ತುಮಕೂರು : ಪಾಲಿಕೆಯಿಂದ ಐವರು ಪೌರಕಾರ್ಮಿಕರ ವಜಾ

 ತುಮಕೂರು:
      ಮಹಾನಗರ ಪಾಲಿಕೆಯಲ್ಲಿ ಐವರು ಪೌರ ಕಾರ್ಮಿಕರನ್ನು ವಜಾ ಮಾಡಲಾಗಿದ್ದು, ಹಾಗು ಒಬ್ಬ ಪೌರ ಕಾರ್ಮಿಕನನ್ನ ಅಮಾನತುಗೊಳಿಸಲಾಗಿದೆ.
      ಪಾಲಿಕೆಗೆ ಅನಧಿಕೃತವಾಗಿ ಗೈರು  ಸುದೀರ್ಘ ಗೈರು ಹಾಜರಾದ ಹಿನ್ನೆಲೆಯಲ್ಲಿ ಪಾಲಿಕೆಯ ಹಿರಿಯ ಅಧಿಕಾರಿಗಳು ನೀಡಿದ ವರದಿಯ ಆಧಾರದ ಮೇಲೆ ಪಾಲಿಕೆಯ ಆಯುಕ್ತ ಭೂಬಾಲನ್ ರವರು ಐವರು ನೇರ ಪಾವತಿ  ಪೌರ ಕಾರ್ಮಿಕರುಗಳಾದ ಎಂ.ಜಿ.ವೆಂಕಟಸ್ವಾಮಿ, ಎನ್.ಮಂಜುನಾಥ್, ಹುಲಿರಾಮಯ್ಯ, ಗೋವಿಂದರಾಜು, ಸಿದ್ದರಾಜುರವರನ್ನು ಸೇವೆಯಿಂದ ವಜಾ ಮಾಡಲಾಗಿದ್ದು, ಖಾಯಂ ಪೌರ ಕಾರ್ಮಿಕರಾದ ಟಿ.ಕೆ. ಮಂಜುನಾಥ್ ರವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಸದರಿ ಇವರುಗಳಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದು, ಮೌಖಿಕ ಆದೇಶಗಳನ್ನ ಹಾಗೂ ಎಚ್ಚರಿಕೆಗಳನ್ನ ನೀಡಿದ್ದರೂ ಸಹಾ ಸೇವೆಗೆ ಹಾಜರಾಗದ ಹಿನ್ನೆಲೆಯಲ್ಲಿ ಈ ರೀತಿಯ ಕಟ್ಟು ನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗಿದೆ. ಪರಿಸರ ಇಲಾಖೆಯ ಅಧಿಕಾರಿಗಳು ನೀಡಿದ ವರದಿಯ ಆಧಾರದ ಮೇಲೆ ಪಾಲಿಕೆಯ ಆಯುಕ್ತ ಭೂಬಾಲನ್ ರವರು ಸೇವೆಯಿಂದ ವಜಾ ಮಾಡಿ ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ.
(Visited 210 times, 1 visits today)

Related posts

Leave a Comment