ಮಾಜಿ ಶಾಸಕ ಬಿ.ಸುರೇಶ್ ಗೌಡರಿಂದ ಉಚಿತ ತರಕಾರಿ, ರೇಷನ್ ಕಿಟ್ ವಿತರಣೆ!!

ತುಮಕೂರು :

      ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಿಂದ ಸಂಕಷ್ಟ ಅನುಭವಿಸುತ್ತಿರುವ ಬಡವರಿಗೆ ಉಚಿತ ತರಕಾರಿ, ರೇಷನ್ ಕಿಟ್ ನ್ನು ಜನಪ್ರಿಯ ಮಾಜಿ ಶಾಸಕರಾದ ಬಿ.ಸುರೇಶ್ ಗೌಡ ರವರು ವಿತರಿಸಿದರು.

       ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ, ಗೂಳೂರು ಜಿಲ್ಲಾ ಪಂಚಾಯ್ತಿಯ ಹರಳೂರು ಗ್ರಾಮ ಪಂಚಾಯತಿ ಪ್ರತಿ ಮನೆ ಮನೆಗೆ ಉಚಿತವಾಗಿ ಮಾಸ್ಕ್ ಹಾಗೂ ನೇರವಾಗಿ ರೈತರಿಂದ ಖರೀದಿ ಮಾಡಿದ ತರಕಾರಿಯನ್ನು ಮತ್ತು ರೇಷನ್ ಕಾರ್ಡ್ ರಹಿತ ಬಡ ಕುಟುಂಬಗಳಿಗೆ ರೇಷನ್ ಕಿಟ್ ನ್ನು ನೀಡಿದರು.

      ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಿವಕುಮಾರ್, ಹರಳೂರು ಕುಮಾರಯ್ಯ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಾಜಣ್ಣ, ಗ್ರಾಮ ಪಂ ಸದಸ್ಯರಾದ ರಮೇಶ್, ಪುಟ್ಟರಾಜು, ಶಾಂತಕುಮಾರ್, ಕೃಷ್ಣಪ್ಪ, ಮುಖಂಡರಾದ ಹೊನ್ನೇಶ್ ಕುಮಾರ್, ಪಾಲಣ್ಣ ಮುಂತಾದವರು ಭಾಗವಹಿಸಿದ್ದರು.

(Visited 52 times, 1 visits today)

Related posts

Leave a Comment