ನನ್ನ ಗೆಲುವಿಗೆ ದೇವೇಗೌಡರೇ ಕಾರಣ -ಜಿ.ಎಸ್.ಬಸವರಾಜು

ತುಮಕೂರು:
       ನನ್ನ ಗೆಲುವಿಗೆ ದೇವೇಗೌಡರು ವರವಾದ್ರು. ಮುದ್ದಹನುಮೇಗೌಡರು ಇದ್ದಿದ್ದರೆ ಗೆಲುವು ಕಷ್ಟ ಆಗುತ್ತಿತ್ತು. ದೇವೇಗೌಡರು ಬಂದದ್ದರಿಂದ ಗೆಲುವು ಇನ್ನೂ ಸುಲಭವಾಯ್ತು. ಜಯಕ್ಕೆ ದಾರಿ ಸಲೀಸಾಯಿತು. ಜನ ದೇವೇಗೌಡರನ್ನು ತಿರಸ್ಕರಿಸಿದ್ದಾರೆ ಎಂದು ಬಿಜೆಪಿ ನೂತನ ಸಂಸದ  ಜಿ.ಎಸ್.ಬಸವರಾಜು ಹೇಳಿದ್ದಾರೆ. 
      ಇಂದು ತುಮಕೂರಿನಲ್ಲಿ ಮಾತನಾಡಿದ ಅವರು, ದೇವೇಗೌಡರು ಬಂದಿದ್ದು ವರವಾಯ್ತು, ನನ್ನ ಗೆಲುವು ಇನ್ನೂ ಸುಲಭವಾಯ್ತು. ಜನ ದೇವೇಗೌಡರನ್ನ ರಿಜೆಕ್ಟ್ ಮಾಡಿದ್ರು ಅಂತ ಹೇಳಿದ್ರು. ಇನ್ನು ಇದೇ ವೇಳೆ ಕೆ.ಎನ್.ರಾಜಣ್ಣ ಬೆಂಬಲ‌ ನೀಡಿದ ವಿಚಾರವಾಗಿ ಮಾತನಾಡಿದ ಬಸವರಾಜು, ಅವರು ನನ್ನ ಸ್ನೇಹಿತರು. ಆದರೆ ರಾಜಣ್ಣ ಅವರ ಪಕ್ಷ ಬಿಟ್ಟು ನನಗೆ ಸಹಾಯ ಮಾಡಿದ್ದಾರೆ ಅನ್ನೋಕಾಗಲ್ಲ. ಎಲ್ಲಾ ಪಕ್ಷದವರು ಮತ ಹಾಕಿದಕ್ಕೆ ನಾನು ಗೆದ್ದಿದ್ದೇನೆ ಎಂದು ಹೇಳಿದ್ದಾರೆ.
      ಗೌಡರ ಕುಟುಂಬದಲ್ಲಿ ನಡೆಯುತ್ತಿರುವ ರಾಜೀನಾಮೆ ವಿಷಯವಾಗಿ ಪ್ರಸ್ತಾಪಿಸಿದ ಅವರು, ಗೌಡರ ಕುಟುಂಬ ಯಾವತ್ತಾದರೂ ಸತ್ಯ ಹೇಳಿದ್ದು ಇದ್ಯಾ? ದೇವೇಗೌಡರು ಮೋದಿ ಪ್ರಧಾನಿ ಆದರೆ ದೇಶ ಬಿಡ್ತೀನಿ ಅಂದಿದ್ರು, ಆದರೆ ಅವರು ದೇಶ ಬಿಟ್ರಾ? ಮುಸ್ಲಿಂ ಆಗಿ ಹುಟ್ತೀನಿ ಅಂದಿದ್ದಾರೆ, ಈ ಜನ್ಮದಲ್ಲೇ ಮುಸ್ಲಿಂ ಆಗಲಿ ಎಂದು ವ್ಯಂಗ್ಯವಾಡಿದರು. ಪ್ರಜ್ವಲ್ ರೇವಣ್ಣ ಕೂಡ ರಾಜೀನಾಮೆ ನಾಟಕ ಆಡುತಿದ್ದಾರೆ. ಜನರಿಂದ ಕರುಣೆ ಗಿಟ್ಟಿಸಿಕೊಳ್ಳಲು ಹೀಗೆ ಮಾಡುತಿದ್ದಾರೆ. ಮೊಮ್ಮಗ ರಾಜೀನಾಮೆ ಕೊಡೋದೂ ಇಲ್ಲ, ತಾತ ಕೊಡ್ಸೋದೂ ಇಲ್ಲ ಎಂದು ಟೀಕಿಸಿದರು ಬಸವರಾಜ್. 
(Visited 12 times, 1 visits today)

Related posts

Leave a Comment