಪವಿಭಾಗಾಧಿಕಾರಿ ಅಜಯ್ ಅಭಿನಂದಿಸಿದರು.

(Visited 6 times, 1 visits today)

Related posts

Leave a Comment