ಡೇಲಿಹಂಟ್ ಸಮೀಕ್ಷೆ : ನಿರ್ಣಾಯಕ ನಾಯಕರಾದ ಪ್ರಧಾನಿ ಮೋದಿ

ದೆಹಲಿ:

      ಭಾರತದ ನಂ.1 ಸುದ್ದಿ ಮತ್ತು ಪ್ರಾದೇಶಿಕ ಭಾಷೆಯ ಕಂಟೆಂಟ್ ಅಪ್ಲಿಕೇಷನ್ ಆಗಿರುವ ಡೇಲಿಹಂಟ್, ನೀಲ್ಸನ್ ಇಂಡಿಯಾ ಜತೆಗೂಡಿ ನಡೆಸಿರುವ ಪ್ರತಿಷ್ಠೆಯ “ಟ್ರಸ್ಟ್ ಆಫ್ ದಿ ನೇಷನ್” ಜಂಟಿ ರಾಜಕೀಯ ಸಮೀಕ್ಷೆಯ ಫಲಿತಾಂಶವನ್ನು ಇಂದು ಪ್ರಕಟಿಸಿದೆ.

      ಸಮೀಕ್ಷೆಯಲ್ಲಿ ಮೋದಿಯವರ ಮೇಲೆ ಭಾರತದ ನಂಬಿಕೆ ಅವ್ಯಾಹತವಾಗಿದೆ. ಪ್ರಾಮಾಣಿಕ, ಬಲಿಷ್ಠ ಮತ್ತು ನಿರ್ಣಾಯಕ ನಾಯಕರಾಗಿ ಪ್ರಧಾನಿ ನರೇಂದ್ರ ಮೋದಿ ಹೊರಹೊಮ್ಮಿದ್ದಾರೆ. ಮೋದಿಯವರಿಗೆ ಎರಡನೇ ಅವಕಾಶ ನೀಡಬೇಕು, ಅವರು ಭವ್ಯ ಭವಿತವ್ಯ ನೀಡಲಿದ್ದಾರೆ ಎಂದು ಶೇ.50ಕ್ಕಿಂತ ಹೆಚ್ಚು ಮತದಾರರು ನಂಬಿಕೆ ವ್ಯಕ್ತವಾಗಿದೆ. 

      ಸಮೀಕ್ಷೆಯನ್ನು ಭಾರತದ ಅತೀದೊಡ್ಡ ಮತ್ತು ಅತ್ಯಂತ ಕರಾರುವಾಕ್ಕಾದ, ಸ್ವತಂತ್ರ ರಾಜಕೀಯ ಡಿಜಿಟಲ್ ಸಮೀಕ್ಷೆ ಎಂದು ರಾಷ್ಟ್ರಾದ್ಯಂತ ಪರಿಗಣಿಸಲಾಗಿದ್ದು, ಭಾರತ ಮತ್ತು ವಿದೇಶದಿಂದ 54 ಲಕ್ಷಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ.

      ಮೋದಿಯವರು ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗಿನ 2014 ವರ್ಷಕ್ಕೆ ಹೋಲಿಸಿದರೆ ಶೇ.63ಕ್ಕಿಂತ ಹೆಚ್ಚು ಮತದಾರರು ನರೇಂದ್ರ ಮೋದಿಯವರ ಮೇಲೆ ಅದೇ ರೀತಿಯ ನಂಬಿಕೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

       ಈ ವಿಶಿಷ್ಟವಾದ ಸಮೀಕ್ಷೆಯಲ್ಲಿ ಭಾರತದ ಉದ್ದಗಲದಿಂದ ನಿಜವಾದ ಮತದಾರರು ಮತ ಹಾಕಿದ್ದು, ಮೆಟ್ರೋ ಪ್ರದೇಶದಿಂದ ಮಾತ್ರವಲ್ಲ, ಟಯರ್ 2 ಮತ್ತು 3 ನಗರಗಳಿಂದ, ಗ್ರಾಮೀಣ ಪ್ರದೇಶದಿಂದಲೂ ಮತದಾರರಾಗಿ ನೋಂದಾಯಿಸಿಕೊಂಡವರು ಅತ್ಯಂತ ಉತ್ಸಾಹದಿಂದ ಮತ ಚಲಾಯಿಸಿದ್ದಾರೆ. 

 

(Visited 20 times, 1 visits today)

Related posts

Leave a Comment