ತುಮಕೂರು : ಡಿವೈಎಸ್ಪಿ ಆಗಿ ಅಧಿಕಾರ ಸ್ವೀಕರಿಸಿದ ಶ್ರೀನಿವಾಸ್

ತುಮಕೂರು: 

     ತುಮಕೂರು ನಗರದ ನೂತನ ಡಿವೈಎಸ್ಪಿಯಾಗಿ ಶ್ರೀನಿವಾಸ್ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದು, ವರ್ಗಾವಣೆಗೊಂಡ ಡಿವೈಎಸ್ಪಿ ತಿಪ್ಪೇಸ್ವಾಮಿ ಅವರಿಂದ ಅಧಿಕಾರ ಸ್ವೀಕರಿಸಿದರು.

      ತುಮಕೂರು ನಗರದ ತಿಲಕ್ ಪಾರ್ಕ್, ಕ್ಯಾತ್ಸಂದ್ರ ಇನ್ಸ್‍ಪೆಕ್ಟರ್ ಆಗಿ ಕಾರ್ಯ ನಿರ್ವಹಣೆ ಮಾಡಿರುವ ಇವರ ಮೇಲೆ ನಗರದ ಜನತೆಯ ಶಾಂತಿ ನೆಮ್ಮದಿ ರಕ್ಷಣೆಯ ಗುರುತರ ಜವಾಬ್ದಾರಿ ಇದೆ.ಜಿಲ್ಲೆಯಲ್ಲಿ ವಿವಿಧೆಡೆ ಸಬ್‍ಇನ್ಸ್‍ಪೆಕ್ಟರ್, ಸರ್ಕಲ್ ಇನ್ಸ್‍ಪೆಕ್ಟರ್ ಆಗಿ ಅಪಾರ ಸೇವೆ ಮಾಡಿ ದಕ್ಷ ಅಧಿಕಾರಿ ಎಂದು ಹೆಸರುಗಳಿಸಿದ್ದರು. ಕಾನೂನುಬಾಹಿರ ಚಟುವಟಿಕೆಗಳನ್ನು ಸಾರ್ವಜನಿಕರಾಗಲೀ ಅಥವಾ ಇಲಾಖೆಯ ಒಳಗಿನ ಖದೀಮರಾಗಲಿ ಯಾರೇ ಮಾಡಿದರೂ ಅವರಿಗೆ ಸಿಂಹ ಸ್ವಪ್ನವಾಗಿ ಬಿಡುವ ಜಾಯಮಾನ ಇವರದ್ದು. ಯಾರಿಗೂ ಯಾವುದಕ್ಕೂ ಅಂಜದೇ ಪ್ರಾಮಾಣಿಕತೆ ದಕ್ಷತೆಯಿಂದ ಕೆಲಸಮಾಡುವ ಚಾಕಚಕ್ಯತೆ ಶ್ರೀನಿವಾಸ್‍ರವರಿಗಿದೆ.

      ಇದುವರೆಗೂ ನಗರದ ಡಿವೈಎಸ್ಪಿ ಕಚೇರಿ ರಿಯಲ್ ಎಸ್ಟೇಟ್, ಭೂ ಮಾಪಿಯಾ ಖದೀಮರ ಡೀಲಿಂಗ್ ಸೆಂಟರ್, ಪಿಟೀಶನ್ ಹೆಸರಿನ ವಸೂಲಿ ಅಡ್ಡವಾಗಿ ಮಾರ್ಪಾಟಾಗಿತ್ತು. ಆದರೆ, ಇಂದಿನಿಂದ ಅದಕ್ಕೆಲ್ಲ ಮುಕ್ತಿ ದೊರೆಯುತ್ತದೆ. ನಗರದ ಜನ ನೆಮ್ಮದಿಯಿಂದ ನಗರ ಪೊಲೀಸ್ ಉಪಾಧೀಕ್ಷಕರ ಕಚೇರಿ ಎನ್ನುವ ವಿಶ್ವಾಸದಿಂದ ಅಲ್ಲಿಗೆ ಬಂದು ತಮ್ಮ ನೋವು ಹೇಳಿಕೊಳ್ಳಬಹುದು.

(Visited 524 times, 1 visits today)

Related posts

Leave a Comment