ಮಾನವೀಯತೆ ನಂತರ ರಾಜಕೀಯ: ಶಾಸಕ ಗೌರಿಶಂಕರ್

ತುಮಕೂರು:

      ಗ್ರಾಮಾಂತರ ಜನರ ಋಣ ನನ್ನ ಮೇಲಿದೆ, ಮತ ಹಾಕಿ ಕೊಲಿ ಮಾಡಲು ಕಳುಹಿಸಿಕೊಟ್ಟಿದ್ದಾರೆ, ಕೆಲಸ ಮಾಡಿ ಋಣ ತೀರಿಸುತ್ತೇನೆ ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಹೇಳಿದ್ದಾರೆ.

      ಗ್ರಾಮಾಂತರ ಕ್ಷೇತ್ರದ ಹೊನ್ನುಡಿಕೆ ಜಿ.ಪಂ.ವ್ಯಾಪ್ತಿಯಲ್ಲಿ 311 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ಯಾರ ಬಗ್ಗೆಯೂ ಟೀಕೆ ಮಾಡುವುದಿಲ್ಲ, ಶಾಸಕನಾದ ಮೇಲೆ ಲೂಟಿ ಮಾಡಿದ, ಅದು ಇದು ಎಂದೆಲ್ಲ ಮಾಜಿ ಶಾಸಕರು ಮಾತನಾಡುತ್ತಾರೆ, ನನ್ನ ಕುಟುಂಬ ಇಷ್ಟು ಕೀಳು ಮಟ್ಟಕ್ಕೆ ಇಳಿದಿಲ್ಲ, ಮೊದಲು ನೀವು ಮಾನವೀಯತೆ ರೂಢಿಸಿಕೊಳ್ಳಿ ನಂತರ ರಾಜಕಾರಣ ಮಾಡೋಣ, ತಂದೆಗೆ ಹುಷಾರಿಲ್ಲದ ಸಮಯದಲ್ಲಿ ಮಾತೆತ್ತಿದ್ದರೆ ಕಿರುಕುಳ ನೀಡಿದರು ಎಂದು ಭಾವುಕರಾದರು.

      ನಾನು ಇಂಡಿಯಾ ಇನ್ ಇಂಡಿಯಾ ಪ್ರಾಡೆಕ್ಟ್, ಅವ್ರು ಮೇಡ್ ಇನ್ ಚೀನ್ ಯೂಸ್ ಅಂಡ್ ಥ್ರೋ ಅಷ್ಟೇ, ಒಂದು ಬಾರಿ ಕೈಹಿಡಿದರೆ ಕೈಬಿಡುವ ಪ್ರಶ್ನೆಯೇ ಇಲ್ಲ, ಆ ಕಮಲ ಈ ಕಮಲ ಎಂದೆಲ್ಲ ಸರ್ಕಾರಕ್ಕೆ ಕಿರುಕುಳ ನೀಡಿದ್ರೆ, ಸರ್ಕಾರ ಆಗ ಬೀಳುತ್ತೇ, ಈಗ ಬೀಳುತ್ತೆ ಎಂದೆಲ್ಲಾ ಆಡಳಿತ ನಡೆಸದಂತೆ ಮಾಡಿದರೂ ನನಗೆ ಸಿಕ್ಕಿರುವ ಮೂರು ತಿಂಗಳ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಇಷ್ಟು ಅನುದಾನವನ್ನು ತಂದಿದ್ದೇನೆ, ರಸ್ತೆಗಳ ಅಭಿವೃದ್ಧಿ ಮಾಡುತ್ತೇನೆ, ನನ್ನ ಅಧಿಕಾರವಧಿಯೊಳಗೆ 15 ಸಾವಿರ ನಿವೇಶನಗಳನ್ನು ಹಂಚುತ್ತೇನೆ, ನನಗೆ ಕಾಲಾವಕಾಶ ಕೊಡಿ ಎಂದು ಕೇಳಿದರು.

       ಮಾಜಿವ ಸಚಿವ ಹಾಗೂ ನೂತನ ಕೆಎಸ್‍ಆರ್‍ಟಿಸಿ ಅಧ್ಯಕ್ಷ ಆರ್.ಸತ್ಯನಾರಾಯಣ್ ಮಾತನಾಡಿ ಇಲ್ಲಿನ ಮಾಜಿ ಶಾಸಕರು ಹುಚ್ಚರು, ನನ್ನನ್ನೇ ಆಪರೇಷನ್ ಮಾಡಲು ಬಂದಿದ್ದರು, ನಿನ್ನ ರೇಟು ಇಷ್ಟು ಕೋಟಿ ಅಂದರು, ಅಪ್ಪ, ಅಮ್ಮನ ಆರ್ಶೀವಾದದಿಂದ ಅಣ್ಣತಮ್ಮಂದಿರೆಲ್ಲ ಒಟ್ಟಿಗೆ ಇದ್ದೇವೆ ಪಕ್ಷ ಬಿಟ್ಟು ಬರಲ್ಲ ಹೋಗಪ್ಪ ಎಂದೆ, ನಮ್ಮ ಅಸ್ತಿತ್ವವವನ್ನು ಉಳಿಸಿಕೊಳ್ಳಲು ಇಂದು ಹೋರಾಡಬೇಕಿದ್ದು, ಲೋಕಸಭಾ ಚುನಾವಣೆಯಲ್ಲಿ ಪಕ್ಷ 10 ಸ್ಥಾನದಲ್ಲಿ ಗೆಲುವು ಸಾಧಿಸಿದರೆ ಕೇಂದ್ರದಲ್ಲಿ ಮಹತ್ವದ ಅಧಿಕಾರ ಪಡೆಯಲಿದ್ದೇವೆ ಎಂದರು.

     ಪ್ರಜಾಪ್ರಭುತ್ವದಲ್ಲಿ ಒಂದು ಮತಕ್ಕೆ ಸಾಕಷ್ಟು ಬಲವಿದೆ, ವಾಜಪೇಯಿ ಪ್ರಧಾನಿ ಹುದ್ದೆಯಿಂದ ಕೆಳಗೆ ಇಳಿಯಲು ಒಂದು ಮತ ಸಾಕಾಯಿತು, ಯಡಿಯೂರಪ್ಪಗೆ ರಾಜಕೀಯದ ಪ್ರಾಥಮಿಕ ಜ್ಞಾನವಿಲ್ಲ, ತಲೆಯಲ್ಲಿ ಸಗಣಿ ಇಟ್ಕೊಂಡಿರೋ ಹಾಗೆ ಇದ್ದಾನೆ, ಸೈನಿಕರು ಸಾಯ್ತಾ ಇದ್ದರೆ ರಾಜಕಾರಣ ಮಾಡುತ್ತಿದ್ದಾನೆ, ಅವರಿಗೆ ದೇಶವನ್ನು ಆಳುವ ಯೋಗ್ಯತೆ ಇಲ್ಲ, ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಧಿಕ ಸ್ಥಾನವನ್ನು ಪಡೆದರೆ ಪೂರ್ಣಾವಧಿ ಸರ್ಕಾರದಲ್ಲಿ ಗೌರಿಶಂಕರ್ ಸಚಿವರಾಗುತ್ತಾರೆ ಎಂದು ಭವಿಷ್ಯ ನುಡಿದರು.

      ಎಪಿಎಂಸಿ ಮಾಜಿ ಅಧ್ಯಕ್ಷ ನರುಗನಹಳ್ಳಿ ವಿಜಯ್ ಕುಮಾರ್ ಮಾತನಾಡಿ, ನಮ್ಮ ಶಾಸಕರು ಎಂಎಸ್‍ಐಎಲ್ ಅಧ್ಯಕ್ಷರಾಗಿರುವುದು ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದ್ದು, ಕಳೆದ ಎಂಟು ತಿಂಗಳಿಂದ ಕ್ಷೇತ್ರದ ಅಭಿವೃದ್ಧಿ ಕೆಲಸದಲ್ಲಿ ತಲ್ಲೀನರಾಗಿದ್ದಾರೆ, ಎಲ್ಲ ಇಲಾಖೆಗಳಿಗೂ ನಮ್ಮ ಕ್ಷೇತ್ರಕ್ಕೆ ಅನುದಾನ ನೀಡುವಂತೆ ಮನವಿ ಸಲ್ಲಿಸುತ್ತಿದ್ದಾರೆ, ಆರು ತಿಂಗಳಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಇಷ್ಟು ಅನುದಾನವನ್ನು ತಂದಿದ್ದಾರೆ ಎಂದರು.

 

(Visited 15 times, 1 visits today)

Related posts

Leave a Comment