ಪಾವಗಡ : ಸ್ವಾಮಿನಾಥನ್ ವರದಿ ಜಾರಿಗೆ ತರುವಂತೆ ರೈತ ಹೋರಾಟ!

ಪಾವಗಡ :

        ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪಾವಗಡ ಘಟಕದ ವತಿಯಿಂದ ಸಂಪೂರ್ಣ ಸಾಲ ಮನ್ನಾ ಯೋಜನೆ ಭದ್ರಮೇಲ್ದಂಡೆ ಎತ್ತಿನಹೊಳೆ ಸ್ವಾಮಿನಾಥನ್ ವರದಿ ಜಾರಿಗೆ ತರುವುದು ಪಾವಗಡದ ಎಲ್ಲಾ ಕೆರೆಗಳ ದುರಸ್ತಿ ಮತ್ತು ನೀರು ಹರಿಸುವುದರ ಬಗ್ಗೆ ಪಾವಗಡ ನಿರೀಕ್ಷಣಾ ಮಂದಿರದಿಂದ ಶನಿ ದೇವರ ದೇವಸ್ಥಾನದ ಸರ್ಕಲ್ ಪಾದಯಾತ್ರೆ, ಧರಣಿ ಮೂಲಕ ಅನಿರ್ದಿಷ್ಟ ಪ್ರತಿಭಟನೆಯನ್ನು ಹಮ್ಮಿ ಕೊಳ್ಳಲಾಗಿತ್ತು.

      ರೈತರ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವಂತೆ ರೈತಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಹಕ್ಕೊತ್ತಾಯ ಮಂಡಿಸಿದರು.

       ಪಾವಗಡ ತಾಲ್ಲೂಕು ಕಛೇರಿ ಆವರಣದಲ್ಲಿ ಗುರುವಾರ ರೈತಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಹಲವು ಬೇಡಿಕೆಗಳನ್ನು ಮುಂದಿಟ್ಟರು.

       ಹಲವು ವರ್ಷಗಳಿಂದ ತಾಲೂಕಿನಲ್ಲಿ ಮಳೆ ಇಲ್ಲದೇ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಬೇಸಿಗೆಯಲ್ಲಿ ಕೊಳವೆಬಾವಿಗಳಲ್ಲಿ ನೀರಿಲ್ಲದೆ ಕ್ಷಾಮ ಉಂಟಾಗುತ್ತಿದೆ. ಹಳ್ಳಿಗಳಲ್ಲಿ ರೈತರ ಬದುಕು ದುಸ್ತರವಾಗುತ್ತಿದೆ. ಹೀಗಾಗಿ ಸಮಗ್ರ ನೀರಾವರಿ ಯೋಜನೆ ಮತ್ತು ನೀರಿನ ಲಭ್ಯತೆ ಇರುವ ಎಲ್ಲ ಮೂಲ ಬಳಸಿ ಜನ, ಜಾನುವಾರುಗಳಿಗೆ ಯೋಗ್ಯ ನೀರಿನ ಸರಬರಾಜು ಮಾಡಬೇಕು. ಡಾ. ಎಂ.ಎಸ್.ಸ್ವಾಮಿನಾಥನ್ ಅವರು ಕೇಂದ್ರ ಸರಕಾರಕ್ಕೆ ಸಲ್ಲಿಸಿರುವ ವರದಿಯಂತೆ ರೈತರ ಪ್ರತಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚ ಒಳಗೊಂಡಂತೆ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿದರು.

       ರೈತರು ಮಾಡಿರುವ ಕೃಷಿ ಮತ್ತು ಕೃಷಿ ಆಧಾರಿತ ಎಲ್ಲ ರೀತಿಯ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಅಲ್ಲಿವರೆಗೆ ಬ್ಯಾಂಕಿನ ಅಧಿಕಾರಿಗಳು ಹಳ್ಳಿಗಳಿಗೆ ಸಾಲ ವಸೂಲಿಗೆ ಬರದಂತೆ ಮತ್ತು ವಸೂಲಿಗೆ ಕಾನೂನು ಕ್ರಮ ಕೈಗೊಳ್ಳದಂತೆ ತಾಕೀತು ಮಾಡಬೇಕೆಂದು ಆಗ್ರಹಿಸಿದರು.

       ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷರಾದ ಗೋವಿಂದೇಗೌಡ ಮಾತನಾಡಿ ಪಾವಗಡ ತಾಲೂಕು ಗಡಿ ತಾಲೂಕನ್ನು ಬರಪೀಡಿತ ಪ್ರದೇಶವಾಗಿದೆ ಹಿಂದುಳಿದ ತಾಲ್ಲೂಕುಗಳಲ್ಲಿ ಒಂದಾಗಿದೆಇಲ್ಲಿ ಸತತ ಬರಗಾಲದಿಂದ ರೈತರು ಗುಳೆ ಹೋಗುತ್ತಿದ್ದು ಭಾಗದ ರೈತರಿಗೆ ಶಾಶ್ವತವಾದ ನೀರಾವರಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಲ್ಲಾ ರೈತರಿಗೂ ಅನುಕೂಲವಾಗುವಂತೆ ಸಂಪೂರ್ಣ ಸಾಲ ಮನ್ನಾ ಮಾಡಬೇಕು 60 ವರ್ಷ ತುಂಬಿದ ಎಲ್ಲರಿಗೂ ಪಿಂಚಣಿ ಸೌಲಭ್ಯವನ್ನು ಒದಗಿಸಿ ಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು ಪಾವಗಡ ತಾಲ್ಲೂಕಿನ ರೈತ ಸಂಘದ ಅಧ್ಯಕ್ಷರಾದ ಪೂಜಾರಪ್ಪ ಮಾತನಾಡಿ ಸರ್ಕಾರಕ್ಕೆ ರೈತರು ಸಾಲಗಾರರ ಸರ್ಕಾರವೇ ರೈತರಿಗೆ ಸಾಲಗಾರ ಆಗಿದ್ದು ಪಾವಗಡ ತಾಲೂಕಿನ ಸುಮಾರು ರೈತರ ಸಾಲಮನ್ನಾ ಆಗಿರುವುದಿಲ್ಲ ಬ್ಯಾಂಕಿನ ಅಧಿಕಾರಿಗಳು ರೈತರನ್ನು ಸುತ್ತಾಡುತ್ತಾರೆ ಮತ್ತು ಕರ್ನಾಟಕ ಘನ ಸರ್ಕಾರ ರೈತರ ಸಾಲವನ್ನು ಸಂಪೂರ್ಣವಾಗಿ
ಮನ್ನಾ ಮಾಡಬೇಕು, ಭದ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಯೋಜನೆಗಳ ಮೂಲಕ ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

 

(Visited 37 times, 1 visits today)

Related posts

Leave a Comment