ದೇವೇಗೌಡರನ್ನು ಬೆಂಬಲಿಸಿದರೆ ತುಮಕೂರು ಮರಳುಗಾಡಾಗುತ್ತದೆ- ಜಿಎಸ್‍ಬಿ

ತುಮಕೂರು:

       ಹೇಮಾವತಿ ನೀರಿನ ವಿಚಾರದಲ್ಲಿ ತುಮಕೂರಿನ ರೈತರಿಗೆ ವಂಚಿಸಿರುವವರು ಯಾವ ನೈತಿಕತೆಯಲ್ಲಿ ಇಂದು ತುಮಕೂರು ಜನತೆಯ ಮುಂದೆ ಮತ ಯಾಚಿಸುತ್ತಿದ್ದಾರೆ. ಒಂದು ವೇಳೆ ತುಮಕೂರು ಜನತೆ ದೇವೇಗೌಡರನ್ನು ಬೆಂಬಲಿಸಿದರೆ ತುಮಕೂರು ಜಿಲ್ಲೆಯನ್ನು ಮರಳುಗಾಡು ಮಾಡುತ್ತಾರೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಹೇಳಿದರು.

      ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಪಕ್ಷದ ಮುಖಂಡರುಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು ದೇವೇಗೌಡರ ಕುಟುಂಬ ಹೇಮಾವತಿ ನೀರಿನ ವಿಚಾರದಲ್ಲಿ ತುಮಕೂರಿನ ರೈತರ ಕಣ್ಣಲ್ಲಿ ರಕ್ತ ಸುರಿಸಿದ್ದಾರೆ, ಹೇಮಾವತಿ ನಾಲೆಗೆ ಮಣ್ಣು ಸುರಿದು ನೀರನ್ನು ತಡೆದಿರುವುದನ್ನು ನಮ್ಮ ತುಮಕೂರು ಜನತೆ ಮರೆತಿಲ್ಲ, ಈ ಚುನಾವಣೆ ಸ್ವಾಭಿಮಾನದ ಪ್ರಶ್ನೆಯಾಗಿದ್ದು ತುಮಕೂರಿನ ಮತದಾರರು ಪ್ರಜ್ನಾವಂತರಿದ್ದು ಸರಿಯಾದ ಆಯ್ಕೆ ಕೈಗೊಳ್ಳುತ್ತಾರೆ ಎನ್ನುವ ನಂಬಿಕೆಯಿದೆ ಎಂದರು.

      ಲೋಕಸಭೆಗೆ ನಾನು ನಾಲ್ಕುಬಾರಿ ಸಂಸದನಾಗಿ ಆಯ್ಕೆಯಾಗಿದ್ದೇನೆ ಜಿಲ್ಲೆಗೆ ನಾನು ಮಾಡಿರುವ ಕೆಲಸಗಳನ್ನು ಶ್ವೇತಪತ್ರದ ಮೂಲಕ ಜನರಿಗೆ ತಿಳಿಸುತ್ತೇನೆ, ರಾಷ್ಟ ನಿರ್ಮಾಣಕ್ಕೆ ಮುಂದಾಗಿರುವ ನರೇಂದ್ರ ಮೋದಿಯವರನ್ನು ಎದುರಿಸಲು ಪ್ರತಿಪಕ್ಷಗಳು ಘಟಭಂಧನ್ ಮಾಡಿಕೊಂಡಿದ್ದಾರೆ ಆದರೆ ಅದ್ಯಾವುದೂ ನಡೆಯುವುದಿಲ್ಲ ವಿಶ್ವಮಟ್ಟದಲ್ಲಿ ಭಾರತದ ಹೆಸರನ್ನು ಮುಂಚೂಣಿಗೆ ಕೊಂಡೊಯ್ಯುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಆಯ್ಕೆ ಮೊತ್ತೊಮ್ಮೆ ಅವಶ್ಯಕತೆಯಿದೆ ಎಂದರು.

      ಶಾಸಕ ಮಸಾಲೆಜಯರಾಮ್ ಮಾತನಾಡಿ ದೇವೇಗೌಡರ ಬಗ್ಗೆ ನನಗೆ ವಯಕ್ತಿಕವಾಗಿ ಗೌರವವಿದೆ ಆದರೆ ರಾಜಕೀಯವಾಗಿ ಒಕ್ಕಲಿಗರ ಸ್ವಾಭಿಮಾನವನ್ನು ಪೆರೀಕ್ಷಿಸುವ ಕೆಲಸ ದೇವೇಗೌಡರ ಕುಟುಂಬ ಮಾಡುತ್ತಿದೆ, ಹಾಸನದಲ್ಲಿ, ಮಂಡ್ಯದಲ್ಲಿ, ತುಮಕೂರಿನಲ್ಲಿ, ಲೋಕಸಭೆಗೆ ಸ್ಪರ್ಧಿಸಬಲ್ಲ ಒಕ್ಕಲಿಗ ಮುಖಂಡರಿಲ್ಲವೇ ಇವರ ಕುಟುಂಬ ರಾಜಕಾರಣವನ್ನು ನೋಡುತ್ತಿದ್ದರೆ ಒಕ್ಕಲಿಗನಾದ ನನಗೆ ಅಸಹ್ಯಹುಟ್ಟುತ್ತದೆ ತುಮಕೂರು ಲೋಕಸಭಾ ಒಕ್ಕಲಿಗ ಸಮುದಾಯದವರ ಸ್ವಾಭಿಮಾನದ ಪ್ರಶ್ನೆ ಈ ಭಾರಿ ದೇವೇಗೌಡರನ್ನು ಸೋಲಿಸಿ ಜಿ.ಎಸ್.ಬಸವರಾಜುರವರನ್ನು ಗೆಲ್ಲಿಸುವುದರ ಮೂಲಕ ನಮ್ಮ ಆತ್ಮಾಭಿಮಾನವನ್ನು ಕಾಪಾಡಿಕೊಲ್ಲುತ್ತೇವೆ. ನಮ್ಮ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದವರು ಜೆಡಿಎಸ್ ಅಭ್ಯರ್ಥಿಗೆ ಮತಹಾಕುವುದಿಲ್ಲ ಈಬಾರಿ ನಮ್ಮ ಅಭ್ಯರ್ಥಿ ಬೆಂಬಲಿಸಲಿದ್ದಾರೆ ಎಂದರಲ್ಲದೆ 23 ರ ನಂತರ ಸರ್ಕಾರ ಫಥನವಾಗಲಿದ್ದು ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಭವಿಷ್ಯ ನುಡಿದರು.

     ಮಾಜಿ ಶಾಸಕ ಸುರೇಶ್‍ಗೌಡ ಮಾತನಾಡಿ ಡಿ.ಸಿ.ಎಂ.ಪರಮೇಶ್ವರ್ ಅಧಿಕಾರದಾಸೆಗೆ ಪಕ್ಷದಲ್ಲಿನ ಹಾಲಿ ಸಂಸದರಿಗೆ ಟಿಕೆಟ್‍ ಕೈ ತಪ್ಪಿಸಿದ್ದಾ ಹಾಲಿ ಸಂಸದರನ್ನು ಬಿಕಾರಿಮಾಡಿದ್ದು ಇಂದು ಕಾಂಗ್ರೆಸ್ ಮುಕ್ತ ತುಮಕೂರನ್ನಾಗಿ ಮಾಡಲು ಡಾ.ಜಿ.ಪರಮೇಶ್ವರ್ ಹೊರಟಿದ್ದಾರೆ. ಅವರಿಗೆ ತಿಳಿದಿಲ್ಲ ದೇವೇಗೌಡರೇನಾದರೂ ಈ ಭಾರಿ ಗೆದ್ದರೆ ಪರಮೇಶ್ವರ್ ಹೆಸರ ಮುಂದೆ ಮಾಜಿ ಎನ್ನುವ ಪಟ್ಟ ಖಾಯಂ ಆಗಿಬಿಡುತ್ತದೆ ಎಂದು ಎಚ್ಚರಿಸಿದರು.

      ಮಂಡ್ಯ, ಹಾಸನಗಳಿಗೆ ಸಾವಿರಾರು ಕೋಟಿ ಕೊಡುವ ಗೌಡರ ಕುಟುಂಬ ತುಮಕೂರಿನಲ್ಲಿ ಸ್ಪರ್ಧಿಸುವ ಮುಂಚೆ ಯಾಕೆ ಕೊಡಲಿಲ್ಲ, ಹೇಮಾವತಿ ನೀರಿಗೆ ಅಡ್ಡಗಾಲಾಕುವ ಗೌಡರ ಸ್ಪರ್ದೆ ಎಷ್ಟು ಸರಿ, ವೇವೇಗೌಡ ಹಾಗೂ ಕುಮಾರಸ್ವಾಮಿ ಎದುರು ಸತ್ಯ ಹೇಳುವಂತಿಲ್ಲ, ಒಂದೊಮ್ಮೆ ಅವರ ವಿರುದ್ದ ಮಾತನಾಡಿದರೆ ಜಾತಿ ಲಾಭಿ ಮಾಡುತ್ತಾರೆ ಯಾಕೆ ನಾನು ಒಕ್ಕಲಿಗನಲ್ಲವೇ, ಮುದ್ದಹನುಮೇಗೌಡ ಒಕ್ಕಲಿಗನಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.

      ಒಕ್ಕಲಿಗ ಸಮುದಾಯದ ಮುಖಂಡರೊಬ್ಬರು ಪ್ರಾಧನಿಯಾಗಿದಿದ್ದು ನನಗೂ ವಯಕ್ತಿಕವಾಗಿ ಸಂತೋಷವಿದೆ. ಈ ವಿಚಾರದಲ್ಲಿ ಅವರಿಗೆ ನಾನು ಸನ್ಮಾನ ಮಾಡುತ್ತೇನೆ, ಹಾರ ತುರಾಯಿ ಹಾಕುತ್ತೇನೆ ಆದರೆ ನನ್ನ ಮತವನ್ನು ಹಾಕುವುದಿಲ್ಲ ಅದೇರೀತಿ ಮತ ಹಾಕಬೇಡಿ ಎಂದು ನಮ್ಮ ಕಾರ್ಯಕರ್ತರಲ್ಲಿ ವಿನಂತಿಯನ್ನು ಮಾಡುತ್ತೇನೆ ಎಂದರು.

      ಕಾರ್ಯಕ್ರಮದಲ್ಲಿ ಶಾಸಕ ಜೆ.ಸಿ.ಮಾದುಸ್ವಾಮಿ, ಮಾಜಿ ವಿಧಾನಪರಿಷತ್ ಸದಸ್ಯ ನರೇಂದ್ರಬಾಬು, ಪಕ್ಷದ ಅಧ್ಯಕ್ಷ ದುಂಡರೇಣುಕಯ್ಯ, ಮಾಜಿ ಜಿ.ಪಂ.ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಮುಖಂಡರಾದ ಕೊಂಡಜ್ಜಿವಿಶ್ವನಾಥ್, ವಿಜಯ್‍ಕುಮರ್, ವಿ.ಬಿ.ಸುರೇಶ್, ವಿ.ಟಿ.ವೆಂಕಟರಾಮ್, ಹೆಡಗಿಹಳ್ಳಿವಿಶ್ವನಾಥ್, ಕಾಳಂಜಿಹಳ್ಳಿ ಸೋಮಣ್ಣ, ಪ್ರಕಾಶ್, ಜಯಶೀಲ, ಚಿದಾನಂದ್ ಇತರರು ಇದ್ದರು.

 

(Visited 18 times, 1 visits today)

Related posts