ತುಮಕೂರು:

      ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿಯೇ ವಿವಿಧ ಕಲಾ ಪ್ರಕಾರಗಳನ್ನು ಪರಿಚಯಿಸುವುದರಿಂದ ಭವಿಷ್ಯದಲ್ಲಿ ಉತ್ತಮ ಕಲಾ ಪ್ರತಿಭೆಗಳಾಗಿ ಹೊರಹೊಮ್ಮಲಿದ್ದಾರೆ ಎಂದು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಡಾ. ಲಕ್ಷ್ಮಣ್‍ದಾಸ್ ಅಭಿಪ್ರಾಯಪಟ್ಟರು.

      ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಶಿರಾ ತಾಲ್ಲೂಕು ಭೂವನಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಸಹಯೋಗದಲ್ಲಿ ವಸತಿ ಶಾಲೆಯಲ್ಲಿಂದು ಆಯೋಜಿಸಲಾಗಿದ್ದ “ಚಿಗುರು” ಸಾಂಸ್ಕøತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚಿಗುರು ಕಾರ್ಯಕ್ರಮವು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.

      ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪಿನಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿ ಕಲಾಭಿರುಚಿಯನ್ನು ಬೆಳೆಸಲು ಸರ್ಕಾರವು ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದು, ಮಕ್ಕಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

      ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ಆರ್.ರಾಜಕುಮಾರ್ ಮಾತನಾಡಿ, ಕಲೆಯ ವಿವಿಧ ಪ್ರಕಾರಗಳಾದ ಭರತನಾಟ್ಯ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತದಂತಹ ಶಾಸ್ತ್ರೀಯ ಕಲಾ ಪ್ರಕಾರಗಳೊಂದಿಗೆ ಜನಪದ ಪ್ರಕಾರಗಳ ಪ್ರದರ್ಶನವನ್ನು ಒಂದೇ ವೇದಿಕೆಯಲ್ಲಿ ಸವಿಯಲು ಅವಕಾಶ ಕಲ್ಪಿಸಿರುವುದು ಈ ಕಾರ್ಯಕ್ರಮದ ವೈಶಿಷ್ಟ್ಯ ಎಂದು ತಿಳಿಸಿದರು.

      ಈ ಸಂದರ್ಭದಲ್ಲಿ ವಸತಿ ಶಾಲೆಯ ಪ್ರಾಂಶುಪಾಲೆ ಜಿ.ಎನ್.ರೂಪಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಿ.ಮಂಜುನಾಥ, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಡಿ.ರಾಜಶೇಖರ್, ಮತ್ತಿತರರು ಉಪಸ್ಥಿತರಿದ್ದರು.

      ಕಾರ್ಯಕ್ರಮದಲ್ಲಿ ಬಿಜಾಪುರದ ವಿಕಲಚೇತನ ಕಲಾವಿದ ರೇವಣ್ಣ ಸಿದ್ಧ ಕುಲಾರಿ ಮತ್ತು ತಂಡದವರಿಂದ ಹಿಂದೂಸ್ಥಾನಿ ಗಾಯನ, ರೇವತಿ ನೃತ್ಯ ಕಲಾಮಂದಿರದ ಮಕ್ಕಳಿಂದ ಭರತನಾಟ್ಯ, ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ರಾಮನಗರ ಜಿಲ್ಲೆಯ ಆಪ್ಸಾ ಸುರಕ್ಷಾ ಸಂಸ್ಥೆಯ ಮಕ್ಕಳಿಂದ ಕಂಸಾಳೆ ಕಾರ್ಯಕ್ರಮ, ಎಂ.ರವಿ ಮತ್ತು ತಂಡದಿಂದ ಚಕ್ಕೆ ಭಜನೆ, ವಸತಿ ಶಾಲೆ ಮಕ್ಕಳಿಂದ ಜಾನಪದ ನೃತ್ಯ, ಕೋಲಾಟ ಪ್ರಕಾರಗಳು ಪ್ರದರ್ಶನಗೊಂಡವು.

(Visited 16 times, 1 visits today)