ದಲಿತರ ಆರ್ಥಿಕ ಸಬಲೀಕರಣಕ್ಕೆ ಸಂಘಗಳು ಅವಶ್ಯಕ


ತುರುವೇಕೆರೆ:


ದೀನ ದಲಿತರ ಆರ್ಥಿಕ ಸಬಲೀಕರಣದ ಉದ್ದೇಶ ಈಡೇರಬೇಕಾದರೆ ಸಹಕಾರ ಸಂಘಗಳ ಅವಶ್ಯಕತೆಯಿದೆ ಎಂದು ಮೈಸೂರಿನ ಉರಿಲಿಂಗಿಪೆದ್ದಿಮಠದ ಜ್ನಾನ ಪ್ರಕಾಶ್ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಮಾಯಸಂದ್ರ ರಸ್ತೆಯ ಪೆÇೀಲೀಸ್ ಠಾಣೆ ಮುಂಭಾಗ ಅಂಬೇಡ್ಕರ್ ವಿವಿದುದ್ದೇಶ ಸಹಕಾರ ಸಂಘಕ್ಕೆ ಬೌದ್ದ ಧರ್ಮದ ಪ್ರಕಾರ ಪೂಜೆ ಮಾಡುವ ಮೂಲಕ ಸಂಘಕ್ಕೆ ಅಧಿಕೃತ ಚಾಲನೆ ನೀಡಿ ಮಾತನಾಡಿದ ಅವರು ದೀನ ದಲಿತರ ಆರ್ಥಿಕ ಪ್ರಗತಿಯನ್ನು ಸಹಕಾರ ಸಂಘದ ಮೂಲಕ ಉನ್ನತೀಕರಿಸುವ ದೃಷ್ಟಿಯಿಂದ ಅಂಬೇಡ್ಕರ್ ವಿವಿದುದ್ದೇಶ ಸಹಕಾರ ಸಂಘ ಈಡೀ ರಾಜ್ಯದಲ್ಲಿ ತನ್ನ ಶಾಖೆಗಳನ್ನು ತರೆಯುತ್ತಿದೆ ಈ ನಿಟ್ಟಿನಲ್ಲಿ ತುರುವೇಕೆರೆಯಲ್ಲಿ ಸಂಘದ ನೂತನ ಶಾಖೆಯನ್ನು ತೆರದಿದ್ದು ಈ ಸಹಕಾರ ಸಂಘ ಉನ್ನತ ಮಟ್ಟಕ್ಕೆ ಬೆಳೆಯಲಿ ಕೋಟ್ಯಾಂತರ ರೂಪಾಯಿ ವಹಿವಾಟು ಮಾಡುವ ಹಂತಕ್ಕೆ ತಲುಪಲಿ. ಸಂಘಕ್ಕೆ ಅಂಬೇಡ್ಕರ್ ಅನುಯಾಯಿಗಳು ಜಾತ್ಯಾತೀತವಾಗಿ ಸಂಘದ ಸದಸ್ಯತ್ವ ಪಡೆದು ಸಂಘದಿಂದ ದೊರೆಯುವ ಸವಲತ್ತುಗಳನ್ನು ಸದ್ವಿನಿಯೋಗ ಮಾಡಿಕೊಳ್ಳಲಿ ಎಂದು ಆಶಿಸಿ ಸಂಘದ ಸದಸ್ಯರುಗಳಿಗೆ ಶುಭಕೋರಿದರು.
ಸಂಘದ ಸಂಸ್ಥಾಪಕ ಅಧ್ಯಕ್ಷ ತುಂಬಲ ರಾಮಣ್ಣ ಮಾತನಾಡಿ ನಮ್ಮ ಸಹಕಾರ ಸಂಘ ದೀನ ದಲಿತರ ಏಳಿಗೆಯನ್ನು ಗುರಿಯಾಗಿಸಿಕೊಂಡು ಅಸ್ತಿತ್ವಕ್ಕೆ ಬಂದಿದ್ದು, ರಾಜ್ಯಾದ್ಯಂತ ಶಾಖೆಗಳನ್ನು ತೆರೆಯುವ ಅನುಮತಿಯನ್ನು ಸರ್ಕಾರದಿಂದ ಪಡೆದಿದ್ದು, ಸಂಘ ಹಲವಾರು ಶಾಖೆಗಳನ್ನು ಮೈಸೂರು ಭಾಗದಲ್ಲಿ ಹೊಂದಿದ್ದು ಇದೀಗ ತುರುವೇಕೆರೆ ತನ್ನ ಶಾಖೆಯನ್ನು ತೆರದಿದಿ ಸಂಘಕ್ಕೆ ದೀನದಲಿತರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಿ ನಮ್ನ ಸಹಕಾರ ಸಂಘ ದಲಿತರ ಅಭ್ಯುದಯಕ್ಕೆ ಶ್ರಮಿಸುತ್ತಿದ್ದು ಆರ್ಥಿಕವಾಗಿ ಸಮುದಾಯವನ್ನು ಮೇಲೆತ್ತುವ ಕೆಲಸ ಮಾಡುತ್ತಿದೆ ಎಂದರು.
ಈ ವೇಳೆ ತಾಲ್ಲೂಕಿನ ದಲಿತ ಮುಖಂಡರು ಸ್ವಾಮೀಜಿಯವರಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಕೊಡಗಿಹಳ್ಳಿ ಹನುಮಂತಯ್ಯ, ಡೊಂಕಿಹಳ್ಳಿ ರಾಮಣ್ಣ, ಜಗದೀಶ್, ರಾಮಚಂದ್ರು ಪರ, ಮಹಾದೇವಣ್ಣ ಬೀಚನಹಳ್ಳಿ, ಬಾಳೇಕಾಯಿ ಶೇಖರ್, ಮುರುಳಿ ಇತರರು ಇದ್ದರು.

(Visited 71 times, 1 visits today)

Related posts