ಬೈಕ್ ತೊಳೆಯಲು ಹೋಗಿದ್ದ ಬಾಲಕರು ನೀರುಪಾಲು!!

ಶಿರಾ :

        ದೀಪಾವಳಿ ಹಬ್ಬದ ಪ್ರಯುಕ್ತ ಎಮ್ಮೆ ಮತ್ತು ಬೈಕ್ ತೊಳೆಯಲು ಹೋಗಿದ್ದ ಯಲಪೇನಹಳ್ಳಿಯ ಯೋಗೇಶ್(15) ಮತ್ತು ಸಿದ್ದೇಶ್(11) ಎಂಬ ಬಾಲಕರು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

      ನಿನ್ನೆ ಕೆರೆಯಲ್ಲಿ ಎಮ್ಮೆಯ ಮೈ ತೊಳೆಯುವಾಗ, ಅದು ಇವರಿಬ್ಬರನ್ನು ಎಳೆದುಕೊಂಡು ಆಳವಿರುವ ಕಡೆಗೆ ಹೋಗಿದೆ. ಅದನ್ನು ದಡಕ್ಕೆ ಎಳೆದು ತರುವ ಪ್ರಯತ್ನವನ್ನು ಈ ಅಣ್ಣ-ತಮ್ಮಂದಿರು ಮಾಡಿದ್ದಾರೆ. ಆದರೆ ಆ ಪ್ರಯತ್ನ ಫಲಿಸಲಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

      ದೊಡ್ಡಪ್ಪ – ಚಿಕ್ಕಪ್ಪನ ಮಕ್ಕಳಾದ ಇವರನ್ನು ಕಳೆದುಕೊಂಡ ಕುಟುಂಬದ ಸದಸ್ಯರು ದುಃಖದ ಮಡುವಿನಲ್ಲಿ ಮುಳುಗಿದ್ದಾರೆ. ಪಟ್ಟನಾಯಕನಹಳ್ಳಿ ಪೆÇಲೀಸರು ಮಹಜರು ಕಾರ್ಯ ನಡೆಸುತ್ತಿದ್ದಾರೆ.

(Visited 6 times, 1 visits today)

Related posts

Leave a Comment