BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕುಡಿಯುವ ನೀರಿನ ಯೋಜನೆ ಅಸಮರ್ಪಕ: ಆರೋಪ
  • ಕುಡಿಯುವ ನೀರಿನ ಅಸಮರ್ಪಕ ಸರಬರಾಜು
  • ಮಕ್ಕಳನ್ನು ಶಾಲೆಗೆ ಕರೆತರುವುದು ಶಿಕ್ಷಕರಿಗೆ ಸವಾಲಾಗಿದೆ
  • ಬಜೆಟ್ ಅಧಿವೇಶನದಲ್ಲಿ ಒಳಮೀಸಲಾತಿ ಖಾತ್ರಿ ಪಡಿಸಿ
  • ಬೇಡರ ಕಣ್ಣಪ್ಪ ಸ್ವಾಮಿ ಆರತಿ ಕಾರ್ಯಕ್ರಮ
  • ಎಲ್ಲರೂ ನೇಕಾರ ಸಮುದಾಯಕ್ಕೆ ಉತ್ತೇಜನ ನೀಡಿ
  • ರೈತರಿಗೆ ಮಾರಕವಾದ ಗಣಿ ಕಂಪನಿಗಳ ವಿವರ ನೀಡಿ
  • ವೈಭವದಿಂದ ನಡೆದ ಕಳಸೋತ್ಸವ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿ ದೇಶದ ಸಂಸ್ಕೃತಿಯ ಉಳಿವಿಗೆ ಅವಶ್ಯ
Trending

ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿ ದೇಶದ ಸಂಸ್ಕೃತಿಯ ಉಳಿವಿಗೆ ಅವಶ್ಯ

By News Desk BenkiyabaleUpdated:September 18, 2020 6:39 pm
 ಗುಬ್ಬಿ:
      ಕಳೆದ 34 ವರ್ಷದ ನಂತರ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರುವ ಕೇಂದ್ರ ಸರ್ಕಾರದ ಚಿಂತನೆಯು ಭಾರತೀಯ ಪರಂಪರೆ, ಸಂಸ್ಕøತಿಯನ್ನು ಅಳವಡಿಸುವ ಪಠ್ಯಕ್ರಮವಾಗಿದೆ. ಯಾವ ಗೊಂದಲವಿಲ್ಲದೇ ಸ್ಥಳೀಯವಾಗಿಯೇ ಪಠ್ಯಕ್ರಮವನ್ನು ಜಾರಿಗೆ ತರಲು ಆಯಾ ರಾಜ್ಯ ಸರ್ಕಾರವು ಸ್ವತಂತ್ರವಾಗಿದೆ ಎಂದು ವಿದ್ಯಾಭಾರತಿ ಕ್ಷೇತ್ರೀಯ ಸಹ ಸಂಘಟನಾ ಕಾರ್ಯದರ್ಶಿ ಜಿ.ಆರ್.ಜಗದೀಶ್ ತಿಳಿಸಿದರು.
     ಪಟ್ಟಣದ ಶ್ರೀ ಚಿದಂಬರಾಶ್ರಮದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರ ಹೊಸ ಶಿಕ್ಷಣ ನೀತಿಯ ಬಗ್ಗೆ ಹಲವು ಗೊಂದಲ ಮೂಡಿದ್ದು ಏಕ ರೂಪ ಶಿಕ್ಷಣ ಎನ್ನುವುದನ್ನು ಮತ್ತೊಂದು ರೀತಿ ಬಿಂಬಿಸಲಾಗುತ್ತಿದೆ. ಏಕ ರೂಪ ಸಿದ್ದಾಂತ ಅಳವಡಿಸಿಕೊಳ್ಳಲು ಮಾತ್ರ ಸೂಚಿಸಲಾಗಿ ನಮ್ಮ ಭಾರತೀಯ ಶಿಕ್ಷಣಕ್ಕೆ ಮಹತ್ವ ನೀಡಲು ಈ ನೀತಿ ಮುಂದಾಗಿದೆ. ಮೆಕಾಲೆ ಆಂಗ್ಲ ಮಾದರಿಯಿಂದ ಹೊರ ಬಂದು ಉದ್ಯೋಗಾಧಾರಿತ ಶಿಕ್ಷಣವನ್ನು ಮೌಲ್ಯಾಧಾರಿತ ಶಿಕ್ಷಣವಾಗಿ ಮಾರ್ಪಡಿಸಿ ನಮ್ಮ ಪರಂಪರೆಯನ್ನು ಉಳಿಸುವ ಕೆಲಸ ಮಾಡಲಾಗುತ್ತಿದೆ. ಇಲ್ಲಿ ಯಾವುದೇ ಕಡ್ಡಾಯ ಎಂಬ ಅಂಶವಿಲ್ಲ. ಉತ್ತಮ ಸಲಹೆಯ ನೀತಿ ಅಳವಡಿಸಿಕೊಳ್ಳಲು ತಿಳಿಸಲಾಗಿದೆ. ಸ್ಥಾನೀಕ ಅಂಶ ಒಳಗೊಂಡ ಪಠ್ಯವನ್ನು ಆಯಾ ರಾಜ್ಯವು ಈ ಹೊಸ ನೀತಿಯೊಂದಿಗೆ ಅಳವಡಿಸಿಕೊಳ್ಳಲು ತಿಳಿಸಲಾಗಿದೆ ಎಂದು ವಿವರಿಸಿದರು.
      ಶಿಶು ಶಿಕ್ಷಣವನ್ನೂ ಶಾಲಾ ಶಿಕ್ಷಣದ ಜತೆ ಅಳವಡಿಸಿಕೊಂಡು ಬುನಾದಿ ಶಿಕ್ಷಣವನ್ನು ಆರಂಭಿಸಿ ಸಂತೋಷ ಹಾಗೂ ಸ್ವತಂತ್ರ ಕಲಿಕೆ ಅಳವಡಿಸಿ ಮುಕ್ತ ಶಿಕ್ಷಣಕ್ಕೆ ಇಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ಈ ಜತೆಗೆ ಹೊಸ ಶಿಕ್ಷಣ ನೀತಿ ಪಾಸು ಅಥವಾ ನಪಾಸು ಎಂದು ವಿಂಗಡಿಸುವ ಕೆಲಸ ಮಾಡುವುದಿಲ್ಲ. ಶಿಕ್ಷಣಕ್ಕೆ ತಕ್ಕಂತೆ ಪ್ರಮಾಣಪತ್ರ ನೀಡಿ ವಿದ್ಯಾರ್ಥಿಗೆ ಪ್ರೋತ್ಸಾಹಿಸುವ ಕಾರ್ಯ ಮಾಡಲಾಗುವುದು. ಈ ಜತೆಗೆ 5 ನೇ ತರಗತಿವರೆಗೆ ಮಾತೃಭಾಷೆಯಲ್ಲೇ ಶಿಕ್ಷಣವನ್ನು ನೀಡಲು ಹೊಸ ನೀತಿ ಸೂಚಿಸಿದೆ. ಮಾತೃಭಾಷೆಯು ಕ್ರಿಯಾತ್ಮಕ ಚಿಂತನಾ ಶಕ್ತಿ ಹೆಚ್ಚಿಸುತ್ತದೆ ಎನ್ನುವ ಅಂಶ ಹೊಸನೀತಿ ತಿಳಿಸಿದೆ. ಮುಂದಿನ 2030 ನೇ ವರ್ಷದೊಳಗೆ ಈ ನೀತಿ ಸಂಪೂರ್ಣ ಜಾರಿ ಮಾಡುವ ಚಿಂತನೆ ಕೇಂದ್ರ ಸರ್ಕಾರ ಹೊಂದಿದೆ ಎಂದ ಅವರು ಹಿಂದಿಭಾಷೆ ಹೇರಿಕೆ ಎಂಬುದು ಕಪೋಲ ಕಲ್ಪಿತ ಎನಿಸಿದೆ. ನಮ್ಮ ಸಂಸ್ಕøತಿವಾಹಕವಾಗಿರುವ ಭಾಷೆಯನ್ನೇ ವಿರೋಧಿಸುವ ಅಗತ್ಯವಿಲ್ಲ. ನಮ್ಮದಲ್ಲದ ಆಂಗ್ಲಭಾಷೆ ವಿರೋಧಿಸುವ ಗೋಜಿಗೆ ಹೋಗದೆ ನಮ್ಮ ರಾಷ್ಟ್ರೀಯ ಭಾಷೆ, ಅಂತರ್‍ರಾಜ್ಯ ಸಂಪರ್ಕ ಭಾಷೆಯಾದ ಹಿಂದಿಯನ್ನು ದ್ವೇಷಿಸುವ ಅಗತ್ಯವಿಲ್ಲ ಎಂದರು. 
      ಮೆದುಳಿಗೆ ಮಾತ್ರ ಕೆಲಸ ಕೊಡುವ ಶಿಕ್ಷಣ ಈವರೆವಿಗೆ ಚಾಲ್ತಿಯಲ್ಲಿದೆ. ಓದುವ ಜತೆಗೆ ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಹೊಸ ಶಿಕ್ಷಣ ನೀತಿ 6 ನೇ ತರಗತಿಯಲ್ಲೇ ಮಕ್ಕಳ ಆಸಕ್ತಿಗೆ ತಕ್ಕಂತೆ ಕೌಶಲ್ಯಾಧಾರಿತ ಶಿಕ್ಷಣ ಅಳವಡಿಸಲಾಗುವುದು. ಸಮಗ್ರ ಶಿಕ್ಷಣವು ಇಲ್ಲಿ ಅಳವಡಿಸಿ ಜ್ಞಾನಾಧಾರಿತ ಶಿಕ್ಷಣವನ್ನು ದೇಶದಲ್ಲೇ ಬೆಳೆಸುವ ಜತೆಗೆ ಕೀಳರಿಮೆ ತೊಲಗಿಸಿ ಏಕ ರೂಪ ಶಿಕ್ಷಣ ತಾನಾಗಿಯೇ ಬೆಳೆಯುವ ಕಲ್ಪನೆ ಈ ನೀತಿ ಜಾರಿ ಮಾಡಲಿದೆ ಎಂದ ಅವರು ಮೌಲ್ಯ ಶಿಕ್ಷಣಕ್ಕೆ ಆಧುನಿಕತೆ, ಪುರಾತನ ಎನ್ನುವುದು ಬರುವುದಿಲ್ಲ. ಸ್ಥಾನೀಯ ಪ್ರತಿಭೆ, ಕಸುಬುಗಳಿಗೆ ಮಾನ್ಯತೆ ಸಿಗುವ ಜತೆಗೆ ಕೃಷಿ ಆಧಾರಿತ ಕೌಶಲ್ಯಕ್ಕೆ ಹೆಚ್ಚು ಒತ್ತು ನೀಡಿದಂತಾಗುತ್ತದೆ. ಏಕರೂಪ ಎಂದರೇ ಒಂದೇ ಮಾದರಿ ಎನ್ನುವ ಗೊಂದಲ ಚಿಂತನೆ ಬಿಟ್ಟು ಏಕ ಸಿದ್ದಾಂತ ಅಳವಡಿಸಿಕೊಂಡು ಸ್ಥಳೀಯ ಅಂಶದಲ್ಲೇ ಬೋಧನೆ ನಡೆಸಲು ಸಮ್ಮತಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಮಾಜಿ ಅಧ್ಯಕ್ಷ ಎಚ್.ಟಿ.ಭೈರಪ್ಪ ಇದ್ದರು.

 

(Visited 8 times, 1 visits today)
Previous Articleಸೆ.21ರಿಂದ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ : ಅಪರ ಜಿಲ್ಲಾಧಿಕಾರಿ
Next Article ಅಪೌಷ್ಟಿಕತೆಯನ್ನು ದೂರ ಮಾಡಲು ಪೌಷ್ಟಿಕ ಕೈತೋಟಗಳನ್ನು ಬೆಳೆಸಿ : ನಟರಾಜ್ ಕರೆ
News Desk Benkiyabale

Related Posts

ಜ.10, 11: 26ನೇ ವರ್ಷದ ದುರ್ಗಪೂಜೆ

January 05, 2026 3:45 pm ತುಮಕೂರು

ಅಧ್ಯಯನದಿಂದ ಯಶಸ್ಸು ಸಾಧ್ಯ

January 05, 2026 3:41 pm ತುಮಕೂರು

ಆರ್‌ಡಿಪಿಆರ್‌ನಲ್ಲಿ ಸೇವೆಯ ಅವಕಾಶ ದೊಡ್ಡ ಸೌಭಾಗ್ಯ: ಜಿ.ಪ್ರಭು

January 05, 2026 3:38 pm ತುಮಕೂರು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಕುಡಿಯುವ ನೀರಿನ ಯೋಜನೆ ಅಸಮರ್ಪಕ: ಆರೋಪ

February 21, 2026 5:02 pm
ಇತರೆ ಸುದ್ಧಿಗಳು

ಕುಡಿಯುವ ನೀರಿನ ಅಸಮರ್ಪಕ ಸರಬರಾಜು

February 21, 2026 4:50 pm
ಇತರೆ ಸುದ್ಧಿಗಳು

ಮಕ್ಕಳನ್ನು ಶಾಲೆಗೆ ಕರೆತರುವುದು ಶಿಕ್ಷಕರಿಗೆ ಸವಾಲಾಗಿದೆ

February 18, 2026 2:14 pm
ಇತರೆ ಸುದ್ಧಿಗಳು

ಬಜೆಟ್ ಅಧಿವೇಶನದಲ್ಲಿ ಒಳಮೀಸಲಾತಿ ಖಾತ್ರಿ ಪಡಿಸಿ

February 18, 2026 2:11 pm
ಇತರೆ ಸುದ್ಧಿಗಳು

ಬೇಡರ ಕಣ್ಣಪ್ಪ ಸ್ವಾಮಿ ಆರತಿ ಕಾರ್ಯಕ್ರಮ

February 18, 2026 2:04 pm
ಇತರೆ ಸುದ್ಧಿಗಳು

ಎಲ್ಲರೂ ನೇಕಾರ ಸಮುದಾಯಕ್ಕೆ ಉತ್ತೇಜನ ನೀಡಿ

February 18, 2026 2:03 pm
Our Youtube Channel
Our Picks

ಕುಡಿಯುವ ನೀರಿನ ಯೋಜನೆ ಅಸಮರ್ಪಕ: ಆರೋಪ

February 21, 2026 5:02 pm

ಕುಡಿಯುವ ನೀರಿನ ಅಸಮರ್ಪಕ ಸರಬರಾಜು

February 21, 2026 4:50 pm

ಮಕ್ಕಳನ್ನು ಶಾಲೆಗೆ ಕರೆತರುವುದು ಶಿಕ್ಷಕರಿಗೆ ಸವಾಲಾಗಿದೆ

February 18, 2026 2:14 pm

ಬಜೆಟ್ ಅಧಿವೇಶನದಲ್ಲಿ ಒಳಮೀಸಲಾತಿ ಖಾತ್ರಿ ಪಡಿಸಿ

February 18, 2026 2:11 pm

ಬೇಡರ ಕಣ್ಣಪ್ಪ ಸ್ವಾಮಿ ಆರತಿ ಕಾರ್ಯಕ್ರಮ

February 18, 2026 2:04 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಕುಡಿಯುವ ನೀರಿನ ಯೋಜನೆ ಅಸಮರ್ಪಕ: ಆರೋಪ

By News Desk BenkiyabaleFebruary 21, 2026 5:02 pm

ಪಾವಗಡ: ತುಮಕೂರಿನಲ್ಲಿ ನಡೆದ ದಿಶಾ ಸಭೆಯಲ್ಲಿ ಸಂಸದ ಗೋವಿಂದ ಕಾರಜೋಳ ಅವರು ಪಾವಗಡ ತಾಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ…

ಕುಡಿಯುವ ನೀರಿನ ಅಸಮರ್ಪಕ ಸರಬರಾಜು

February 21, 2026 4:50 pm

ಮಕ್ಕಳನ್ನು ಶಾಲೆಗೆ ಕರೆತರುವುದು ಶಿಕ್ಷಕರಿಗೆ ಸವಾಲಾಗಿದೆ

February 18, 2026 2:14 pm

ಬಜೆಟ್ ಅಧಿವೇಶನದಲ್ಲಿ ಒಳಮೀಸಲಾತಿ ಖಾತ್ರಿ ಪಡಿಸಿ

February 18, 2026 2:11 pm
News by Date
February 2026
M T W T F S S
 1
2345678
9101112131415
16171819202122
232425262728  
« Jan    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.