ಅಪ್ರಾಪ್ತ ಬಾಲೆಯ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ನರಭಕ್ಷಕರು

  ನಂಜನಗೂಡು:

    ಬಡ ಕೂಲಿಕಾರ್ಮಿಕರ ಪುಟ್ಟ ಗುಡಿಸಿಲಿನಲ್ಲಿ ಒಬ್ಬಂಟಿಯಾಗಿದ್ದ ಪುಟ್ಟ ಕಂದಮ್ಮಳನ್ನು ಗಮನಿಸಿ ಅತ್ಯಾಚಾರವೆಸಗಿ ಕೊಲೆ ಮಾಡಿ ಪರಾರಿಯಾಗಿರುವ ಅಮಾನವೀಯ ಘಟನೆ ನಡೆದಿದೆ.

      ನಂಜಗೂಡಿನ ಕೈಗಾರಿಕಾ ನಿರ್ಜನ ಪ್ರದೇಶದ ಪುಟ್ಟ ಗುಡಿಸಲೊಂದರಲ್ಲಿ ವಾಸಿಸುತ್ತಿರುವ ಕುಮಾರ ಮತ್ತು ತಾಯಮ್ಮ ಎಂಬ ದಂಪತಿಗಳ ಮೊದಲ ಮಗ¼ರುವ ಬಾಲಕಿ ಚಾಮಲಾಪುರದ ಹುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದಳು. ಬಾಲಕಿಯ ತಂದೆ ಕುಮಾರ್, ಸನಿಹದ ಜನಿತ್ ಟೆಕ್ಸ್‍ಟೈಲ್ಸ್ ಕಾರ್ಖಾನೆಯ ಬಳಿ ಪುಟ್ಟದಾದ ನಾಲ್ಕು ಚಕ್ರದ ಗಾಡಿಯಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದರು. ಇವರು ಬೆಳಗ್ಗೆ 9 ಗಂಟೆಗೆ ತಮ್ಮ ಹೋಟೆಲ್‍ಗೆ ಕೆಲಸಕ್ಕೆ ತೆರಳಿದರೆ ಮತ್ತೆ ಮನೆಗೆ ಹಿಂತಿರುಗುವುದು ಸಂಜೆ 6 ಗಂಟೆ ವೇಳೆಗೆ. ಇದನ್ನು ಗಮನಿಸಿ, ಹೊಂಚುಹಾಕುತ್ತಿದ್ದ ಕಾಮುಕರು ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆಗೈದಿದ್ದಾರೆ ಎನ್ನಲಾಗುತ್ತಿದೆ.

      ಸಂಜೆ ಐದು ಗಂಟೆಯ ಸಮಯದಲ್ಲಿ ಗುಡಿಸಿಲಿನಲ್ಲಿ ಬಾಗಿಲು ತೆರೆದು ನೋಡಿದಾಗ ಪುಟ್ಟ ಬಾಲಕಿ ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದಳು. ಎಷ್ಟೇ ಕೂಗಾಡಿದರೂ ಕಣ್ಣು ತೆರೆಯದ ಮೃತ ಬಾಲಕಿಯ ಚಲನವಲನಗಳನ್ನು ನೋಡಿದ ತಂದೆ ತಾಯಿಯರ ಆಕ್ರಂದನ ಮುಗಿಲುಮುಟ್ಟಿದೆ.

      ಕೂಡಲೇ ದಾರಿಹೋಕರು ಇವರ ಕಿರುಚಾಟವನ್ನು ನೋಡಿ ಸಮೀಪಕ್ಕೆ ಹೋಗಿ ಸ್ಪಷ್ಟ ಮಾಹಿತಿಯನ್ನು ತಿಳಿದು ನಂಜನಗೂಡು ಪಟ್ಟಣ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ನಂಜನಗೂಡು ಪಟ್ಟಣ ಠಾಣೆ ಪಿಎಸ್‍ಐ ಆನಂದ್ ಹಾಗೂ ವೃತ್ತ ನಿರೀಕ್ಷಕ ಶೇಖರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಬಾಲಕಿಯ ತಂದೆ ತಾಯಿಗೆ ಧೈರ್ಯ ಹೇಳಿ ಕಾಮ ಪಿಶಾಚಿಗಳನ್ನು ಬಂಧಿಸಿ, ನ್ಯಾಯ ಒದಗಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. 

      ನಂಜನಗೂಡಿನ ಇತಿಹಾಸದಲ್ಲಿ ಕಂಡು ಕೇಳರಿಯದ ಧಾರುಣ ಘಟನೆ ನಡೆದಿದ್ದು, ಬಾಲೆಯ ಚಲನ ವಲನ ಹಾಗೂ ಒಂಟಿಯಾಗಿರುವುದನ್ನು ಗಮನಿಸಿ, ಸಾಮೂಹಿಕ ಅತ್ಯಾಚಾರ ಮಾಡಿ ಕಾಮುಕ ತನವನ್ನು ಮೆರೆದಿರುವ ನರ ಕಾಮುಕ ಭಕ್ಷಕರ ಈ ದುಷ್ಕøತ್ಯವನ್ನು ಗಮನಿಸಿದರೆ ಮೃತಳ ಗುಡಿಸಿಲಿಗೆ ಸನಿಹದಲ್ಲಿರುವ ಪೋಕರಿಗಳ ಮೇಲೆ ಸಂಶಯ ಕಾಡುತ್ತಿದ್ದು, ಇನ್ನು ಮೈಸೂರಿನ ಪೊಲೀಸ್ ವರಿಷ್ಠಾಧಿಕಾರಿಗಳು ಈಗ ಮೃತ ಪುಟ್ಟ ಬಾಲಕಿಯ ಗುಡಿಸಿಲಿನಲ್ಲಿ ಬಂದು ಪರಿಶೀಲನೆ ಮಾಡುತ್ತಿದ್ದಾರೆ ಎನ್ನಲಾಗಿದೆ.

(Visited 24 times, 1 visits today)

Related posts

Leave a Comment