ಛತ್ರಪತಿ ಶಿವಾಜಿ ಜಯಂತಿ: ಸಾಂಕೇತಿಕ ಆಚರಣೆ

 ತುಮಕೂರು:

      ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ವಿವಿಧ ಮರಾಠ ಸಮುದಾಯದ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಆಚರಿಸಲಾಯಿತು.

      ಶಿವಾಜಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್ ಕುಮಾರ್ ದೇಶಕ್ಕೆ ಶಿವಾಜಿಯ ಕೊಡುಗೆ ಅಪಾರವಾದುದು. ದೇಶಕ್ಕಾಗಿ ಹೋರಾಡಿದ ಶಿವಾಜಿಯ ಶೌರ್ಯ, ಸಾಹಸ, ಯಶೋಗಾಥೆಗಳನ್ನು ಇತಿಹಾಸದ ಪುಟಗಳಿಂದ ನಾವು ಅರಿಯಬಹುದು. ಇಂದಿನ ಯುವಕರು ದೇಶದ ಉತ್ತಮ ಭವಿಷ್ಯಕ್ಕಾಗಿ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕೆಂದರು.

      ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಉಪನಿರ್ದೇಶಕ ಬಸವರಾಜಪ್ಪ ಆಪಿನಕಟ್ಟೆ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಅಧ್ಯಕ್ಷ ಟಿ.ಹೆಚ್. ಜನಾರ್ದನ್ ರಾವ್ ಸೋನಾಲೆ, ಗೌರವಾಧ್ಯಕ್ಷ ಆರ್. ನಾಗೇಶ್ ರಾವ್ ಗಾಯಕ್‍ವಾಡ್, ಕಾರ್ಯದರ್ಶಿ ಟಿ.ವಿ. ಶ್ರೀನಿವಾಸ್ ರಾವ್ ಸಾಳಂಕೆ, ಸಹಕಾರ್ಯದರ್ಶಿ ರಮೇಶ್ ರಾವ್ ಸಿಂಧೆ, ಶ್ರೀ ಶಿವಾಜಿ ಸೌಹಾರ್ದ ಪತ್ತಿನ ಸಹಕಾರ ನಿಯಮಿತದ ಅಧ್ಯಕ್ಷ ಟಿ.ಆರ್. ಸುರೇಶ್‍ರಾವ್ ಸೋನಾಲೆ, ಗಂಗೋಜಿರಾವ್, ಹರ್ಷ ಕದಂ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸುರೇಶ್, ನಾಗರಾಜ್, ಮತ್ತಿತರರು ಹಾಜರಿದ್ದರು. 

(Visited 54 times, 1 visits today)

Related posts

Leave a Comment