ತುಮಕೂರು: ಶುದ್ಧಕುಡಿಯುವ ನೀರು ಘಟಕಕ್ಕೆ ಬೀಗ: ನಾಗರೀಕರ ಪರದಾಟ

 ತುಮಕೂರು:

      ನಗರದ ಸರಸ್ವತಿಪುರಂನ ದೇವರಾಜಅರಸು ರಸ್ತೆಯಲ್ಲಿ ಸಂಸದರ ನಿಧಿಯಡಿ ನಿರ್ಮಾಣ ಮಾಡಿರುವ ಶುದ್ಧಕುಡಿಯುವ ನೀರಿನ ಘಟಕಕ್ಕೆ ವಿದ್ಯುತ್ ಸಂಪರ್ಕದ ಕಾರಣ ನೀಡಿ, ಬೀಗ ಹಾಕಲಾಗಿದ್ದು, ಸರಸ್ವತಿಪುರಂ, ಮರಳೂರು, ಅಮರಜ್ಯೋತಿನಗರ ಭಾಗದ ನಾಗರೀಕರು ಕುಡಿಯುವ ನೀರಿಗೆ ಪರದಾಡುವಂತೆ ಆಗಿದೆ.

      ಕಳೆದ ಡಿಸೆಂಬರ್‍ನಲ್ಲಿ ಉದ್ಘಾಟನೆಯಾಗಿದ್ದ ಈ ಶುದ್ಧ ಕುಡಿಯುವ ನೀರಿನ ಘಟಕ ಹೈಟೆನ್ಷನ್ ವಿದ್ಯುತ್ ತಂತಿಯಡಿ ಇದ್ದು, ಈ ಶುದ್ಧಕುಡಿಯುವ ನೀರಿನ ಘಟಕವನ್ನು ಬೆಂಗಳೂರಿನ ಗುತ್ತಿಗೆದಾರ ರಾಮಾಂಜಿ ಎಂಬುವರು ನಿರ್ವಹಣೆಗೆ ಪಡೆದುಕೊಂಡಿದ್ದು, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಮಾಡುತ್ತಿರುವವರು ಯಾರು ಎಂಬುದರ ಬಗ್ಗೆ ಪಾಲಿಕೆಯಲ್ಲಿಯೂ ವ್ಯಾಪಕ ಚರ್ಚೆಗೆ ಒಳಗಾಗಿತ್ತು.

      ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ವಹಣೆ ಮಾಡುತ್ತಿರುವವರೇ, ವಿದ್ಯುತ್ ಬಿಲ್ ಭರಿಸಬೇಕು ಎಂದು ಪಾಲಿಕೆ ಆಯುಕ್ತ ಭೂಬಾಲನ್ ಆದೇಶ ನೀಡಿರುವುದರಿಂದ ಅನೇಕ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಬೀಗ ಹಾಕಲಾಗಿದೆ. ದೇವರಾಜಅರಸು ರಸ್ತೆಯಲ್ಲಿರುವ ಈ ಶುದ್ಧ ಕುಡಿಯುವ ನೀರಿನ ಘಟಕ ಹೈಟೆನ್ಷನ್ ವಿದ್ಯುತ್ ತಂತಿಯ ಕೆಳಗೆ ಇರುವುದರಿಂದ ಬೆಸ್ಕಾಂ ವಿದ್ಯುತ್ ಸಂಪರ್ಕವನ್ನು ನೀಡಲು ನಿರಾಕರಿಸಿದೆ ಎನ್ನಲಾಗಿದೆ.

      ಬೆಸ್ಕಾಂ ವಿದ್ಯುತ್ ಸಂಪರ್ಕ ನೀಡದೇ ಇದ್ದರೂ? ಕಳೆದ ಡಿಸೆಂಬರ್‍ನಿಂದ ಕಾರ್ಯನಿರ್ವಹಿಸುತ್ತಿದ್ದ ಘಟಕದ ಮುಂದೆ ವಿದ್ಯುತ್ ಸಂಪರ್ಕದ ತೊಂದರೆಯಿಂದ ಎರಡು ಮೂರು ದಿನ ನೀರು ಸಿಗುವುದಿಲ್ಲ ಎಂದು ಬೋರ್ಡ್ ಹಾಕಲಾಗಿದ್ದು, ಜನರಿಗೆ ಅನುಕೂಲವಾಗಿದ್ದ ಘಟಕಕ್ಕೆ ಬೀಗ ಹಾಕಿರುವುದರಿಂದ ಜನರು ತೊಂದರೆಗೆ ಸಿಲುಕಿದ್ದಾರೆ.

(Visited 10 times, 1 visits today)

Related posts

Leave a Comment