ನಾಳೆ ನಗರಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ


ತುಮಕೂರು:


ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾಘಟಕದ ಅಧಿಕಾರ ಸ್ವೀಕಾರ ಹಾಗೂ ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರಿಗೆ ಹೆಚ್ಚು ನೆರವು ನೀಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಭಿನಂದನಾ ಸಮಾರಂಭವನ್ನು ಜೂ.15ರಂದು ಬುಧವಾರ ಬೆಳಿಗ್ಗೆ 10.30ಕ್ಕೆ ನಗರದ ಡಾ.ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ.
ಸಿದ್ಧಗಂಗಾ ಮಠಾಧ್ಯಕ್ಷ ಶ್ರೀಸಿದ್ಧಲಿಂಗಸ್ವಾಮೀಜಿ ಸಾನಿಧ್ಯದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಿ ಅಭಿನಂದನೆ ಸ್ವೀಕರಿಸುವರು. ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಭಿನಂದನಾ ನುಡಿಯಾಡಲಿದ್ದು, ಗೃಹಸಚಿವ ಆರಗ ಜ್ಞಾನೇಂದ್ರ ನೂತನ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸುವರು. ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಅಧ್ಯಕ್ಷತೆ ವಹಿಸುವರು.
ಐಎಫ್‍ಡಬ್ಲ್ಯೂಜೆ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ನೂತನ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದು, ಮುಖ್ಯ ಅತಿಥಿಯಾಗಿ ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಮಾಜಿ ಶಾಸಕರಾದÀ ಶಿವಣ್ಣ, ಗಂಗಹನುಮಯ್ಯ, ಡಿಸಿ ವೈ.ಎಸ್.ಪಾಟೀಲ್, ಎಸ್ಪಿ ರಾಹುಲ್‍ಕುಮಾರ್‍ಶಹಾಪುರವಾಡ್, ಆಯುಕ್ತೆ ರೇಣುಕಾ ಪಾಲ್ಗೊಳ್ಳುವರು. , ಪದಗ್ರಹಣ ಸ್ವೀಕರಿಸುವವರು: ಚಿ.ನಿ.ಪುರುಷೋತ್ತಮ್(ಅಧ್ಯಕ್ಷ), ಎಲ್.ಚಿಕ್ಕೀರಪ್ಪ, ಶ್ಯಾ.ನ.ಪ್ರಸನ್ನಮೂರ್ತಿ, ತಿಪಟೂರು ಕೃಷ್ಣ(ಉಪಾಧ್ಯಕ್ಷರು), ಟಿ.ಇ.ರಘುರಾಂ(ಪ್ರಧಾನ ಕಾರ್ಯದರ್ಶಿ), ಎಲ್.ರಂಗಧಾಮಯ್ಯ, ಸತೀಶ್ ಹಾರೋಗೆರೆ, ದಶರಥ (ಕಾರ್ಯದರ್ಶಿಗಳು) ಹಾಗೂ ನಿರ್ದೇಶಕರುಗಳಾಗಿ ಟಿ.ಎಸ್.ಕೃಷ್ಣಮೂರ್ತಿ, ಮಂಜುನಾಥ್‍ನಾಯ್ಕ್(ತಾಳಮಕ್ಕಿ), ಕೆ.ನರಸಿಂಹಮೂರ್ತಿ, ನಂದೀಶ್ ಬಿ.ಎಲ್, ಎಚ್.ಎಸ್.ಪರಮೇಶ್, ಪ್ರಸನ್ನದೊಡ್ಡಗುಣಿ, ಮಂಜುನಾಥ್(ಹಾಲ್ಕುರಿಕೆ), ಯಶಸ್.ಕೆ.ಪದ್ಮನಾಭ್, ಸಿ.ಜಯಣ್ಣ, ಎಸ್.ಡಿ.ಚಿಕ್ಕಣ್ಣ, ಭೈರೇಶ್ ಎಂ.ಬಿ., ನಾಗೇಂದ್ರಪ್ಪ ಎಚ್.ಕೆ., ಶಂಕರ್ ಸಿರಾ, ನಾಗರಾಜು ಎನ್.ಎನ್, ಪಿ.ಎಸ್.ಮಲ್ಲಿಕಾರ್ಜುನಸ್ವಾಮಿ ಪದ ಸ್ವೀಕರಿಸುವರು.

(Visited 1 times, 1 visits today)

Related posts