ತುಮಕೂರು : ಆಯುಕ್ತರ ವಿರುದ್ಧ ಮೇಯರ್ ಫರೀದಾಬೇಗಂ ಗರಂ

ತುಮಕೂರು:

      ಕೊರೋನಾ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ಪಾವತಿಸುವವರಿಗೆ ಶೇ.5ರಷ್ಟು ರಿಯಾಯಿತಿಯನ್ನು ನೀಡಿ ಸರ್ಕಾರ ಆದೇಶ ನೀಡಿದೆ ಎಂದು ತುಮಕೂರು ಮಹಾನಗರ ಪಾಲಿಕೆ ಮೇಯರ್ ಫರೀದಾಬೇಗಂ ತಿಳಿಸಿದರು.

      ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ತಿ ತೆರಿಗೆ ಪಾವತಿಗೆ ಮೇ ಅಂತ್ಯದವರೆಗೆ ಅವಕಾಶ ನೀಡಲಾಗಿತ್ತು, ಈಗ ಅದನ್ನು ಜುಲೈ ಅಂತ್ಯದವರೆಗೆ ತೆರಿಗೆ ಪಾವತಿಗೆ ಅವಕಾಶ ನೀಡಿದ್ದು, ಸಾರ್ವಜನಿಕರು ಈ ಯೋಜನೆಯ ಸದುಪಯೋಗ ಪಡಿಸಿಕೊ ಳ್ಳಬೇಕು ಎಂದು ಅವರು ಹೇಳಿದರು.

      ಪ್ರತಿ ಮೂರು ವರ್ಷಕ್ಕೆ ಆಸ್ತಿ ತೆರಿಗೆ ಹೆಚ್ಚಳವಾಗಬೇಕಿದ್ದು ಅದರಂತೆ ಸ್ಥಾಯಿ ಸಮಿತಿ ಅಧ್ಯಕ್ಷರೊಂದಿಗೆ ಚರ್ಚಿಸಿ ಒಪ್ಪಿಕೊಂಡಿ ದ್ದೇವೆ, ವಿಡಿಯೋ ಕಾನ್ಫೆರೆನ್ಸ್‍ನಲ್ಲಿ ಸದಸ್ಯರು ಒತ್ತಾಯ ಮಾಡಿದ್ದರು, ಶಾಸಕರು, ಸಂಸದರು ಈ ಬಗ್ಗೆ ಮಾತನಾಡುವ ಭರವಸೆ ನೀಡಿದ್ದರು, ಶೇ.15ರಷ್ಟು ತೆರಿಗೆ ಹೆಚ್ಚಳವನ್ನು ಮುಂದೂಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದು, ಸರ್ಕಾರದ ನಿರ್ಧಾರದ ಮೇಲೆ ಆದೇಶ ಪಾಲನೆ ಮಾಡಲಾಗುವುದು ಎಂದು ಹೇಳಿದರು. ತುಮಕೂರಿಗರು ನಮ್ಮ ಜವಾಬ್ದಾರಿಯನ್ನು ಅರಿಯಬೇಕು, ಹೊರರಾಜ್ಯಗಳಿಂದ ಬಂದವರ ಬಗ್ಗೆ ಮಾಹಿತಿಯನ್ನು ನೀಡಬೇಕು, ತುಮಕೂರನ್ನು ಕೊರೋನಾ ಫ್ರೀ ಮಾಡುವ ನಿಟ್ಟಿನಲ್ಲಿ ಎಲ್ಲರ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಸೀಲ್ ಡೌನ್ ಪ್ರದೇಶ ಹಾಗೂ ತುಮಕೂರು ನಗರವನ್ನು ಸಂಪೂರ್ಣ ಸ್ಯಾನಿಟೈಜರ್ ಮಾಡಲಾಗಿದೆ, ಸೀಲ್ ಡೌನ್ ಸಂದರ್ಭದಲ್ಲಿ ಸರ್ಕಾರದಿಂದ ವಿಶೇಷ ಪ್ಯಾಕೇಜ್ ನೀಡಿಲ್ಲ, ಕಾಪೆರ್Çೀರೇಟರ್ ಗಳು ವೈಯಕ್ತಿಕವಾಗಿ ಜನರಿಗೆ ಸಹಾಯ ಮಾಡಿದ್ದಾರೆ ಎಂದು ಹೇಳಿದರು.

   ಸರ್ಕಾರದಿಂದ ಸೌಲಭ್ಯ ಸಿಕ್ಕಿಲ್ಲ:

      ತುಮಕೂರು ನಗರದಲ್ಲಿ ಸೀಲ್‍ಡೌನ್ ಪ್ರದೇಶಕ್ಕೆ ಯಾವುದೇ ಸೌಲಭ್ಯ ನೀಡಿಲ್ಲ, ಸೀಲ್ ಡೌನ್ ಪ್ರದೇಶದಲ್ಲಿ ಇರುವವರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ ಆದರೆ ಅಲ್ಲಿರುವವರಿಗೆ ಕನಿಷ್ಠ ಊಟವನ್ನು ಪೂರೈಕೆ ಮಾಡಲಿಲ್ಲ ಎಂದು ಮೇಯರ್ ಫರೀದಾಬೇಗಂ ಆರೋಪಿಸಿದರು. ಸೀಲ್‍ಡೌನ್ ಪ್ರದೇಶದಲ್ಲಿ ವಾಸಿಸುವವರಿಗೆ ದುಡಿಮೆ ಇಲ್ಲ, ಅಲ್ಲಿರುವವರಿಗೆ ಅಗತ್ಯ ಸೌಲಭ್ಯಗಳನ್ನು ನೀಡದೇ ಹೋದರೆ ಜೀವನ ನಡೆಸುವುದು ಹೇಗೆ? ದುಡಿಮೆ ಇಲ್ಲದ ಮೇಲೆ ಜನರು ಬದುಕುವುದು ಹೇಗೆ? ಜನರು ಸುಮ್ಮನೆ ಜನಪ್ರತಿನಿಧಿಗಳ ಮೇಲೆ ಆರೋಪಿಸುತ್ತಿದ್ದಾರೆ, ಕೊರೋನಾ ಸಂದರ್ಭದಲ್ಲಿ ಯಾವುದೇ ಅನುದಾನವನ್ನು ಪಾಲಿಕೆಗೆ ಮಾತ್ರ ಅಲ್ಲ, ಜಿಲ್ಲಾಡಳಿತಕ್ಕೂ ನೀಡಿಲ್ಲ ಎಂದು ಹೇಳಿದರು.

  ಆಯುಕ್ತರ ವಿರುದ್ಧ ಗರಂ :

     ತುಮಕೂರು ಪಾಲಿಕೆ ಆಯುಕ್ತರು ಪಾಲಿಕೆಯಲ್ಲಿ ಹೆಚ್ಚಾಗಿ ಇಲ್ಲಿ ಕೆಲಸ ಮಾಡುತ್ತಿಲ್ಲ, ಇದರಿಂದಾಗಿ ಕೆಳಹಂತದ ಅಧಿಕಾರಿಗಳು ಸಮಯ ವ್ಯರ್ಥ ಮಾಡುತ್ತಿದ್ದು, ಪಾಲಿಕೆ ಆಡಳಿತ ಸರಾಗವಾಗಿಲ್ಲ, ಸ್ಲಂಗಳಲ್ಲಿ ಯುಜಿಡಿ ಕೆಲಸ ನಡೆಯುತ್ತಿಲ್ಲ, ಪಾಲಿಕೆ ಸದಸ್ಯರು ಸಂಪರ್ಕಿಸಿದರು ಆಯುಕ್ತರು ಸಿಗುತ್ತಿಲ್ಲ, ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಇಂತಹ ಸಂದರ್ಭದಲ್ಲಿ ಆಡಳಿತ ನಿರ್ವಹಿಸುವುದಾದರೂ ಹೇಗೆ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಹಾಗೂ ಆಯುಕ್ತರೆಲ್ಲರು ಸ್ಮಾರ್ಟ್‍ಸಿಟಿ ಕೆಲಸ ಎನ್ನುತ್ತಾರೆ, ಕೊರೋನಾದಿಂದಾಗಿ ಅಧಿಕಾರಿಗಳು ಪಾಲಿಕೆಯಲ್ಲಿ ಕೆಲಸ ನಿರ್ವಹಿಸುತ್ತಿಲ್ಲ, ಕೊರೋನಾದ ಕಾರಣದಿಂದಾಗಿ ಅಧಿಕಾರಿಗಳಿಗೆ ಪಾಲಿಕೆ ಸದಸ್ಯರು ಸಹಕಾರ ನೀಡುತ್ತಿದ್ದಾರೆ ಆದರೆ ಅಧಿಕಾರಿಗಳು ಸದಸ್ಯರನ್ನು ಕೊರೋನಾ ಹೆಸರೇಳಿ ಯಾಮಾರಿಸುತ್ತಿದ್ದಾರೆ, ಆಯುಕ್ತರಿಗೆ ಮೇಯರ್ ಕರೆ ಮಾಡಿದರೂ ಪ್ರತಿಕ್ರಿಯಿಸುವುದಿಲ್ಲ ಇದರಿಂದಾಗಿ ಕೆಲಸ ಮಾಡಲು ಆಗುತ್ತಿಲ್ಲ ಎಂದರು.

      ಪಾಲಿಕೆ ಸದಸ್ಯ ಕುಮಾರ್ ಮಾತನಾಡಿ ಬೆಳಗಾಂಗೆ ಹೋಗಿಬರುವ ಮುಂಚೆ ಚೆನ್ನಾಗಿ ಕೆಲಸ ಮಾಡುತ್ತಿದ್ದ ಆಯುಕ್ತರು,ಈಗ ಬದಲಾಗಿದ್ದಾರೆ, ಕೆಳವರ್ಗದ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎಂದರೆ ಅವರದ್ದು ದಕ್ಷತೆ ಅಲ್ಲ, ಕುಡಿಯುವ ನೀರಿನೊಂದಿಗೆ ಯುಜಿಡಿ ಮಿಶ್ರಿತ ನೀರು, ಒಂದು ವರ್ಷದಿಂದ ಕೆಲಸ ಮಾಡಿಲ್ಲ, ಫೋನ್ ರಿಸೀವ್ ಮಾಡಬೇಕೆಂಬ ಕಾನೂನು ಇಲ್ಲ ಎಂದು ಹೇಳುತ್ತಾರೆ ಎಂದು ಹೇಳಿದರು.

      ಈ ಸಂದರ್ಭದಲ್ಲಿ ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಮಹೇಶ್, ಕುಮಾರ್, ಇನಾಯತ್‍ವುಲ್ಲಾಖಾನ್, ಮಲ್ಲಿಕಾರ್ಜುನ್, ವಿಷ್ಣುವರ್ಧನ್ ಇತರರಿದ್ದರು.

(Visited 506 times, 1 visits today)

Related posts