BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ೪೦ಕ್ಕೂ ಹೆಚ್ಚು ಮಕ್ಕಳಿಗೆ ನೇತ್ರ ತಪಾಸಣೆ
  • ಸೆ.೬ರ ರಜತ ಮಹೋತ್ಸವಕ್ಕೆ ಸಜ್ಜಾದ ಹಿಂದುಳಿದ ಸಮುದಾಯ
  • ಆಸೆ ಇದ್ದರೆ ಸಾಲದು ಕಠಿಣ ಪರಿಶ್ರಮ ಬೇಕು: ವಿರೇಶಾನಂದ ಸರಸ್ವತಿ ಸ್ವಾಮೀಜಿ
  • ಶ್ರದ್ಧಾ ಭಕ್ತಿಯಿಂದ ಈದ್ ಮಿಲಾದ್ ಹಬ್ಬ ಆಚರಣೆ
  • ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ
  • ಕ್ಷೇತ್ರದ ಯಾವೊಬ್ಬ ಮತದಾರರನ್ನೂ ಪಟ್ಟಿಯಿಂದ ಕೈ ಬಿಡದಂತೆ ಸೂಚನೆ
  • ಎಸ್‌ಐಆರ್: ಆಕ್ಷೇಪಣೆ ಸಲ್ಲಿಕೆಗೆ ಸೆಪ್ಟೆಂಬರ್ ೨೩ ಕೊನೆಯ ದಿನ
  • ಮಾಜಿ ಮಂತ್ರಿ ವೀರಣ್ಣ ಅವರ ನಿಧನದ ಹಿನ್ನೆಲೆಯಲ್ಲಿ ನುಡಿನಮನ ಕಾರ್ಯಕ್ರಮ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಅಯ್ಯಪ್ಪ ಮಾಲಾಧಾರಿ ಭಕ್ತರ ಮೇಲೆ ಪೊಲೀಸರ ದರ್ಪ ಸರಿಯಲ್ಲ : ಟಿ.ಬಿ.ಶೇಖರ್
ತುಮಕೂರು ಜಿಲ್ಲಾ ಸುದ್ಧಿಗಳು

ಅಯ್ಯಪ್ಪ ಮಾಲಾಧಾರಿ ಭಕ್ತರ ಮೇಲೆ ಪೊಲೀಸರ ದರ್ಪ ಸರಿಯಲ್ಲ : ಟಿ.ಬಿ.ಶೇಖರ್

By News Desk BenkiyabaleUpdated:November 20, 2018 4:12 pm

 ತುಮಕೂರು:

      ಕೇರಳ ರಾಜ್ಯದ ಶಬರಿಮಲೈ ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ಅಯ್ಯಪ್ಪ ಮಾಲಾದಾರಿ ಭಕ್ತರ ಮೇಲೆ ಪೊಲೀಸರು ದರ್ಪ ತೋರಿಸುತ್ತಿರುವುದು ಸರಿಯಲ್ಲ ಎಂದು ಶಬರಿಮಲ ಅಯ್ಯಪ್ಪಸೇವಾ ಸಮಾಜಂ (ಎಸ್‍ಎಎಸ್‍ಎಸ್) ಕೇಂದ್ರ ಸಮಿತಿ ಅಧ್ಯಕ್ಷರಾದ ಟಿ.ಬಿ.ಶೇಖರ್ ತಿಳಿಸಿದರು.

      ನಗರದ ಗಾರ್ಡನ್‍ರಸ್ತೆಯ ಅಯ್ಯಪ್ಪಸ್ವಾಮಿ ದೇವಾಲಯ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಈ ಗೊಂದಲ ಏರ್ಪಟ್ಟಿದ್ದು ಬೂಟುದಾರಿ ಪೊಲೀಸರು ಭಕ್ತರನ್ನು ತುಳಿಯುವ ದೃಶ್ಯ ಖಂಡನೀಯ ಎಂದರು.

      ಈ ಹಿಂದೆ 100-200 ಜನ ಪೊಲೀಸರು ಖಾಕಿ ಸಮವಸ್ತ್ರದಲ್ಲಿ ಹೆಗಲಮೇಲೆ ಕಪ್ಪು ಟವಲ್ ಹಾಕಿಕೊಂಡು ಬೂಟ್ಸ್‍ಗಳನ್ನು ಧರಿಸದೆ ಭಕ್ತರಿಗೆ ಸಹಕಾರ ನೀಡುತ್ತಿದ್ದರು ಈಗ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿ ಇದೆ ಎಂಬ ನೆಪವೊಡ್ಡಿ ಅಲ್ಲಿಗೆ ತೆರಳುತ್ತಿರುವ ಭಕ್ತರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

      ನ.17ರಿಂದ ಜನವರಿ 18 ರವರೆಗೆ ಮಂಡಲ ಮಹೋತ್ಸವ ಜಾತ್ರೆ, ಕಾರ್ತೀಕದಿಂದ ಮಾಘಮಾಸದವರೆಗೆ ನಡೆದು ಸಂಕ್ರಾಂತಿ ಮಕರ ಜ್ಯೋತಿ ದರ್ಶನದೊಂದಿಗೆ ಕೊನೆಯಾಗುವುದು. ಈ ಸಂದರ್ಭದಲ್ಲಿ ಕರ್ನಾಟಕ ಕೇರಳ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯ ಹಾಗೂ ಬೇರೆ ದೇಶಗಳಿಂದ ಸುಮಾರು ಐದೂವರೆ ಕೋಟಿಯಷ್ಟು ಭಕ್ತರು ಅಲ್ಲಿ ಜಮಾವಣೆಗೊಳ್ಳಲಿದ್ದು ಕರ್ನಾಟಕ ರಾಜ್ಯದಿಂದ 60 ರಿಂದ 70 ಲಕ್ಷ ಭಕ್ತರು ಸೇರುತ್ತಾರೆ ಎಂದು ಟಿ.ಬಿ.ಶೇಖರ್ ತಿಳಿಸಿದರು.

      ಅಯ್ಯಪ್ಪದರ್ಶನಕ್ಕೆ ಮಾಲಾಧಾರಿಗಳು ತಂಡೋಪ ತಂಡವಾಗಿ ಬರುವುದು ವಾಡಿಕೆ. ಇಂತಹ ಕ್ಷೇತ್ರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವುದು ಸರಿಯಲ್ಲ. ಈ ಹಿಂದೆ ಭಕ್ತರನ್ನು ಪಂಪಾವರೆಗೆ ಹೋಗಿ ಅಲ್ಲಿ ವಾಹನದಿಂದ ಇಳಿದು ಪಾದಯಾತ್ರೆ ಮೂಲಕ ಹೋಗಬೇಕಿತ್ತು ಈಗ ನೀಲಕಲ್ ಬಳಿ ವಾಹನವನ್ನು ನಿಲ್ಲಿಸಿರುವುದರಿಂದ 20 ಕಿ.ಮೀ. ದೂರ ಕ್ರಮಿಸಬೇಕಿದೆ ಎಂದು ಹೇಳಿದರು.

      ಈ ದೂರವನ್ನು ಕ್ರಮಿಸಲು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‍ಗಳ ಸೌಕರ್ಯ ಮಾಡಿದ್ದು ಈ ಹಿಂದೆ 29 ರೂ. ಪ್ರಯಾಣದರ ನಿಗಧಿಪಡಿಸಿತ್ತು. ಈಗ ಅದನ್ನು 60 ರೂ.ಗೆ ಹೆಚ್ಚಿಸಲಾಗಿದೆ. ನಮ್ಮ ಎಸ್‍ಎಎಸ್‍ಎಸ್ ವತಿಯಿಂದ ಭಕ್ತರಿಗೆ ಉಚಿತವಾಗಿ ಪ್ರಯಾಣಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು ಕೇರಳ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು ಅದು ಸ್ಪಂದಿಸುತ್ತಿಲ್ಲ ಎಂದರು.

      ಶಬರಿಮಲೆ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿದ್ಯಾಮಾನಗಳು ಭಕ್ತರಿಗೆ ಬೇಸರ ಮೂಡಿಸಿದ್ದು ಅಲ್ಲಿ ಭಕ್ತರಿಗೋಸ್ಕರ ಇರುವ ವಸತಿ ಗೃಹಗಳಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ. ದೇಶದ ವಿವಿಧ ಭಾಗಗಳಿಂದ ತೆರಳಿದ ಭಕ್ತರು ವಸತಿ ಸೌಕರ್ಯವಿಲ್ಲದೆ ಪರದಾಡುವಂತಾಗಿದೆ ಎಂದು ಟಿ.ಬಿ.ಶೇಖರ್ ನುಡಿದರು.

      ಅಯ್ಯಪ್ಪಸ್ವಾಮಿ ಸನ್ನಿಧಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತ ಸಾಗರ ಜಮೆಯಾಗುತ್ತಿದ್ದು ಪೊಲೀಸರಿಂದ ಇವರಿಗಾಗುವ ತೊಂದರೆಯನ್ನು ನಿವಾರಿಸಬೇಕು. ಸೂಕ್ತ ಮೂಲಭೂತ ಸೌಲಭ್ಯಗಳನ್ನೊದಗಿಸಿ ಅಯ್ಯಪ್ಪದರ್ಶನಕ್ಕೆ ಅನುವು ಮಾಡಿಕೊಡಬೇಕೆಂದು ಎಸ್‍ಎಎಸ್‍ಎಸ್, ಕೇರಳ ಸರ್ಕಾರ ಮತ್ತು ತಿರುವನಂತಪುರಂ ದೇವಾಲಯದ ಮಂಡಳಿ (ಟಿಡಿಬಿ) ಒತ್ತಾಯಿಸಿರುವುದಾಗಿ ತಿಳಿಸಿದರು.

      ಪೂಜೆಯಲ್ಲೇ ಪವಿತ್ರವಾದ ತುಪ್ಪಾಭಿಷೇಕಕ್ಕೆ, ಇರುಮುಡಿ ಬಿಚ್ಚಲು ಅವಕಾಶ ನೀಡುತ್ತಿಲ್ಲ ಇದಕ್ಕಾಗಿ ಭಕ್ತರು ಕೂರುವ ಜಾಗದಲ್ಲಿ ನೀರು ಹಾಯಿಸಿ ಇಡೀ ನೆಲವನ್ನು ತೇವ ಮಾಡುವುದರಿಂದ ಕೂರಲು ಅವಕಾಶವಿಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಯ್ಯಪ್ಪ ಭಕ್ತರನ್ನು ಟೆರರಿಸ್ಟ್‍ಗಳಂತೆ ನೋಡಲಾಗುತ್ತದೆ ಇಂತಹ ವಾತಾವರಣವನ್ನು ಈ ಹಿಂದೆ ನೋಡಿರಲಿಲ್ಲ ಎಂದು ವಿಷಾದಿಸಿದರು.

 

(Visited 19 times, 1 visits today)
Previous Articleವಿದ್ಯುತ್ ಕಳವು: ಇಬ್ಬರು ಆರೋಪಿಗಳ ಬಂಧನ
Next Article ತುಮಕೂರು ಜಿಲ್ಲಾಧಿಕಾರಿಗೆ ಬಿಸ್ಕೆಟ್​​​​​​ನಲ್ಲಿ ಸಿಕ್ತು ಮೊಳೆ… ಸೀಜ್ ಆಯ್ತು ಬೇಕರಿ!!
News Desk Benkiyabale

Related Posts

೪೦ಕ್ಕೂ ಹೆಚ್ಚು ಮಕ್ಕಳಿಗೆ ನೇತ್ರ ತಪಾಸಣೆ

August 26, 2026 4:41 pm news

ಸೆ.೬ರ ರಜತ ಮಹೋತ್ಸವಕ್ಕೆ ಸಜ್ಜಾದ ಹಿಂದುಳಿದ ಸಮುದಾಯ

August 26, 2026 4:35 pm news

ಆಸೆ ಇದ್ದರೆ ಸಾಲದು ಕಠಿಣ ಪರಿಶ್ರಮ ಬೇಕು: ವಿರೇಶಾನಂದ ಸರಸ್ವತಿ ಸ್ವಾಮೀಜಿ

August 26, 2026 4:11 pm news
ತಾಜಾ ಸುದ್ಧಿಗಳು
news

೪೦ಕ್ಕೂ ಹೆಚ್ಚು ಮಕ್ಕಳಿಗೆ ನೇತ್ರ ತಪಾಸಣೆ

August 26, 2026 4:41 pm
news

ಸೆ.೬ರ ರಜತ ಮಹೋತ್ಸವಕ್ಕೆ ಸಜ್ಜಾದ ಹಿಂದುಳಿದ ಸಮುದಾಯ

August 26, 2026 4:35 pm
news

ಆಸೆ ಇದ್ದರೆ ಸಾಲದು ಕಠಿಣ ಪರಿಶ್ರಮ ಬೇಕು: ವಿರೇಶಾನಂದ ಸರಸ್ವತಿ ಸ್ವಾಮೀಜಿ

August 26, 2026 4:11 pm
news

ಶ್ರದ್ಧಾ ಭಕ್ತಿಯಿಂದ ಈದ್ ಮಿಲಾದ್ ಹಬ್ಬ ಆಚರಣೆ

August 26, 2026 4:10 pm
news

ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

August 26, 2026 4:07 pm
news

ಕ್ಷೇತ್ರದ ಯಾವೊಬ್ಬ ಮತದಾರರನ್ನೂ ಪಟ್ಟಿಯಿಂದ ಕೈ ಬಿಡದಂತೆ ಸೂಚನೆ

August 25, 2026 3:57 pm
Our Youtube Channel
Our Picks

೪೦ಕ್ಕೂ ಹೆಚ್ಚು ಮಕ್ಕಳಿಗೆ ನೇತ್ರ ತಪಾಸಣೆ

August 26, 2026 4:41 pm

ಸೆ.೬ರ ರಜತ ಮಹೋತ್ಸವಕ್ಕೆ ಸಜ್ಜಾದ ಹಿಂದುಳಿದ ಸಮುದಾಯ

August 26, 2026 4:35 pm

ಆಸೆ ಇದ್ದರೆ ಸಾಲದು ಕಠಿಣ ಪರಿಶ್ರಮ ಬೇಕು: ವಿರೇಶಾನಂದ ಸರಸ್ವತಿ ಸ್ವಾಮೀಜಿ

August 26, 2026 4:11 pm

ಶ್ರದ್ಧಾ ಭಕ್ತಿಯಿಂದ ಈದ್ ಮಿಲಾದ್ ಹಬ್ಬ ಆಚರಣೆ

August 26, 2026 4:10 pm

ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

August 26, 2026 4:07 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

೪೦ಕ್ಕೂ ಹೆಚ್ಚು ಮಕ್ಕಳಿಗೆ ನೇತ್ರ ತಪಾಸಣೆ

By News Desk BenkiyabaleAugust 26, 2026 4:41 pm

ಪಾವಗಡ: ಹೆಸರಾಂತ ಮಕ್ಕಳ ನೇತ್ರ ತಜ್ಞರಾದ ಡಾ.ವಸುಧಾ ನರೇಶ್ ರವರು ಮಕ್ಕಳಿಗೆ ನೇತ್ರ ತಪಾಸಣೆಯನ್ನು ನಡೆಸಿದರು. ಈ ಶಿಬಿರಕ್ಕೆ ಬಹು…

ಸೆ.೬ರ ರಜತ ಮಹೋತ್ಸವಕ್ಕೆ ಸಜ್ಜಾದ ಹಿಂದುಳಿದ ಸಮುದಾಯ

August 26, 2026 4:35 pm

ಆಸೆ ಇದ್ದರೆ ಸಾಲದು ಕಠಿಣ ಪರಿಶ್ರಮ ಬೇಕು: ವಿರೇಶಾನಂದ ಸರಸ್ವತಿ ಸ್ವಾಮೀಜಿ

August 26, 2026 4:11 pm

ಶ್ರದ್ಧಾ ಭಕ್ತಿಯಿಂದ ಈದ್ ಮಿಲಾದ್ ಹಬ್ಬ ಆಚರಣೆ

August 26, 2026 4:10 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.