ಮೈಕ್ರೋ ಫೈನಾನ್ಸ್ ಗಳು ಹಣ ವಸೂಲಿ ಮಾಡುವಂತಿಲ್ಲ : ಶಾಸಕ

ತುರುವೇಕೆರೆ:

      ಬಡವರ ಪರವಾಗಿ ಸದಾ ಚಿಂತಿಸುವ ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಬಡವರ ಬಂದು ಯೋಜನೆಯ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಯತ್ತ ಬ್ಯಾಂಕ್ ಸಾಲ ಸವಲತ್ತುಗಳನ್ನು ಕೊಂಡೊಯ್ಯುವ ಕೆಲಸ ಮಾಡಿದ್ದಾರೆ ಎಂದು ಶಾಸಕ ಮಸಾಲಜಯರಾಮ್ ತಿಳಿಸಿದರು.

      ಪಟ್ಟಣದ ಡಿ.ಸಿ.ಸಿ. ಬ್ಯಾಂಕ್ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಬಡವರ ಬಂದು ಯೋಜನಯಡಿ ಬೀದಿ ಬದಿ ವ್ಯಾಪಾರಿಗಳಿಗೆ 10.000 ಸಾವಿರ ರೂಪಾಯಿಗಳ ಸಾಲದ ಚೆಕ್ ವಿತರಿಸಿ ಮಾತನಾಡಿದ ಅವರು ಡಿ.ಸಿ.ಸಿ. ಬ್ಯಾಂಕ್ ಒಂದು ಸಹಕಾರಿ ಬ್ಯಾಂಕ್‍ಆಗಿ ಕೋಟ್ಯಾಂತರ ರೂಪಾಯಿಗಳ ವ್ಯವಹಾರ ನಡೆಸುತತಿದ್ದು, ರೈತರಿಗೂ ಸಾಲ ನೀಡುವ ಜೊತೆಗೆ ಬಡ ಜನರಿಗೆ ಯಾವುದೇ ಗ್ಯಾರಂಟಿಯಿಲ್ಲದೆ ಸಾಲ ನೀಡುತ್ತಿರುವುದು ಪ್ರಶಂಸನೀಯ ಕಾರ್ಯವಾಗಿದೆ, ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೂಡ ರೈತರುಗಳಿಗೆ ವರ್ಷಕ್ಕೆ 10.000ಸಾವಿರ ನೀಡುತ್ತಾ ರೈತರ ಪರವಾಗಿ ಕೆಲಸ ನಿರ್ವಹಿಸುತ್ತಿದೆ ಸಹಕಾರಿ ಕ್ಷೇತ್ರದಲ್ಲಿ ರೈತರಿಗೆ ಬಡ್ಡಿ ರಹಿತ ಸಾಲ ನೀಡುವ ನಿಟ್ಟಿನಲ್ಲಿ ಮುಂದಿನ ಅಧಿವೇಶನದಲ್ಲಿ ನಾನು ಚರ್ಚಿಸುತ್ತೇನೆ, ರೈತರ ಮಗನಾಗಿ ಬೆಳೆದಿರುವ ನನಗೆ ರೈತರ ಕಷ್ಟ ಸುಖಗಳ ಅರಿವಿದೆ, ಸಾಲ ಪಡೆದವರು ಸರಿಯಾದ ಕಾರ್ಯಕ್ಕೆ ಸದ್ವಿನಿಯೋಗ ಮಾಡಿಕೊಂಡು ಸಾಲ ಮರಿಪಾವತಿಸಿ ಎಂದು ಸಲಹೆ ನೀಡಡಿದರು.
ಮೈಕ್ರೋ ಫೈನಾನ್ಸ್‍ಗಳು ಹಣ ವಸೂಲಿ ಮಾಡುವಂತಿಲ್ಲ: ಲಾಕ್ ಡೌನ್ ಹಿನ್ನೆಲೆಯಲ್ಲಿ ರೈತರು, ಕೂಲಿ ಕಾರ್ಮಿಕರು ಹಾಗೂ ಹಳ್ಳಿಗಳ ಜನಸಾಮನ್ಯರಿಗೆ ಸಾಲ ನೀಡಿರುವ ಮೈಕ್ರೋ ಪೈನಾನ್ಸ್ ಸಂಸ್ಥೆ ಸೇರಿದಂತೆ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ ಯಾವುದೇ ಕಂತುಗಳನ್ನು 3 ತಿಂಗಳುಗಳ ಕಾಲ ಸಾಲವಸೂಲಿ ಮಾಡುವಂತಿಲ್ಲ ಹಾಗೇನಾದರೂ ವಸೂಲಿ ಮಾಡಲು ಮುಂದಾದರೆ ನನ್ನ ಗಮನಕ್ಕೆ ತನ್ನಿ ಎಂದರು.

      ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ದೇವರಾಜ್ ಮಾತನಾಡಿ, ಬಡವರ ಬಂದು ಯೋಜನೆಯ ಸರ್ಕಾರದ ಯೋಜನೆಯಲ್ಲ, ಇದು ನಮ್ಮ ಬ್ಯಾಂಕಿನ ಅಧ್ಯಕ್ಷರಾದ ರಾಜಣ್ಣನವರ ಕನಸಿನ ಯೋಜನೆ, ಪ್ರತಿಯೊಬ್ಬರಿಗೂ ಸಾಲ ಸಿಗಬೇಕೆಂಬುದಷ್ಟೆ ಅವರ ಆಶಯ ಮೀಟರ್ ಬಡ್ಡಿ ಹಾವಳಿಯಿಂದ ತತ್ತರಿಸಿದ್ದ ಬೀದಿಬದಿ ವ್ಯಾಪಾರಿಗಳಿಗೆ ಈ ಯೋಜನೆ ಅನುಕೂಲಕರವಾಗಿದೆ ಎಂದರು

      ಈ ಸಂಧರ್ಭದಲ್ಲಿ ಬ್ಯಾಂಕ್ ಮೇಲ್ವಿಚಾರಕ ಎಸ್.ಪಿ.ಗೌಡ, ವ್ಯವಸ್ಥಾಪಕ ನಾಗರಾಜು, ಮುಖಂಡರಾದ ವಿ.ಟಿ.ವೆಂಕಟರಾಮಯ್ಯ, ಕೊಂಡಜ್ಜಿವಿಶ್ವನಾಥ್, ದಾನೀಗೌಡ, ಕೊಳಾಲನಾಗರಾಜು, ಉದಯಕುಮಾರ್ ಇದ್ದರು.

(Visited 9 times, 1 visits today)

Related posts

Leave a Comment