ತುಮಕೂರು : ಅಕ್ರಮ 600 ಗ್ರಾಂ ಒಣ ಗಾಂಜಾ ವಶ!

ತುಮಕೂರು:

        ತುಮಕೂರು ವಲಯದ ಅಬಕಾರಿ ನಿರೀಕ್ಷಕರು ಮತ್ತು ಸಿಬ್ಬಂದಿ ಫೆಬ್ರುವರಿ 14 ರಂದು ರಾತ್ರಿ 9 ಗಂಟೆ ಸಮಯದಲ್ಲಿ ಹೊನ್ನುಡಿಕೆ ಹ್ಯಾಂಡ್‍ಪೋಸ್ಟ್ ಬಳಿ ರಸ್ತೆ ಗಾವಲು ನಡೆಸುವಾಗ ಬಜಾಜ್ ಡಿಸ್ಕವರಿ ವಾಹನದಲ್ಲಿ ಅಕ್ರಮವಾಗಿ 600 ಗ್ರಾಂ ಒಣ ಗಾಂಜಾವನ್ನು ಸಾಗಾಣಿಕೆ ಮಾಡುತ್ತಿದ್ದ ಗೂಳೂರು ಹೋಬಳಿಯ ಚೋಳಂಬಳ್ಳಿ ಗ್ರಾಮದ ಸುಮಾರು 35 ವರ್ಷದ ರಿಜ್ವಾನ್ ಖಾನ್ ಬಿನ್ ನೂರ್ ಖಾನ್ ಎಂಬುವನನ್ನು ಬಂಧಿಲಾಗಿದೆ.

      ಜಿಲ್ಲೆಯ ಅಬಕಾರಿ ಉಪ ಆಯುಕ್ತರು ಹಾಗೂ ಜಿಲ್ಲಾ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರು ಇವರ ಸೂಚನೆ ಮೇರೆಗೆ ರಿಜ್ವಾನ್ ಖಾನ್ ಅನ್ನು ಬಂಧಿಸಿ 600 ಗ್ರಾಂ ಒಣ ಗಾಂಜಾ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಜಿಲ್ಲಾ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಹೆಚ್.ಜಿ.ವಿರೂಪಾಕ್ಷಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(Visited 27 times, 1 visits today)

Related posts

Leave a Comment