ತುರುವೇಕೆರೆ:
ಪಟ್ಟಣ ಪಂಚಾಯಿತಿ ಬಜೆಟ್ ಸಭೆಯ ಮುಕ್ತಾಯಕ್ಕೂ ಮುನ್ನ ಸದಸ್ಯರುಗಳ ಸಲಹೆಯನ್ನು ಕೇಳದೆ ಮತ್ತು ಪಟ್ಟಣ ಪಂಚಾಯಿತಿಗೆ ಮೊದಲ ಬಾರಿಗೆ ಆಗಮಿಸಿದ ತಹಶೀಲ್ದಾರ್‍ಗೆ ಸ್ವಾಗತ ಕೋರದೆ ಹಾಗೂ ಸಭೆಯಲ್ಲಿ ವಂದನಾರ್ಪಣೆ ಮಾಡದೆ ಸಭೆಯನ್ನು ಅತುರಾತುರವಾಗಿ ಮುಕ್ತಾಯಕ್ಕೆ ಮುಂದಾದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಶಾಸಕರು ಶಿಷ್ಠಾಚಾರದ ಪಾಠ ಮಾಡಿದರು.
ಬಜೆಟ್ ಸಭೆಯಲ್ಲಿ ತಹಶೀಲ್ದಾರ್ ನಯೀಮ್ ಉನ್ನೀಸ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ತಬಸುಮ್, ಸದಸ್ಯರುಗಳಾದ ಶಶಿಶೇಕರ್, ಕೆ.ಟಿ.ಶಿವಶಂಕರ್, ಶ್ರೀನಿವಾಸ್, ನದೀಂ, ನವ್ಯಪ್ರಕಾಶ್, ಮಾನಸಪ್ರಸನ್ನ, ನೇತ್ರಾವತಿ ರಂಗಸ್ವಾಮಿ, ರುದ್ರೇಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮುಂಜುಳಾದೇವಿ, ಇಂಜಿನಿಯರ್ ಸತ್ಯನಾರಯಣ್, ಸಿಬ್ಬಂದಿವರ್ಗ ಹಾಜರಿದ್ದರು.
(Visited 18 times, 1 visits today)