ಉತ್ತಮ ‘ಮಾನವ ಹಕ್ಕುಗಳ ಕಾರ್ಯಕರ್ತ’ ಪುರಸ್ಕಾರ

 ತುಮಕೂರು:

      ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಪ್ರಯುಕ್ತ ನವದೆಹಲಿಯ ಜಂತರ್‍ಮಂತರ್‍ನಲ್ಲಿ ಆಲ್ ಇಂಡಿಯಾ ಹ್ಯುಮರ್‍ರೈಟ್ಸ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಮಾವೇಶದಲ್ಲಿ ಅಸೋಸಿಯೇಷನ್‍ನ (AIHRA) ತುಮಕೂರು ಜಿಲ್ಲಾ ಮುಖ್ಯಸ್ಥ ನಗರದ ಸೈಯದ್ ಯೂಸುಫ್ ಉಲ್ಲಾ ಅವರಿಗೆ (AIHRA) ಅಸೋಸಿಯೇಷನ್‍ನ ರಾಷ್ಟ್ರೀಯ ಅಧ್ಯಕ್ಷ ಎಂ.ಯು.ದುವಾ ಅವರು ಉತ್ತಮ ‘ಮಾನವ ಹಕ್ಕುಗಳ ಕಾರ್ಯಕರ್ತ’ ಪುರಸ್ಕಾರ ನೀಡಿ ಗೌರವಿಸಿರುತ್ತಾರೆ.

      ದೆಹಲಿಯ ಜಂತರ್‍ಮಂತರ್‍ನಲ್ಲಿ (AIHRA) ಅಸೋಸಿಯೇಷನ್ ವತಿಯಿಂದ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಪ್ರಯುಕ್ತ ಹಲವು ಪ್ರಮುಖ ವಿಚಾರಗಳ ಕುರಿತು ಚರ್ಚೆನಡೆಸುವ ಜೊತೆಗೆ ಕೇಂದ್ರ ಸರ್ಕಾರದ ಗಮನಸೆಳೆಯಲು ಒಂದು ದಿನದ ಪ್ರತಿಭಟನಾ ಧರಣಿಯನ್ನೂ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ದೇಶದ ನಾನಾ ಭಾಗಗಳಿಂದ ಸಾವಿರಾರು ಮಾನವಹಕ್ಕುಗಳ ಕಾರ್ಯಕರ್ತರು ಭಾಗವಹಿಸಿದ್ದರು. ದೇಶದ ಆಯ್ದ ಉತ್ತಮ ಮಾನವ ಹಕ್ಕು ಕಾರ್ಯಕರ್ತರನ್ನು ರಾಷ್ಟ್ರೀಯ ಅಧ್ಯಕ್ಷರು ಪುರಸ್ಕರಿಸಿದ್ದು, ಇವರಲ್ಲಿ ತುಮಕೂರಿನ ಸೈಯದ್ ಯೂಸುಫ್ ಉಲ್ಲಾ ಅವರೂ ಒಬ್ಬರಾಗಿ ಪುರಸ್ಕಾರ ಸ್ವೀಕರಿಸಿದ್ದಾರೆ.

(Visited 12 times, 1 visits today)

Related posts