ಪೊಲೀಸ್ ಕಬಡ್ಡಿ ಆಡ್ಬೇಕಾಗುತ್ತೇ : ರೌಡಿಶೀಟರ್‍ಗಳಿಗೆ ಎಸ್ಪಿ ವಾರ್ನಿಂಗ್

ತುಮಕೂರು:

      ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದರೆ ಪ್ರೊ ಕಬಡ್ಡಿ ರೀತಿ ಪೊಲೀಸ್ ಕಬಡ್ಡಿ ಆಡಬೇಕಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಂಶಿಕೃಷ್ಣ ರೌಡಿಶೀಟರ್‍ಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

      ಸೋಮವಾರ ಬೆಳಗ್ಗೆ ನಗರದ ಚಿಲುಮೆ ಕಲ್ಯಾಣ ಮಂಟಪದ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ವಿವಿಧ ಪೊಲೀಸ್ ಠಾಣೆಗಳ ಲ್ಲಿನ ಸುಮಾರು 249 ರೌಡಿ ಶೀಟರ್‍ಗಳನ್ನು ಕರೆಸಿದ್ದು, ಅವರ ಪೂರ್ವಪರ ಮತ್ತು ಪ್ರಸ್ತುತ ಏನು ಕೆಲಸ ಮಾಡುತ್ತಿದ್ದಾರೆ ಎಂಬುದರ ಕುರಿತಾದ ಮಾಹಿತಿ ಪಡೆದರು. ಮುಂದಿನ ದಿನಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡು ಬಂದರೆ ಗಡಿಪಾರು ಮಾಡುವುದಾಗಿ ಎಚ್ಚರಿಸಿದರಲ್ಲದೆ, ಸಮಾರ್ಜಘಾತುಕ ಕೃತ್ಯಗಳಲ್ಲಿ ಭಾಗವಹಿಸಿದ್ರೆ ಕಟ್ಟುನಿಟ್ಟಿನ ಕಾನೂನಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

      ನಗರದ ಶೆಟ್ಟಿಹಳ್ಳಿ ಸೇತುವೆ ಬಳಿ ರಾತ್ರಿ ವೇಳೆ ವಾಹನಗಳ ತಪಾಸಣೆ ಮಾಡುತ್ತಿದ್ದ ಜಯನಗರ ಠಾಣೆ ಸಬ್ ಇನ್ಸ್ ಪೆಕ್ಟರ್ ನವೀನ್ ಮೇಲೆ ವಾಹನ ಹತ್ತಿಸಲು ದುಷ್ಕರ್ಮಿಗಳು ಯತ್ನಿಸಿದ್ದರು. ಇದರಿಂದ ನವೀನ್ ಗಂಭೀರವಾಗಿ ಗಾಯಗೊಂಡಿದ್ದರು. ರೌಡಿಶೀಟರ್‍ಗಳ ಪುಂಡಾಟಿಕೆ ಆರಂಭವಾಗಿತ್ತು. ಇದನ್ನು ಮನಗಂಡ ಎಸ್ಪಿ ರೌಡಿ ಶೀಟರ್‍ಗಳಿಗೆ ವಾರ್ನಿಂಗ್ ನೀಡಿದ್ದಾರೆ, ನಾಲ್ವರು ಡಿವೈಎಸ್ಪಿಗಳು, ಎಲ್ಲಾ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಮತ್ತು ಇನ್ಸ್ ಪೆಕ್ಟರ್‍ಗಳು ಇದೇ ವೇಳೆ ಹಾಜರಿದ್ದು, ರೌಡಿಶೀಟರ್‍ಗಳ ಬಗ್ಗೆ ಎಸ್ಪಿ ವಂಶಿ ಕೃಷ್ಣಗೆ ಮಾಹಿತಿ ನೀಡಿದರು.

(Visited 7 times, 1 visits today)

Related posts

Leave a Comment