ಮನೆ ಬಾಡಿಗೆ ಕೇಳಿದ ಮಾಲೀಕನಿಗೆ ಅವಾಸ್‌‌ ಹಾಕಿದ ಸುನಾಮಿ ಕಿಟ್ಟಿ

ಬೆಂಗಳೂರು: 

      ಸುನಾಮಿ ಕಿಟ್ಟಿಯ ಕಿರಿಕ್‌ಗಳು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಕಿಡ್ನಾಪ್ ಆಯ್ತು, ಒರೆಯಾನ್ ಮಾಲ್ ಗಲಾಟೆಯಾಯ್ತು, ಇದೀಗ ಮನೆ ಬಾಡಿಗೆ ವಿಚಾರಕ್ಕೆ ಮನೆ ಮಾಲೀಕನಿಗೆ ಕಿಟ್ಟಿ ಆವಾಜ್ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

      4 ತಿಂಗಳ ಮನೆ ಬಾಡಿಗೆ ಕೇಳಿದಕ್ಕೆೆ, ಕಿಟ್ಟಿ ಮನೆ ಮಾಲೀಕನಿಗೆ ಆವಾಜ್ ಹಾಕಿದ್ದಾರೆ ಎನ್ನಲಾಗಿದ್ದು, ಮನೆ ಮಾಲೀಕ ಶಿವಣ್ಣ ಎಂಬುವವರು ಕಿಟ್ಟಿ ವಿರುದ್ಧ ಮಹಾಲಕ್ಷೀ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ₹88 ಸಾವಿರ ಬಾಡಿಗೆ ಕೊಡದೇ ಕಿಟ್ಟಿ ಸತಾಯಿಸುತ್ತಿದ್ದಾರೆ ಎಂದು ಮನೆ ಮಾಲೀಕ ಶಿವಣ್ಣ ಆರೋಪಿಸಿದ್ದಾರೆ.

      ಶಂಕರಮಠದ ಮನೆಯೊಂದರಲ್ಲಿ ಬಾಡಿಗೆಗೆ ವಾಸವಿರೋ ಸುನಾಮಿ ಕಿಟ್ಟಿ, ತಿಂಗಳಿಗೆ ₹22 ಸಾವಿರ ಬಾಡಿಗೆ ನೀಡಬೇಕು. ಆದರೆ 4 ತಿಂಗಳಿಂದ ಮನೆ ಬಾಡಿಗೆ ಕಟ್ಟದೇ ಮಾಲೀಕ ಶಿವಣ್ಣನನ್ನ ಸತಾಯಿಸುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಸುನಾಮಿ ಕಿಟ್ಟಿಯನ್ನ ಮಹಾಲಕ್ಷೀ ಲೇಔಟ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

 
(Visited 86 times, 1 visits today)

Related posts