ತುಮಕೂರು:ಮಾಜಿ ಮೇಯರ್ ಯಶೋಧಗಂಗಪ್ಪ ನಿಧನ

ತುಮಕೂರು:

      ಅನಾರೋಗ್ಯ ದಿಂದ ಬಳಲು ತ್ತಿದ್ದ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಯಶೋಧಗಂಗಪ್ಪ (59) ಅವರು ನಿಧನರಾದರು.

     ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಮೃತರು ಪತಿ ಗಂಗಪ್ಪ, ಇಬ್ಬರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

      ಇಲ್ಲಿನ ಶಾಂತಿನಗರದ ವಾಸಿಯಾಗಿದ್ದ ಯಶೋಧ ಅವರು 2008 ರಲ್ಲಿ 18ನೇ ವಾರ್ಡ್‍ನಿಂದ ಸ್ಪರ್ಧಿಸಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದರು. 2009-10ರಲ್ಲಿ ತುಮ ಕೂರು ಮಹಾನಗರ ಪಾಲಿಕೆಗೆ ಮೇಯರ್ ಆಗಿ ಆಯ್ಕೆಯಾಗುವ ಮೊದಲ ಮಹಿಳಾ ಮೇಯರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

      ಮಾಜಿ ಮೇಯರ್ ಯಶೋಧ ಗಂಗಪ್ಪ ಅವರ ನಿಧನಕ್ಕೆ ಪಾಲಿಕೆಯ ಮೇಯರ್ ಫರಿದಾಬೇಗಂ, ಉಪಮೇಯರ್, ಶಶಿಕಲಾ ಗಂಗಹನುಮಯ್ಯ, ಶಾಸಕ ಜ್ಯೋತಿಗಣೇಶ್, ಮಾಜಿ ಶಾಸಕ ಡಾ. ರಫೀಕ್‍ಅಹಮದ್ ಸೇರಿದಂತೆ ಪಾಲಿಕೆಯ ಹಾಲಿ ಮತ್ತು ಮಾಜಿ ಸದಸ್ಯರುಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

(Visited 5 times, 1 visits today)

Related posts

Leave a Comment