ತುಮಕೂರು : ಎಂ.ಜಿ. ರಸ್ತೆಯಿಂದ ಬಿ.ಹೆಚ್. ರಸ್ತೆವರೆಗೆ ನೋ-ಪಾರ್ಕಿಂಗ್!!

ತುಮಕೂರು :

      ನಗರದ ಎಂ.ಜಿ. ರಸ್ತೆಯ ಮುಂಭಾಗದ ಕೃಷ್ಣ ಚಿತ್ರಮಂದಿರದಿಂದ ಬಿ.ಹೆಚ್. ರಸ್ತೆಗೆ ಹೊಂದಿಕೊಂಡಂತೆ ಗಾಯಿತ್ರಿ ಚಿತ್ರಮಂದಿರ ಮುಂಭಾಗದವರೆಗೆ ನೋ-ಪಾರ್ಕಿಂಗ್ ಸ್ಥಳವೆಂದು ಘೋಷಿಸಿ ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್‌ಕುಮಾರ್ ಇಂದು ಆದೇಶ ಹೊರಡಿಸಿದ್ದಾರೆ.

      ಸುಗಮ ಸಂಚಾರದ ದೃಷ್ಟಿಯಿಂದ ಈ ಆದೇಶವನ್ನು ಹೊರಡಿಸಲಾಗಿದ್ದು, ಕಟ್ಟುನಿಟ್ಟಾಗಿ ಪಾಲನೆ ಮಾಡಲು ಸೂಚಿಸಲಾಗಿದೆ. ಆದೇಶವನ್ನು ಉಲ್ಲಂಘಿಸಿದ ವ್ಯಕ್ತಿಗಳ ವಿರುದ್ಧ ಕಾನೂನು ರೀತ್ಯಾ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

(Visited 8 times, 1 visits today)

Related posts

Leave a Comment