ತುಮಕೂರು :  ಕೋವಿಡ್ ಲಸಿಕೆ ಪಡೆದ ಕೆಎನ್‍ಆರ್!

ತುಮಕೂರು :  

      ನಗರದ ಜಿಲ್ಲಾಸ್ಪತ್ರೆಯಲ್ಲಿಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣನವರು ಕೋವಿಡ್-19 ಲಸಿಕೆಯನ್ನು ಪಡೆದರು.

      ಕೋವಿಡ್ ಲಸಿಕೆಯನ್ನು ಪಡೆದ ನಂತರ ಮಾತನಾಡಿದ ಅವರು, ನಾನು ನಾಳೆ ಬಾಂಬೆ ಹೋಗುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ಬಾಂಬೆಯಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವುದರಿಂದ ಲಸಿಕೆ ಪಡೆಯುವಂತೆ ಕೆಲ ಹಿರಿಯರು ಸಲಹೆ ಮಾಡಿದರು. ಹಾಗಾಗಿ ಇಂದು ಕೋವಿಡ್ ಲಸಿಕೆಯನ್ನು ತೆಗೆದುಕೊಂಡಿದ್ದೇನೆ ಎಂದರು.

      ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಕೋವಿಡ್ ಲಸಿಕೆ ಪಡೆಯಲು ಬರುವ ಎಲ್ಲ ಫಲಾನುಭವಿಗಳಿಗೆ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಲಸಿಕೆ ಪಡೆದವರು ಸಂತೃಪ್ತಿಯಿಂದ ಹಿಂದಿರುಗುತ್ತಿದ್ದಾರೆ. ನನಗೂ ಸಹ ಸಮಾಧಾನ ತಂದಿದೆ ಎಂದರು.

      ಕೋವಿಡ್ ಲಸಿಕೆ ನೀಡಿಕೆಯಲ್ಲಿ ನಮ್ಮ ದೇಶ ಪ್ರಪಂಚಕ್ಕೆ ಮಾದರಿಯಾಗಿದೆ. ಈ ವಿಚಾರದಲ್ಲಿ ನಮ್ಮ ದೇಶದ ಹಿರಿಮೆ ಗರಿಮೆ ನಮಗೆ ಹೆಮ್ಮೆ ತಂದಿದೆ ಎಂದು ಅವರು ಹೇಳಿದರು.

      ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸುರೇಶ್‍ಬಾಬು ಮತ್ತು ಜಿಲ್ಲಾಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.

(Visited 5 times, 1 visits today)

Related posts

Leave a Comment