ತುಮಕೂರು :
ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳದ ನೂತನ ಪೊಲೀಸ್ ಉಪಾಧೀಕ್ಷಕರಾಗಿ ಬಿ.ಉಮಾಶಂಕರ್ ರವರು ಇಂದು (ಆ.31 ಮಂಗಳವಾರ) ಅಧಿಕಾರ ಸ್ವೀಕರಿಸಿದ್ದಾರೆ.
ಇವರು ತುಮಕೂರು ಜಿಲ್ಲೆಯ ಹಲವೆಡೆಗಳಲ್ಲಿ ತುಮಕೂರು ನಗರ ಸಂಚಾರಿ ಪಿಎಸ್‍ಐ, ಶಿರಾ ತಾವರೆಕೆರೆ ಪಿಎಸ್‍ಐ ಹಾಗೂ ಕರ್ನಾಟಕ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದರು.
ತುಮಕೂರು ಜಿಲ್ಲೆಯಲ್ಲಿ ಲೋಕಾಯುಕ್ತ ಇನ್ಸ್ಪೆಕ್ಟರ್ ಆಗಿದ್ದ ಸಮಯದಲ್ಲಿ ಭ್ರಷ್ಟರ ಪಾಲಿಗೆ ಸಿಂಹ ಸ್ವಪ್ನವಾಗಿದ್ದರು. ಆ ಸಮಯದಲ್ಲಿ ಬಹಳಷ್ಟು ಟ್ರ್ಯಾಪ್ ಮತ್ತು ರೈಡ್ ಮಾಡಿ ಉತ್ತಮ ಹೆಸರು ಗಳಿಸಿದ್ದರು. ವರ್ಗಾವಣೆಯಾಗಿ ಬೆಸ್ಕಾಂ ಜಾಗೃತದಳದ ಇನ್ಸ್ಪೆಕ್ಟರ್ ಆಗಿ ತುಮಕೂರಿನ ಜಾಗೃತ ದಳದಲ್ಲಿ ಸೇವೆ ಸಲ್ಲಿಸಿದ್ದ ಇವರು ಬೆಂಗಳೂರು ಸಿಸಿಬಿ ಹಾಗೂ ಡಿಸಿಬಿ ಇನ್ಸ್ಪೆಕ್ಟರ್ ಆಗಿ ಸೇವೆಸಲ್ಲಿಸಿದ್ದ ಇವರು ಬಡ್ತಿ ಹೊಂದಿ ಭ್ರಷ್ಟಾಚಾರ ನಿಗ್ರಹದಳದ ಉಪಾಧೀಕ್ಷಕರಾಗಿ ತುಮಕೂರಿನಲ್ಲಿ ಮತ್ತೆ ತನ್ನ ಸೇವೆ ಆರಂಭಿಸಿದ್ದಾರೆ. ತುಮಕೂರಿನ ಜಿಲ್ಲೆಯ ಭ್ರಷ್ಟ ಅಧಿಕಾರಿಗಳ ನಿದ್ದೆಗೆಡಿಸುವುದು ಗ್ಯಾರಂಟಿ.