ತುರುವೇಕೆರೆ:

ತಾಲ್ಲೂಕಿನ ರಂಗನಾಥಪುರ ಗ್ರಾಮದ ದಲಿತ ಕುಟುಂಕ್ಕೆ ಸೇರಿದ ಗಂಗಣ್ಣನವರ ಜಮೀನನ್ನು ಬಲಮಾದಿಹಳ್ಳಿ ಗ್ರಾಮದ ಸವರ್ಣೀಯ ಕುಟುಂಬವೊಂದು ವಾಮ ಮಾರ್ಗದ ಮೂಲಕ ಆಕ್ರಮಿಸಿಕೊಳ್ಳಲು ಮುಂದಾಗಿರುವುದು ಖಂಡನೀಯ ಎಂದು ದ.ಸಂ.ಸ. ತಾಲ್ಲೂಕು ಘಟಕದ ಅಧ್ಯಕ್ಷ ಕುಣಿಕೇನಹಳ್ಳಿ ಜಗಧೀಶ್ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಂಗನಾಥಪುರ ಗ್ರಾಮದ ಗಂಗಣ್ಣ ಎಂಬುವವರು ಬಲಮಾದಿಗಳ್ಳಿ ಗ್ರಾಮದ ಸರ್ವೆ ನಂಬರ್ 5ರಲ್ಲಿ 30ಗುಂಟ ಜಮೀನನ್ನು ಹೋದಿದ್ದು, ಸದರಿ ಜಮೀನು ಸರ್ಕಾರದಿಂದಲೇ ಇವರಿಗೆ ಮುಂಜೂರಾಗಿದ್ದು, ಜಮೀನಿಗೆ ಸಂಬಂದಿಸಿದ ಸಾಗುವಳಿ ಚೀಟಿಯನ್ನು ಬಗರ್‍ಹುಕ್ಕುಂ ಕಮಿಟಿಯಲ್ಲಿ ಅಧಿಕೃತವಾಗಿ ಪಡೆದಿದ್ದಾರೆ, ಅಲ್ಲದೆ ಸುಮಾರು ನವತ್ತು ವರ್ಷಗಳಿಂದ ಸದರಿ ಜಮೀನಿನಲ್ಲೆ ಅನುಭವದಲ್ಲಿದ್ದಾರಲ್ಲದೆ ಇಂದಿಗೂ ಇವರೇ ಅನುಭವದಲ್ಲಿದ್ದಾರೆ, ಆದರೂ ಬಲಮಾದಿಹಳ್ಳಿ ಗ್ರಾಮದ ಸವರ್ಣಿಯ ಕುಟುಂಬದವರೊಬ್ಬರು ಇವರನ್ನು ವಾಮ ಮಾರ್ಗದ ಮೂಲಕ ಒಕ್ಕಲೆಬ್ಬಿಸುವ ಹುನ್ನಾರಕ್ಕೆ ಮುಂದಾಗಿದ್ದಾರೆ, ಇದು ಖಂಡನೀಯ ವಿಚಾರ, ಕೂಡಲೇ ತಾಲ್ಲೂಕು ಆಡಳಿತ ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿ ಬಲಮಾದಿಹಳ್ಳಿ ಗ್ರಾಮದ ಸವರ್ಣಿಯರಿಗೆ ಸೇರಿದೆ ಎನ್ನಲಾದ ಸರ್ವೆ ನಂಬರ್ 40ರಲ್ಲಿನ ಜಮೀನನ್ನು ದುರಸ್ತಿ ಮಾಡಿಸಿ ಅದ್ದುಬಸ್ತು ಮಾಡಿ ಅಳತೆ ಮಾಡಿದರೆ ಈ ಪ್ರಕರಣ ಸುಖಾಂತ್ಯ ಕಾಣಲಿದೆ. ಆದರೆ ಅದನ್ನು ಬಿಟ್ಟು ದಲಿತ ಸಮುದಾಯದ ಗಂಗಣ್ಣನ ಜಮೀನೇ ನನ್ನ ಜಮೀನು ಎನ್ನುವ ಮೂಲಕ ಬಲಮಾದಿಹಳ್ಳಿಯ ಕುಟುಂಬದವರು ವಿನಾಕಾರಣ ತೊಂದರೆ ಕೊಡುತ್ತಿರುವುದು ಸರಿಯಲ್ಲ ಇದು ಇದೇರೀತಿ ಮುಂದುವರಿದರೆ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ಮಾಡುತ್ತದೆ ಎಂದು ಎಚ್ಚರಿಸಿದರು.
ಛಲವಾದಿ ಮಹಾಸಭಾದ ಅಧ್ಯಕ್ಷ ಡೊಂಕಿಹಳ್ಳಿ ರಾಮಣ್ಣ ಮಾತನಾಡಿ ತಾಲ್ಲೂಕಿನಲ್ಲಿ ದಲಿತರ ಜಮೀನುಗಳನ್ನು ಗುರಿಯಾಗಿಸಿಕೊಂಡ ಕೆಲವರು ಖಾತೆ ಪಹಣಿ ಮಾಡಿಸಿಕೊಳ್ಳದ ದಲಿತರ ಜಮೀನುಗಳನ್ನು ಹುಡುಕಿ ದಲಿತರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಮುಂದಾಗಿರುವುದು ಖಂಡನೀಯವಾದ ವಿಚಾರ ದಲಿತರಿಗೆ ಇಂತಹ ವಿಚಾರಗಳಲ್ಲಿ ಸೂಕ್ತ ರಕ್ಷಣೆ ನೀಡುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕಿದೆ ದಲಿತರ ಜಮೀನನ್ನು ಉಳಿಸಿವ ನಿಟ್ಟಿನಲ್ಲಿ ನಮ್ಮ ಸಂಘಟನೆ ಮುಂದಿನ ದಿನಗಳಲ್ಲಿ ಹೋರಾಠಮಾಡಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಮೀನಿನ ಕುಟುಂಬಸ್ಥರಾದ ಲೋಕೇಶ್, ಮುಖಂಡರುಗಳಾದ ಪುರ ರಾಮಚಂದ್ರಯ್ಯ, ಲಕ್ಷ್ಮೀನರಸಿಂಹಯ್ಯ, ತಿಮ್ಮಯ್ಯ, ಪುಟ್ಟರಾಜು, ಪ್ರಸನ್ನಕುಮಾರ್, ಮುರುಳಿ ಇತರರು ಇದ್ದರು.

(Visited 7 times, 1 visits today)