ತುಮಕೂರು : ಇಂದು 2 ಹೊಸ ಕರೋನಾ ವೈರಸ್ ಪಾಸಿಟಿವ್ ಪ್ರಕರಣ

ತುಮಕೂರು:

      ಜಿಲ್ಲೆಯಲ್ಲಿ ಇಂದು 2 ಹೊಸ ಕರೋನಾ ವೈರಸ್ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ನಾಗೇಂದ್ರಪ್ಪ ನವರು ತಿಳಿಸಿದ್ದಾರೆ. 

         30 ವರ್ಷದ ಓರ್ವ ವ್ಯಕ್ತಿ P-2771 ದೆಹಲಿಯಿಂದ ಪಾವಗಡಕ್ಕೆ ಬಂದಿದ್ದು ಅಲ್ಲಿಯೇ ಕ್ವಾರಂಟೈನ್ ಮಾಡಲಾಗಿತ್ತು. 22 ವರ್ಷದ ವ್ಯಕ್ತಿ P-2771 ಕುಣಿಗಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇಬ್ಬರ ಗಂಟಲು ದ್ರವದ ಸ್ಯಾಂಪಲ್ ಪಡೆದು ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಇಂದು ವರದಿ ಬಂದಿದ್ದು, ಇಬ್ಬರಿಗೂ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

      ಪ್ರಸ್ತುತ ಸೋಂಕಿತರನ್ನು ತುಮಕೂರಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು ಆರೋಗ್ಯವಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ನಾಗೇಂದ್ರಪ್ಪ ನವರು ತಿಳಿಸಿದ್ದಾರೆ.

 

 

(Visited 397 times, 1 visits today)

Related posts

Leave a Comment